Fact Check: ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಮೊಳೆ, ಕ್ಯಾಪ್ಸೂಲ್‌, ಜೆಹಾದ್‌

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಮೊಳೆಗಳಿರುವ ಕ್ಯಾಪ್ಸೂಲ್‌ಗಳ ಮೂಲಕ ಹೊಸ ಜಿಹಾದ್‌ ಶುರುವಾಗಿದೆ

Fact
ಈ ವೀಡಿಯೋ ಭಾರತದ್ದಲ್ಲ. ವೈರಲ್‌ ವೀಡಿಯೋದಲ್ಲಿ ತೋರಿಸಲಾಗಿರುವ ಕ್ಯಾಪ್ಸೂಲ್‌ಗಳು ಪಾಕಿಸ್ಥಾನ ಮತ್ತು ರಷ್ಯಾದ್ದು

ಕ್ಯಾಪ್ಸೂಲ್‌ಗಳಲ್ಲಿ ಮೊಳೆಗಳಿವೆ ಎಂಬ ವೈರಲ್‌ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವೀಡಿಯೋದಲ್ಲಿ ಒಬ್ಬ ಔಷಧದ ಪ್ಯಾಕೆಟ್ ತೆರೆದು ಅನಂತರ ಕ್ಯಾಪ್ಸೂಲ್‌ ಹೊರತೆಗೆದು ಅದೊರಳಗೆ ಮೊಳೆ ಇರುವುದನ್ನು ತೋರಿಸುತ್ತಾನೆ. ಇನ್ನೊಂದು ಪ್ಯಾಕೆಟ್‌ ಕ್ಯಾಪ್ಸೂಲ್‌ನಲ್ಲೂ ಮೊಳೆಗಳಿರುವುದನ್ನು ತೋರಿಸಲಾಗುತ್ತದೆ.

ವಾಟ್ಸಾಪ್‌ನಲ್ಲಿ ಹರಿದಾಡಿದ ಈ ವಿಡಿಯೋದೊಂದಿಗೆ ಇರುವ ಹೇಳಿಕೆಯಲ್ಲಿ “ಕ್ಯಾಪ್ಸುಲ್ ಅನ್ನು ನುಂಗುವ ಮೊದಲು ಎಲ್ಲಾ ಸಹೋದರರು ಮ್ಯಾಗ್ನೆಟ್ನೊಂದಿಗೆ ಪರೀಕ್ಷಿಸಬೇಕು.. ಹೊಸ ಜಿಹಾದ್ ಶುರುವಾಗಿದೆ” ಎಂದು ಹೇಳಲಾಗಿದೆ.

Also Read: ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್

ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Fact Check/Verification

ಈ ವೀಡಿಯೋದ ಸತ್ಯಶೋಧನೆಗಾಗಿ ವೀಡಿಯೋವನ್ನು ಎಚ್ಚರಿಕೆಯಿಂದ ವೀಕ್ಷಿಸಿದ್ದು, ಎರಡು ವೀಡಿಯೋಗಳನ್ನು ಸೇರಿಸಿ ಇದನ್ನು ಮಾಡಿರುವುದು ತಿಳಿದುಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಕ್ಯಾಪ್ಸೂಲ್‌ ಪ್ಯಾಕ್‌ನಲ್ಲಿ ಉರ್ದುವಿನಲ್ಲಿ ಬರೆದಿರುವುದು ಕಂಡುಬಂದಿದೆ. ಜೊತೆಗೆ ಇಸೋರಲ್‌ ಎಂದಿದೆ.

ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಅದರಂತೆ ಕ್ಯಾಪ್ಸೂಲ್‌ ಹೆಸರು ಹಾಕಿ ಸರ್ಚ್ ಮಾಡಲಾಗಿದ್ದು, ಇದು ಪಾಕಿಸ್ಥಾನದಲ್ಲಿ ಉತ್ಪಾದನೆಯಾಗುತ್ತಿರುವ ಕ್ಯಾಪ್ಸೂಲ್‌ ಎಂದು ತಿಳಿದುಬಂದಿದೆ. ಪಾಕಿಸ್ಥಾನದ ಕರಾಚಿಯ ಸಿಟಿ ಫಾರ್ಮಾ ಕಂಪೆನಿ ಈ ಮಾತ್ರೆಗಳನ್ನು ತಯಾರಿಸುತ್ತಿದೆ.

Also Read: ಕಾಂಗ್ರೆಸ್‌ ಸರ್ಕಾರದ ‘ಉಚಿತ ವಿದ್ಯುತ್‌’ ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?
ಪಾಕಿಸ್ಥಾನದಲ್ಲಿ ತಯಾರಾಗುವ ಇಸೋರಲ್‌ ಕ್ಯಾಪ್ಸೂಲ್‌

ಇದೇ ರೀತಿ ಬಾಂಗ್ಲಾದೇಶದ ಎಸ್ಕೇಯಫ್‌ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಕಂಪೆನಿಯೂ ಇದೇ ರೀತಿಯ ಕ್ಯಾಪ್ಸೂಲ್‌ ತಯಾರಿಸುತ್ತಿದೆ. ಇದರ ಪ್ಯಾಕೇಜ್‌ ಭಿನ್ನವಾಗಿದೆ.

ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?
ಬಾಂಗ್ಲಾದ ಎಸ್ಕೇಯಫ್‌ ಕಂಪೆನಿ ತಯಾರಿಸುವ ಕ್ಯಾಪ್ಸೂಲ್‌

ಈ ಶೋಧನೆ ವೇಳೆ ಒಂದೇ ಹೆಸರಲ್ಲಿ ಎರಡು ಕಂಪೆನಿಗಳು ಕ್ಯಾಪ್ಸೂಲ್‌ ತಯಾರಿಸುತ್ತಿರುವುದು ಕಂಡುಬಂದಿದೆ. ಆದರೆ ಪಾಕಿಸ್ಥಾನದ ಸಿಟಿ ಫಾರ್ಮಾ ಕಂಪೆನಿ ತಯಾರಿಸುತ್ತಿರುವ ಕ್ಯಾಪ್ಸೂಲ್‌ನ ಪ್ಯಾಕ್‌ಗೆ ವೈರಲ್‌ ವೀಡಿಯೋದಲ್ಲಿ ತೋರಿಸುತ್ತಿರುವ ಕ್ಯಾಪ್ಸೂಲ್‌ಗೆ ಸಾಮ್ಯತೆ ಇರುವುದು ಕಂಡುಬಂದಿದೆ. ಇದರೊಂದಿಗೆ ಬಾಂಗ್ಲಾ ಕಂಪೆನಿಯ ಇಸೋರಲ್‌ ಕ್ಯಾಪ್ಸೂಲ್‌ನ ಪ್ಯಾಕೇಜ್‌ ಭಿನ್ನವಾಗಿರುವುದು ಕಂಡುಬಂದಿದೆ.

ಇನ್ನೊಂದು ಕ್ಯಾಪ್ಸೂಲ್‌ ರಷ್ಯಾದ್ದು!

ಎರಡನೇ ವೀಡಿಯೋದ ಬಗ್ಗೆ ನಾವು ಕೀವರ್ಡ್‌ ಸರ್ಚ್‌ ನಡೆಸಿದ್ದು, ಈ ವೇಳೆ ಯೂಟ್ಯೂಬ್‌ನಲ್ಲಿ ಈ ವೀಡಿಯೋ ಲಭ್ಯವಾಗಿದೆ.

ಯೂಟ್ಯೂಬ್‌ನಲ್ಲಿ ಲಭ್ಯವಾದ ವೀಡಿಯೋ

FirstNigeriaTV ಚಾನೆಲ್‌ನಲ್ಲಿ ಶಾರ್ಟ್‌ ವೀಡಿಯೋದಲ್ಲಿ ಫೆಬ್ರವರಿ 18, 2021ರಂದು ಅಪ್ಲೋಡ್ ಮಾಡಿದ್ದು, ಇದರಲ್ಲಿ ಹಿನ್ನಲೆ ಧ್ವನಿ ರಷ್ಯನ್ ಆಗಿದೆ. ಜೊತೆಗೆ ಕ್ಯಾಪ್ಸೂಲ್‌ ಹೆಸರು ರಷ್ಯನ್‌ ಭಾಷೆಯಲ್ಲಿರುವುದು ಗೊತ್ತಾಗಿದೆ.

ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಗೂಗಲ್‌ ಲೆನ್ಸ್ ಮೂಲಕ ಇದರ ಹೆಸರು ಶೋಧಿಸಲಾಗಿದ್ದು ಇದು ‘BOSKALLJEN’ ಎಂದಾಗಿದೆ. ಗೂಗಲ್‌ ಭಾಷಾಂತರ ವೇಳೆ ಇದು Entofuril 200 mg capsule Nifurkazil Boskalgen ಎಂಬ ಕ್ಯಾಪ್ಸೂಲ್‌ ಎಂದು ತಿಳಿದುಬಂದಿದೆ. ಇದರ ಉತ್ಪಾದಕ ಕಂಪೆನಿಯನ್ನು ಹುಡುಕಿದಾಗ ಅದು Bosnia and Herzegovina ಎಂದು ತಿಳಿದುಬಂದಿದೆ. ಈ ಕಂಪೆನಿ ಯುಗೋಸ್ಲಾವಿಯಾದಲ್ಲಿ ಸ್ಥಾಪನೆಯಾಗಿದ್ದು, ಯುರೋಪ್‌ನ ವಿವಿಧೆಡೆ ಉತ್ಪಾದನೆಯನ್ನು ಹೊಂದಿದೆ.

Also Read: ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ “ಹೇಳಿದಂತೆ ಕೇಳಬೇಕು” ಎಂದು ಶಾಸಕರು ಪೊಲೀಸರಿಗೆ ತಾಕೀತು ಮಾಡಿದ್ದಾರೆಯೇ?

Conclusion

ಈ ಸತ್ಯಶೋಧನೆಯ ಪ್ರಕಾರ, ವೈರಲ್‌ ವೀಡಿಯೋ ಎರಡು ಪ್ರತ್ಯೇಕವಾದದ್ದಾಗಿದ್ದು, ಇದನ್ನು ಸೇರಿಸಲಾಗಿದೆ. ಜೊತೆಗೆ, ಈ ವೀಡಿಯೋ ಭಾರತದ್ದಲ್ಲ. ಅದು ಪಾಕಿಸ್ಥಾನ ಮತ್ತು ರಷ್ಯಾ ಮೂಲದ್ದಾಗಿರಬಹುದು. ಆದರೆ ಸತ್ಯಶೋಧನೆ ವೇಳೆ ಈ  ನಿಜವಾಗಿಯೂ ಎಲ್ಲಿಂದ ಬಂದಿದೆ ಎಂದು ನಾವು ಸ್ವತಂತ್ರವಾಗಿ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

Result: False

Our Sources
Website of City Pharmaceutical Pakistan

YouTube Video By FirstNigeriaTV, Dated: February 18, 2021

Website of Vidal.ru


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.