Fact Check: ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್

ತಿರುಚಿದ ಚಿತ್ರ

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon

Claim
ದೆಹಲಿ ಪೊಲೀಸರು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ವಶಕ್ಕೆ ಪಡೆದ ನಂತರ ಪೊಲೀಸ್ ವ್ಯಾನ್ ಒಳಗೆ ನಗುತ್ತಿದ್ದರು

Fact
ವಿನೇಶ್‌ ಫೋಗಟ್‌ ಮತ್ತು ಸಂಗೀತಾ ಫೋಗಟ್‌ ಅವರ ಫೋಟೋವನ್ನು ಅಪ್ಲಿಕೇಶನ್‌ ಬಳಸಿ ಎಡಿಟ್‌ ಮಾಡಲಾಗಿದೆ

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಬಂಧನಕ್ಕೊಳಗಾದ ನಂತರ ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದಿದ್ದನ್ನು ತೋರಿಸುವ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳ ಬಂಧನ

ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವಾರು ಖ್ಯಾತ ಕುಸ್ತಿಪಟುಗಳು ಮೇ 28 ರಂದು ಯೋಜಿತ ಮಹಿಳಾ ‘ಮಹಾಪಂಚಾಯತ್’ ಗಾಗಿ ಹೊಸ ಸಂಸತ್ ಕಟ್ಟಡದ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಭದ್ರತಾ ಚೌಕಟ್ಟನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಪೊಲೀಸರು ಹಲ್ಲೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Also Read: ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ, ಈ ಫೋಟೋ ನಿಜವೇ?

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ ನಲ್ಲಿ ಸುಮಾರು 35 ದಿನಗಳಿಂದ ತಾತ್ಕಾಲಿಕ ವಸತಿಗಳಲ್ಲಿ ವಾಸಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದ ಸ್ಥಳದಿಂದ 3 ಕಿ.ಮೀ ದೂರದಲ್ಲಿರುವ ಜಂತರ್ ಮಂತರ್ ನಲ್ಲಿರುವ ಈ ಪ್ರತಿಭಟನಾ ಸ್ಥಳವನ್ನು ದೆಹಲಿ ಪೊಲೀಸರು ತೆರವುಗೊಳಿಸಿದ್ದಾರೆ. ಈ ವೇಳೆ ಕುಸ್ತಿಪಟುಗಳನ್ನು ವಶಕ್ಕೆ ಪಡೆಯಲಾಗಿತ್ತು.

Fact Check/ Verification

ನ್ಯೂಸ್‌ ಚೆಕರ್‌ ಮೊದಲು ಕೀವರ್ಡ್  ಸರ್ಚ್ ನಡೆಸಿದ್ದು, ಇದು ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ವಾಹನದಲ್ಲಿ ನಗುತ್ತಿರುವ ತಿರುಚಿದ ಫೋಟೋ ಟ್ವಿಟರ್ ನಲ್ಲಿ ಕಾಣಿಸಿಕೊಂಡಿದೆ ಎನ್ನುವ ಅನೇಕ ವರದಿಗಳನ್ನು ತೋರಿಸಿದೆ. ಇಂತಹ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ವರದಿಗಳನ್ನು ಗಮನಿಸಿದ ಬಳಿಕ ನಾವು ಟ್ವೀಟ್‌ನಲ್ಲಿ ಶೋಧ ನಡೆಸಿದ್ದು, ಬಜರಂಗ್‌ ಪುನಿಯಾ ಅವರು ಮೇ 28, 2023 ರಂದು ಬಜರಂಗ್ ಪುನಿಯಾ ಮಾಡಿದ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ ಅವರು, “ಐಟಿ ಸೆಲ್ ಜನರು ಈ ಸುಳ್ಳು ಚಿತ್ರವನ್ನು ಹರಡುತ್ತಿದ್ದಾರೆ. ಈ ನಕಲಿ ಚಿತ್ರವನ್ನು ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುವುದು” ಎಂದು ಅವರು ಹೇಳಿದ್ದಾರೆ. ಜೊತೆಗೆ ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ನಗದೇ ಇರುವ ಎರಡು ಫೋಟೋಗಳನ್ನು ಪುನಿಯಾ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ನಲ್ಲಿ ನಡೆದ ಕೀವರ್ಡ್‌ ಹುಡುಕಾಟದ ವೇಳೆ ಮೇ 28, 2023 ರಂದು @RizviUzair ಅವರು ಎಐ ಅಪ್ಲಿಕೇಶನ್ ಬಳಸಿ ಮುಖಗಳನ್ನು ಮಾಡಬಹುದು ಎಂಬುದರ ಟ್ಯುಟೋರಿಯಲ್‌ ಅನ್ನು ಹಂಚಿಕೊಂಡಿದ್ದಾರೆ.

Also Read: ಕಾಂಗ್ರೆಸ್‌ ಸರ್ಕಾರದ ‘ಉಚಿತ ವಿದ್ಯುತ್‌’ ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

“ಈ ಫೋಟೋದಲ್ಲಿ (ನಗದವರನ್ನು) ರುವ ಭಾರತೀಯ ಕುಸ್ತಿಪಟುಗಳು ಮತ್ತು ಇತರರು ಬಂಧನದಲ್ಲಿರುವಾಗ ನಗುತ್ತಿರುವಂತೆ ಕಾಣುವಂತೆ ಮಾಡಲು “ಫೇಸ್ಆ್ಯಪ್” ಅನ್ನು ಬಳಸಲಾಗಿದೆ.

ಮೂಲ ಫೋಟೋವನ್ನು ಪತ್ರಕರ್ತ ಮನ್ದೀಪ್ ಪುನಿಯಾ ಮೇ 28 ರಂದು ಟ್ವೀಟ್ ಮಾಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ.

ನಾವು ಫೇಸ್ ಆಪ್ ಬಳಸಿ ಮೂಲ ಫೋಟೋಕ್ಕೆ ಅದೇ ರೀತಿಯ ಫೀಚರ್‌ಗಳನ್ನು ಅನ್ವಯಿಸಿದ್ದೇವೆ. ಈ ವೇಳೆ  ವೈರಲ್ ಫೋಟೋವನ್ನು (ಎಡ) ಫೇಸ್ಆ್ಯಪ್ ಬಳಸಿ ಮಾರ್ಪಡಿಸಿದ ಫೋಟೋದೊಂದಿಗೆ ಹೋಲಿಕೆ ಮಾಡಿದರೆ ಅದು ಅದೇ ರೀತಿಯ ಚಿತ್ರ ಎಂದು ದೃಢಪಡಿಸುತ್ತದೆ.

ದೆಹಲಿ ಪೊಲೀಸರು ಬಂಧಿಸಿದ ವೇಳೆ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್
ಫೇಸ್‌ಆಪ್‌ ಬಳಸಿ ತಿರುಚಿದ ಚಿತ್ರವನ್ನು ಇಲ್ಲಿ ನೋಡಬಹುದು.

ಇದಲ್ಲದೆ, ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರ ನಗುತ್ತಿರುವ ಫೋಟೋಗಳನ್ನು ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮತ್ತು ಸುದ್ದಿ ವರದಿಗಳಲ್ಲಿ ಗುರುತಿಸಲಾಗಿದ್ದು, ಇಬ್ಬರು ಕುಸ್ತಿಪಟುಗಳು ಇತರ ಚಿತ್ರಗಳಂತೆ ಗುಳಿಕೆನ್ನೆಗಳನ್ನು ಹೊಂದಿಲ್ಲದ ಕಾರಣ ಕಾರಣ ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಸಾಬೀತಾಗಿದೆ.

Also Read: ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

Conclusion

ಬಂಧನಕ್ಕೊಳಗಾದ ನಂತರ ಪೊಲೀಸ್ ವ್ಯಾನ್ ಒಳಗೆ ನಗುತ್ತಿರುವ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರ ವೈರಲ್ ಫೋಟೋ ಎಐ ಅಪ್ಲಿಕೇಶನ್ ಬಳಸಿ ತಿರುಚಲಾಗಿದೆ ಎಂದು ಕಂಡುಬಂದಿದೆ.

Result: Altered Media

Our Sources
Report By Mint report, Dated: May 29, 2023

Tweet By Mandeep Punia, Dated: May 28, 2023

Tweet By Uzair Rizvi, Dated: May 28, 2023

Images created using FaceApp

ಈ ಲೇಖನ ಮೂಲದಲ್ಲಿ ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿ ಓದಬಹುದು


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon