Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

ಎಎಪಿ, ಇಡಿ ದಾಳಿ, ನಗದು,

Claim
ಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳು

Fact
ಇದು ಗುಜರಾತ್ ನ ಸೂರತ್ ನಲ್ಲಿ ಆಪ್‌ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ. ಕೋಲ್ಕತಾದಲ್ಲಿ ಮೊಬೈಲ್‌ ಗೇಮಿಂಗ್ ಆಪ್‌ ಪ್ರವರ್ತಕರೊಬ್ಬರ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕಿದ ನಗದು ಹಣವಾಗಿದೆ

ವ್ಯಕ್ತಿಗಳು ನೋಟಿನ ರಾಶಿಯ ಮಧ್ಯೆ ಕೂತು ನೋಟುಗಳನ್ನು ಎಣಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಾಟ್ಸಾಪ್‌ನಲ್ಲಿ ಕಂಡುಬಂದಿರುವ ಈ ವೀಡಿಯೋದೊಂದಿಗೆ ಹೇಳಿಕೆಯಿದ್ದು, ಅದರಲ್ಲಿ “ಗುಜರಾತಿನ ಸೂರತನಲ್ಲಿ ದೇಶದ ಅತ್ಯಂತ ಪ್ರಾಮಾಣಿಕ ರಾಜಕೀಯ ಪಕ್ಷವಾದ ಆಮ್ ಆದ್ಮಿ ಪಾರ್ಟಿಯ ನೇತಾರ ಶೇಖರ್ ಅಗ್ರವಾಲ್ ಮನೆಯ ಮೇಲೆ ನಡೆದ ಇಡಿ ದಾಳಿಯಲ್ಲಿ ಸಿಕ್ಕ ನೋಟುಗಳನ್ನು ಅಳೆಯುತ್ತಿರುವ ಇಡಿ ಸಿಬ್ಬಂದಿ” ಎಂದು ಹೇಳಲಾಗಿದೆ.

Also Read: ವೃಕ್ಷಮಾತೆ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರು ಇನ್ನಿಲ್ಲ ಎನ್ನುವ ಪೋಸ್ಟ್ ಗಳು ಸುಳ್ಳು!

Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

ಈ ಬಗ್ಗೆ ಸತ್ಯಶೋಧನೆಗೆ ಬಳಕೆದಾರರೊಬ್ಬರು ನ್ಯೂಸ್ ಚೆಕರ್ ಗೆ ವಿನಂತಿಸಿಕೊಂಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಸತ್ಯಶೋಧನೆ ವೇಳೆ ಈ ವೀಡಿಯೋ, ಗುಜರಾತ್ ನದ್ದಲ್ಲ, ಇದು ಕೋಲ್ಕತಾದ್ದಾಗಿದ್ದು, ಬೇರೆ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ.

ಈ ವೇಳೆ ನಮಗೆ ಒಂದು ವರ್ಷ ಹಿಂದಿನ ದೈನಿಕ್‌ ಭಾಸ್ಕರ್ ವರದಿ ಲಭ್ಯವಾಗಿದೆ. ಇದರ ಪ್ರಕಾರ, “ ಬಹುಮಾನದ ಆಮಿಷವೊಡ್ಡಿ ವಂಚಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಲ್ಕತಾದಲ್ಲಿ ಮೊಬೈಲ್‌ ಗೇಮಿಂಗ್‌ ನಿರ್ವಾಹಕನೊಬ್ಬನ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ₹17 ಕೋಟಿಗಳನ್ನು ವಶಪಡಿಸಿಕೊಂಡಿದೆ” ಎಂದಿದೆ. ಈ ವರದಿಯಲ್ಲಿ ಹಾಕಲಾದ ಫೋಟೋವೊಂದು ವೈರಲ್‌ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನೂ ನಾವು ಈ ವೇಳೆ ಗುರುತಿಸಿದ್ದೇವೆ.

Fact check: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಸಿಕ್ಕ ನೋಟುಗಳು ಎಂದ ವೈರಲ್‌ ವೀಡಿಯೋ ನಿಜವೇ?

ಈ ವರದಿಯನ್ನು ಸಾಕ್ಷ್ಯವಾಗಿರಿಸಿ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಹಲವು ವರದಿಗಳು ಲಭ್ಯವಾಗಿವೆ.

ಸೆಪ್ಟೆಂಬರ್ 11, 2022ರಂದು ಟೈಮ್ಸ್‌ ನೌ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋಕ್ಕೆ “Kolkata: ED Seized 17 Crore Cash In Raid On Businessman Linked To Gaming App Scam” ಶೀರ್ಷಿಕೆ ಕೊಡಲಾಗಿದೆ. ವೀಡೀಯೋದ ವಿವರಣೆಯಲ್ಲಿ, ಕೋಲ್ಕತಾದಲ್ಲಿ ಗೇಮಿಂಗ್‌ ಕಂಪೆನಿಯೊಂದರ ವಿರುದ್ಧ ಜಾರಿ ನಿರ್ದೇಶನಾಲಯ ಆರು ಕಡೆಗಳಲ್ಲಿ ದಾಳಿ ನಡೆಸಿದ್ದು, ₹17 ಕೋಟಿಗಳಿಗೂ ಮಿಕ್ಕಿ ಹವಾಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ. “ಇ-ನಗ್ಗೆಟ್ಸ್” ಆಪ್‌ನ ಪ್ರವರ್ತಕ ಅಮೀಕ್‌ ಖಾನ್‌ ಮತ್ತಿತರರ ವಿರುದ್ಧ ಈ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ” ಎಂದು ಇದರಲ್ಲಿದೆ.

Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?

ಈ ವೀಡಿಯೋದಲ್ಲಿಯೂ ನಾವು ವೈರಲ್ ವೀಡಿಯೋವನ್ನು ಹೋಲುವ ದೃಶ್ಯಗಳನ್ನು ಗಮನಿಸಿದ್ದೇವೆ.

ಸೆಪ್ಟೆಂಬರ್ 11, 2022ರಂದು ಟೈಮ್ಸ್ ಆಫ್‌ ಇಂಡಿಯಾ ವರದಿಯಲ್ಲಿ “ಕೋಲ್ಕತಾ ಗೇಮಿಂಗ್‌ ನಿರ್ವಾಹಕನ ವಿರುದ್ಧ ಇಡಿ ದಾಳಿ, ₹17 ಕೋಟಿ ನಗದು ವಶ” ಎಂದಿದೆ. ಈ ವರದಿಯೊಂದಿಗೆ ಕೊಡಲಾಗಿರುವ ವೀಡಿಯೋ ಕೂಡ ವೈರಲ್‌ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.

ಇದೇ ರೀತಿಯ ವರದಿಗಳನ್ನು ನಾವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಿದ್ದೇವೆ.

Also Read: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?

Conclusion

ಈ ಸತ್ಯಶೋಧನೆಯ ಪ್ರಕಾರ, ಈ ವೀಡಿಯೋ, ಕೋಲ್ಕತಾದಲ್ಲಿ ಜಾರಿ ನಿರ್ದೇಶನಾಲಯ ಮಾಡಿದ ದಾಳಿಯ ಕುರಿತಾಗಿದ್ದು, ಇದು ಗೇಮಿಂಗ್‌ ಆಪ್‌ ಪ್ರವರ್ತಕರೊಬ್ಬರ ವಿರುದ್ಧ ಮಾಡಿದ ದಾಳಿಯಾಗಿದೆ ಮತ್ತು ಈ ವೇಳೆ ₹17 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಗುಜರಾತ್,. ಸೂರತ್ ನ ಆಪ್‌ ಪಕ್ಷದ ನಾಯಕ ಶೇಖರ್ ಅಗ್ರವಾಲ್ ಮನೆಯ ಮೇಲೆ ನಡೆದ ಇಡಿ ದಾಳಿಯಲ್ಲಿ ಸಿಕ್ಕ ನೋಟುಗಳನ್ನು ಅಳೆಯುತ್ತಿರುವ ಸಿಬ್ಬಂದಿ ಎಂದು ಹೇಳಿರುವುದು ಸುಳ್ಳಾಗಿದೆ.

Result: False

Our Sources:

Report By Dainik Bhaskar, Dated: September 11, 2023

Report By Times of Indian, Dated: September 11, 2023

YouTube Video By Times Now, Dated: September 11, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.