Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಲಂಡನ್ ನಲ್ಲಿ ಚುನಾವಣೆಯ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ
Fact
ಅಶುರಾ ದಿನ ಎಂದು ಕರೆಯುವ ಧಾರ್ಮಿಕ ಆಚರಣೆಯ ಪಾದಯಾತ್ರೆಯ ವೀಡಿಯೋ ಇದಾಗಿದೆ. ಮುಸ್ಲಿಮರು ಬೀದಿಗೆ ಇಳಿದಿದ್ದಾರೆ ಎಂದು ಹೇಳಿಕೊಳ್ಳಲು ತಪ್ಪಾಗಿ ಈ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.
ಲಂಡನ್ ನಲ್ಲಿ ಚುನಾವಣೆಯ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶನ ತೋರಿಸುತ್ತಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋದೊಂದಿಗೆ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ಒಂದರಲ್ಲಿ, “ಲಂಡನ್ ನಲ್ಲಿ ನೀವು ಗಮನಿಸಿದ್ದೀರಾ? ಚುನಾವಣೆಯ ನಂತರ ಮುಸ್ಲಿಮರು ಬೀದಿಗಿಳಿದು ತಮ್ಮ ಶಕ್ತಿ ಪ್ರದರ್ಶಿಸಲು ಪ್ರಾರಂಭಿಸಿದ್ದಾರೆ” ಎಂದಿದೆ.
Also Read ಅಂಬಾನಿ ಮನೆ ಆಂಟಿಲಿಯಾ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದ ವೀಡಿಯೋ ನಿಜವಾದ್ದೇ?

ಈ ವೀಡಿಯೋದ ಬಗ್ಗೆ ನಾವು ಸತ್ಯಶೋಧನೆಯನ್ನುನಡೆಸಿದ್ದು, ಇದು ತಪ್ಪು ಹೇಳಿಕೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇದೇ ರೀತಿಯ ವೀಡಿಯೋಗಳನ್ನು ಬೇರೆ ಬೇರೆ ದಿನಾಂಕಗಳಂದು ಎಕ್ಸ್ ನಲ್ಲಿ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ಆ ಪೋಸ್ಟ್ ಗಳಲ್ಲಿ ಸಾಮಾನ್ಯವಾಗಿದ್ದ “Yer Londra Şeriatla yönetilen” ಎಂಬ ಪದವನ್ನು ತೆಗೆದು ನಾವು ಎಕ್ಸ್ ನಲ್ಲಿ ಸರ್ಚ್ ಮಾಡಿದ್ದು, ಒಂದೇ ತೆರನಾದ ವೀಡಿಯೋ ಲಭ್ಯವಾಗಿದೆ ಮತ್ತು ಅದು ವೈರಲ್ ವೀಡಿಯೋಕ್ಕೆ ಹೋಲಿಕೆಯಾಗುತ್ತಿರುವುದನ್ನು ಗಮನಿಸಿದ್ದೇವೆ.

ಬಳಿಕ ಹೆಚ್ಚಿನ ಶೋಧ ನಡೆಸಿದಾಗ, ಇಂತಹುದೇ ವೀಡಿಯೋದ ಕ್ಲಿಪ್ಪಿಂಗ್ಗಳು ನಮಗೆ ಲಭ್ಯವಾಗಿದೆ. ಈ ಫಲಿತಾಂಶದ ಪ್ರಕಾರ, ಇದು ಲಂಡನ್ ನಲ್ಲಿ ನಡೆದ ಅಶುರಾ ದಿನದ ವೀಡಿಯೋ ಎಂದು ಗೊತ್ತಾಗಿದೆ. ಆಗಸ್ಟ್ 10, 2022ರ ಮೈ ಲಂಡನ್ ವರದಿಯಲ್ಲಿ, ಸಾವಿರಾರು ಮಂದಿ ಮುಸ್ಲಿಮರು ಅಶುರಾ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡರು ಎಂದು ವರದಿಯಲ್ಲಿದೆ.
Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

ಮೊಹರಂ ನಡೆದು 10ನೇ ದಿನವನ್ನು ಅಶುರಾ ದಿನ ಎಂದು ಆಚರಿಸಲಾಗುತ್ತದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅಲಿ ಅವರು ಈ ದಿನ ಕರ್ಬಲಾ ಯುದ್ಧದಲ್ಲಿ ಹುತಾತ್ಮರಾದರು ಎಂದು ಶಿಯಾ ಮುಸ್ಲಿಮರು ನಂಬುತ್ತಾರೆ. ಈ ಮೆರವಣಿಗೆಯ ಸಂದರ್ಭದಲ್ಲಿ ಎದೆಗೆ ಕೈಗಳನ್ನು ತಟ್ಟಿಕೊಂಡು ಹೋಗುತ್ತಾರೆ. ಈ ಆಚರಣೆಯು ವರ್ಷವೂ ನಡೆಯುತ್ತಿದ್ದು ಇದರ ಕುರಿತ ವೀಡಿಯೋವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ವೀಡಿಯೋದ ಕೀಫ್ರೇಂಗಳನ್ನು ತೆಗೆದು ವೈರಲ್ ವೀಡಿಯೋಕ್ಕೆ ಹೋಲಿಕೆ ಮಾಡಿದಾಗ ಸಾಮ್ಯತೆ ಇರುವುದು, ಜನರು ಎದೆಗೆ ಕೈಯನ್ನು ತಟ್ಟಿಕೊಂಡು ಹೋಗುವುದು, ಹಿಡಿದುಕೊಂಡಿರುವ ಧ್ವಜದ ಮಾದರಿ ಒಂದೇ ರೀತಿ ಕಂಡುಬಂದಿದೆ. ಇವುಗಳನ್ನು ಈ ಕೆಳಗೆ ನೋಡಬಹುದು. ಆದಾಗ್ಯೂ ನಿರ್ದಿಷ್ಟವಾಗಿ ವೈರಲ್ ವೀಡಿಯೋ ಯಾವ ದಿನಾಂಕದ್ದು ಎಂದು ಗುರುತಿಸಲು ನಮಗೆ ಸಾಧ್ಯವಾಗಲಿಲ್ಲ.




ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಚುನಾವಣೆ ಬಳಿಕ ಲಂಡನ್ ನಲ್ಲಿ ಮುಸ್ಲಿಮರು ರಸ್ತೆಗೆ ಇಳಿದಿದ್ದಾರೆ ಎಂಬ ಹೇಳಿಕೆ ತಪ್ಪಾಗಿದ್ದು, ಈ ವೀಡಿಯೋ ಅಶುರಾ ದಿನಕ್ಕೆ ಸಂಬಂಧಿಸಿದ್ದಾಗಿದೆ.
Also Read: ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಸ್ಪಷ್ಟನೆಯ ವೀಡಿಯೋ ಹಳೇದು
Our Sources
Report By My London, Dated: August 10, 2022
YouTube Video By Urban Pictures UK, Dated: August 30, 2020
YouTube Video By Imam Hussein TV 3, Dated: Aug 2, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 4, 2025
Ishwarachandra B G
October 18, 2025
Runjay Kumar
October 13, 2025