Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕೇದಾರನಾಥ ಯಾತ್ರಿಗಳ ಮೇಲೆ ಕುದುರೆ, ಹೇಸರಗತ್ತೆಗಳ ಮುಸ್ಲಿಂ ನಿರ್ವಾಹಕರಿಂದ ಹಲ್ಲೆ
Fact
ಕೇದಾರನಾಥ ಯಾತ್ರಿಗಳ ಮೇಲೆ ಕುದುರೆ, ಹೇಸರಗತ್ತೆಗಳ ಮುಸ್ಲಿಂ ನಿರ್ವಾಹಕರಿಂದ ಹಲ್ಲೆ ಎನ್ನುವ ಹೇಳಿಕೆ ತಪ್ಪಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಿಂದೂಗಳಾಗಿದ್ದು ಅವರನ್ನು ಬಂಧಿಸಿದ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ
ಕೇದಾರನಾಥ ಯಾತ್ರಿಗಳ ಮೇಲೆ ಕುದುರೆ, ಹೇಸರಗತ್ತೆಗಳ ಮುಸ್ಲಿಂ ನಿರ್ವಾಹಕರಿಂದ ಹಲ್ಲೆ ಎಂಬ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ಅದ್ಭುತ ದಾದಾಗಿರಿ – ಕೇದಾರನಾಥ ಧಾಮಕ್ಕೆ ಹೋಗುವ ಯಾತ್ರಾರ್ಥಿಗಳನ್ನು ಥಳಿಸಿ ಅವಮಾನ ಮಾಡುವವರು – ಮುಸ್ಲಿಮರು ಯಾತ್ರಿಕರನ್ನು ಕುದುರೆ ಮತ್ತು ಹೇಸರಗತ್ತೆಗಳ ಮೇಲೆ ಕುಳಿತುಕೊಳ್ಳುವಂತೆ ಬಲವಂತವಾಗಿ ಒತ್ತಡ ಹೇರುತ್ತಿದ್ದಾರೆ, ಯಾತ್ರಿಕರು ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಹೆದರಿಸುತ್ತಾರೆ..” ಎಂದಿದೆ.
Also Read: ವಿಶಾಖಪಟ್ಟಣದ ಹಳೇ ವೀಡಿಯೋ ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಲಿಂಕ್!
ಈ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ತಪ್ಪಾದ ಹೇಳಿಕೆ ಎಂಬುದನ್ನು ಕಂಡುಕೊಂಡಿದೆ.
ಕೇದಾರದಲ್ಲಿ ಯಾತ್ರಾರ್ಥಿಗಳೊಂದಿಗೆ ಮುಸ್ಲಿಂ ಕುದುರೆ, ಹೇಸರಗತ್ತೆ ನಡೆಸುವವರು ಅನುಚಿತವಾಗಿ ವರ್ತಿಸಿದ್ದಾರ ಎಂಬ ಬಗ್ಗೆ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವರದಿಗಳು ಲಭ್ಯವಾಗಿವೆ.
ಜೂನ್ 13, 2023 ರಂದು ಈಟಿವಿ ಭಾರತ್ ಪ್ರಕಟಿಸಿದ ವರದಿ ಪ್ರಕಾರ, ರುದ್ರಪ್ರಯಾಗ ಪೊಲೀಸರು ಕೇದಾರ ಯಾತ್ರಿಗಳಿಗೆ ಥಳಿಸಿದ ಪ್ರಕರಣದಲ್ಲಿ ಅಂಕಿತ್ ಸಿಂಗ್, ಸಂತೋಷ್ ಕುಮಾರ್, ರೋಹಿತ್ ಕುಮಾರ್ ಮತ್ತು ಗೌತಮ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಇದಲ್ಲದೇ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕನ ಕೈವಾಡದ ಬಗ್ಗೆಯೂ ಪೊಲೀಸರು ಪ್ರತ್ಯೇಕ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಮಾಹಿತಿಯನ್ನು ಹಿಂದೂಸ್ತಾನ್ ಮತ್ತು ಸ್ಥಳೀಯ ಮಾಧ್ಯಮ ಸಂಸ್ಥೆ ರುದ್ರಪ್ರಯಾಗ್ ಪೋಸ್ಟ್ ಕೂಡ ಪ್ರಕಟಿಸಿದೆ.
ಇದರೊಂದಿಗೆ ಜೂನ್ 13, 2023ರಂದು ಉತ್ತರಾಖಂಡ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಂಡ ಪೋಸ್ಟ್ ಅನ್ನೂ ನಾವು ಗಮನಿಸಿದ್ದೇವೆ. ಅದರ ಪ್ರಕಾರ, ಯಾತ್ರಾರ್ಥಿಗಳನ್ನು ಥಳಿಸಿದ ಬಗ್ಗೆ ಕೊತ್ವಾಲಿ ಸೋನ್‌ಪ್ರಯಾಗದಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಅಂಕಿತ್ ಸಿಂಗ್, ಸಂತೋಷ್ ಕುಮಾರ್, ರೋಹಿತ್ ಕುಮಾರ್ ಮತ್ತು ಗೌತಮ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಅಪ್ರಾಪ್ತರ ವಿರುದ್ಧ ಪ್ರತ್ಯೇಕ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 13, 2023 ರಂದು ರುದ್ರಪ್ರಯಾಗ ಪೊಲೀಸರು ಶೇರ್ ಮಾಡಿರುವ ಎಕ್ಸ್ ಪೋಸ್ಟ್ ಅನ್ನೂ ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಪೊಲೀಸರು ತೆಗೆದುಕೊಂಡ ಕ್ರಮವನ್ನು ವಿವರಿಸಲಾಗಿದೆ.
ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಶಾಖ ಅಶೋಕ್ ಭಾದಾಡೆ ಅವರು ಈ ಪ್ರಕರಣದ ಕುರಿತಂತೆ ಹೇಳಿಕೆಯನ್ನು ನೀಡಿದ್ದು, ಅದು ಇಲ್ಲಿದೆ.
ಈ ಸಾಕ್ಷ್ಯಾಧಾರಗಳ ಪ್ರಕಾರ ಕೇದಾರನಾಥ ಯಾತ್ರಿಗಳ ಮೇಲೆ ಹಲ್ಲೆ ವಿಚಾರದಲ್ಲಿ ಹಂಚಿಕೊಳ್ಳುತ್ತಿರುವ ಹೇಳಿಕೆ ತಪ್ಪುದಾರಿಗೆಳೆಯುವಂಥಾದ್ದಾಗಿದೆ.
Also Read: ಪೊಲೀಸರು ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆ ಆರಂಭಿಸಿದ್ದಾರೆಯೇ, ವೈರಲ್ ಮೆಸೇಜ್ ಹಿಂದಿನ ಸತ್ಯ ಏನು?
Our Sources
Tweet shared by Uttarakhand Police, Dated: 13 June, 2023
Tweet shared by Rudraprayag Police, Dated: 13 June, 2023
Media reports
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Shaminder Singh
May 15, 2025
Ishwarachandra B G
April 16, 2025
Ishwarachandra B G
April 16, 2025