Fact Check: ಕಾಂಗ್ರೆಸ್‌ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಎಂದ ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಕಾಂಗ್ರೆಸ್‌, ಒಂದು ಲಕ್ಷ ರೂ. ಸರತಿ ಸಾಲು ಚುನಾವಣಾ ಆಶ್ವಾಸನೆ

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕಾಂಗ್ರೆಸ್‌ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಕಂಡುಬಂದಿದೆ

Fact
ವೈರಲ್ ವೀಡಿಯೊವು ಏಪ್ರಿಲ್ 2020 ರ ಸಮಯದ್ದಾಗಿದೆ. ಉತ್ತರಪ್ರದೇಶದಲ್ಲಿ ಜನ್ ಧನ್‌ ಖಾತೆಗಳ ಕುರಿತಾದ ವದಂತಿಯಿಂದ ಆತಂಕಿತರಾದ ಮಹಿಳೆಯರು ಹಣವನ್ನು ಹಿಂಪಡೆಯಲು ಸರದಿಯಲ್ಲಿ ನಿಂತಿರುವುದನ್ನು ಇದು ತೋರಿಸುತ್ತದೆ

ಕಾಂಗ್ರೆಸ್‌ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಕಂಡುಬಂದಿದೆ ಎಂದು ವೀಡಿಯೋ ಒಂದು ವೈರಲ್‌ ಆಗಿದೆ.

ಕಾಂಗ್ರೆಸ್‌ ಗ್ಯಾರೆಂಟಿ ಬಗ್ಗೆ ಅಪಹಾಸ್ಯ ಮಾಡುವಂತೆ ವಾಟ್ಸಾಪ್‌ ನಲ್ಲಿ ಈ ಮೆಸೇಜ್‌ ಹರಿದಾಡಿದೆ. ಇದರಲ್ಲಿ “ಒಂದು ಲಕ್ಷಕ್ಕೆ ಎಂತಾ ಕ್ಯೂ.. ಫಟಾಫಟ್ ಫಟಾಫಟ್ ಫಟಾಫಟ್” ಎಂದಿದೆ. ಈ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಗೆ (+919999499044) ಬಳಕೆದಾರರೊಬ್ಬರು ಮನವಿ ಮಾಡಿದ್ದು ಅದನ್ನು ಸ್ವೀಕರಿಸಲಾಗಿದೆ.  

Fact Check: ಕಾಂಗ್ರೆಸ್‌ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಎಂದ ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

2024ರ ಲೋಕಸಭೆ ಚುನಾವಣೆಗೆ ಮುನ್ನ, ಮಹಾಲಕ್ಷ್ಮಿ ಯೋಜನೆ ಸೇರಿದಂತೆ 25 ಖಾತರಿಗಳೊಂದಿಗೆ ಸುಮಾರು 80 ಮಿಲಿಯನ್ ಕುಟುಂಬಗಳನ್ನು ತಲುಪಲು ಕಾಂಗ್ರೆಸ್ ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮದ ಪ್ರಚಾರ ಮಾಡಿದೆ. ಇದು ಮನೆಯೊಡತಿಯ ಖಾತೆಗೆ ನೇರವಾಗಿ ತಿಂಗಳಿಗೆ ₹ 8,500 ನೀಡುವ ಭರವಸೆ ನೀಡುತ್ತದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಕಾಂಗ್ರೆಸ್‌ ಈ ಆಶ್ವಾಸನೆ ನೀಡಿತ್ತು. ಮತ್ತು ಇಂಡಿ ಬ್ಲಾಕ್‌ ಅಧಿಕಾರಕ್ಕೆ ಬಂದರೆ ಜನರ ಖಾತೆಗೆ ಹೇಗೆ ಹಣ ಹೋಗುತ್ತದೆ ಎಂಬುದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಚಾರ ಭಾಷಣದಲ್ಲಿ “ಖಟಾಖಟ್, ಖಟಾಖಟ್” ಎಂಬ ಪದವನ್ನು ಬಳಸಿದ್ದರು.

Fact Check/Verification

ಮಹಿಳೆಯರು ಮುಸುಕುಗಳನ್ನು ಹಾಕಿರುವುದು ಮತ್ತು ಸರದಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವುದನ್ನು ನ್ಯೂಸ್‌ಚೆಕರ್ ಗಮನಿಸಿದೆ. ಅಂದರೆ ಈ ಘಟನೆಯು ಕೋವಿಡ್ ಸಾಂಕ್ರಾಮಿಕ ಕಾಯಿಲೆಯ ಅವಧಿಯದ್ದಾಗಿರಬಹುದು ಎಂದು ಸೂಚಿಸುತ್ತದೆ.

ಆ ನಂತರ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಇದು ಏಪ್ರಿಲ್ 18, 2020 ರ ಈ ಯುಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು , “ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಬ್ಯಾಂಕ್ ಮುಂದೆ ಮುಸ್ಲಿಂ ಮಹಿಳೆಯರ ಸಾಲು” ಎಂಬ ಶೀರ್ಷಿಕೆಯಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಇದು 2024 ರ ಲೋಕಸಭಾ ಚುನಾವಣೆಗೆ ಹಿಂದಿನದ್ದಾಗಿದೆ.  

ಆ ಬಳಿಕ ನಾವು ಕೀವರ್ಡ ಸರ್ಚ್ ನಡೆಸಿದ್ದು ಏಪ್ರಿಲ್ 20, 2020 ರ ಈ ನ್ಯೂಸ್ 18 ಇಂಡಿಯಾ ವರದಿ ಲಭ್ಯವಾಗಿದೆ. ಮುಜಫರ್‌ನಗರದ ಬ್ಯಾಂಕ್‌ನ ಹೊರಗೆ ಜನಸಂದಣಿಯ ವೀಡಿಯೋ, ಜನ್ ಧನ್ ಖಾತೆಗಳಿಗೆ ಠೇವಣಿ ಮಾಡಿದ ₹500 ಅನ್ನು ಹಿಂಪಡೆಯಲಾಗುತ್ತದೆ ಎಂಬ ವದಂತಿಯ ನಂತರ ವೈರಲ್ ಆಗಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ಇನ್ನೂ ಹೆಚ್ಚಿನ ಹುಡುಕಾಟದ ವೇಳೆ ಹಲವಾರು ಸುದ್ದಿ ವರದಿಗಳು ಲಭ್ಯವಾಗಿವೆ. ಅವುಗಳನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಪ್ರಕರಣದಲ್ಲಿ ಕೇಂದ್ರ ವಿತ್ತ ಸಚಿವಾಲಯವು ಮಹಿಳಾ ಜನ್ ಧನ್ ಖಾತೆಗಳಿಗೆ ವರ್ಗಾಯಿಸಲಾದ ಹಣ ಸುರಕ್ಷಿತವಾಗಿದೆ ಮತ್ತು ಖಾತೆದಾರರು ಅದನ್ನು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು ಎಂದು ಸ್ಪಷ್ಟಪಡಿಸಿದೆ ಎಂದು ವದಂತಿಗಳನ್ನು ತಳ್ಳಿಹಾಕಿದೆ.

“ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಉಂಟಾದ ಕಷ್ಟಗಳನ್ನು ನಿಭಾಯಿಸಲು ಮುಂದಿನ ಮೂರು ತಿಂಗಳವರೆಗೆ 20.5 ಕೋಟಿ ಮಹಿಳಾ ಜನ್ ಧನ್ ಖಾತೆದಾರರು ತಮ್ಮ ಮನೆ ನಿರ್ವಹಣೆಗೆ ಮಾಸಿಕ ₹ 500 ಪಡೆಯುತ್ತಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಘೋಷಿಸಿದ್ದರು ಎಂದು News18, ದಿನಾಂಕ ಏಪ್ರಿಲ್ 14, 2020ರಂದು ವರದಿ ಮಾಡಿದೆ.

“ಖಾತೆಗಳಲ್ಲಿ ನಗದು ಠೇವಣಿಯ ನಂತರ ದೇಶಾದ್ಯಂತ ಬ್ಯಾಂಕ್‌ಗಳ ಹಲವಾರು ಶಾಖೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಹೆಚ್ಚಿನ ಸಂಖ್ಯೆಯ ಜನರು ಬ್ಯಾಂಕ್‌ಗಳಿಗೆ ತೆರಳಿದ್ದಾರೆ. ಏತನ್ಮಧ್ಯೆ ಹಣಕಾಸು ಸಚಿವಾಲಯ ಮತ್ತು ಎಸ್‌ಬಿಐ ಮುಂತಾದ ಸಂಸ್ಥೆಗಳು ಹಣವನ್ನು ತೆಗೆದುಕೊಳ್ಳದಿದ್ದರೆ ಸರ್ಕಾರವು ತೆಗೆದುಕೊಳ್ಳುತ್ತದೆ ಎಂಬ ವದಂತಿಗಳನ್ನು ನಂಬಬೇಡಿ ಎಂದು ಫಲಾನುಭವಿಗಳಿಗೆ ಕೇಳಿದೆ, ”ಎಂದು ಏಪ್ರಿಲ್ 22, 2020 ರ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯಲ್ಲಿದೆ.

ಮಹಾಲಕ್ಷ್ಮಿ ಯೋಜನೆ ಸುತ್ತಲಿನ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು, ಕೆಲವು ಮುಸ್ಲಿಂ ಮಹಿಳೆಯರು ಚುನಾವಣೆಯ ನಂತರ ಭರವಸೆ ನೀಡಿದ ಹಣವನ್ನು ಸ್ವೀಕರಿಸುತ್ತಾರೆ ಎಂದು ತಪ್ಪಾಗಿ ನಂಬಿದ್ದಾರೆ ಎಂದು ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ. “ನಾವು ಅಧಿಕಾರಕ್ಕೆ ಬಂದರೆ ಮಾತ್ರ ಆ ಹಣವನ್ನು ನೀಡಬಹುದು ಎಂದು ನಾವು ಅವರಿಗೆ ಹೇಳಿದ್ದೇವೆ. ನಾವು ಸರ್ಕಾರ ರಚಿಸಲು ವಿಫಲವಾಗಿರುವುದರಿಂದ ಕಾಂಗ್ರೆಸ್ ಯಾವುದೇ ಹಣಕಾಸಿನ ಬೆಂಬಲವನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು ಎಂದಿದೆ.

Conclusion

ಕಾಂಗ್ರೆಸ್ ಪಕ್ಷವು ನೀಡಿದ ಚುನಾವಣಾ ಆಶ್ವಾಸನೆಯಂತೆ ತಿಂಗಳಿಗೆ ₹ 8,500 ಪಡೆಯಲು ಮಹಿಳೆಯರು ಸರತಿಯಲ್ಲಿ ಕಾಯುತ್ತಿದ್ದಾರೆ ಎಂದು ಹೇಳಲಾದ ವೀಡಿಯೋ ನಿಜಕ್ಕೂ 2020ರ ಕೋವಿಡ್ ಸಮಯದ್ದಾಗಿದ್ದು, ತಪ್ಪು ಹೇಳಿಕೆಯೊಂದಿಗೆ ಅದನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. 

Result: False

Our Source
YouTube video, News18 India report, Dated: April 20, 2020

Report By Business standard, Dated: April 22, 2020

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.