Authors
Claim
ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಮಾರಾಟ ಮಾಡುವ ಮುನ್ನ ಹಾಲಿನಲ್ಲಿ ಸ್ನಾನ ಮಾಡುತ್ತಾನೆ ಎಂಬಂತೆ ವೀಡಿಯೋದೊಂದಿಗೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಜಿಹಾದಿಗಳಮತ್ತೊಂದು ಕ್ರೂರ ಮುಖ. ಕೇರಳದ ಹಾಲಿನ ಡೈರಿ ಕಾರ್ಖಾನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ. ಇದೇ ಹಾಲನ್ನು ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಹಿಂದೂಗಳಿಗೆ ಮಾರಾಟ ಮಾಡಲಾಗುತ್ತಿದೆ…” ಎಂದಿದೆ.
Fact
ಸತ್ಯಶೋಧನೆಗಾಗಿ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಇದು ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ಒಂದು ಕೀಫ್ರೇಮ್ ಅನ್ನು ಕಂಡುಹಿಡಿದಿದೆ. ಇದು ಜೂನ್ 10, 2022 ರಂದು ಟರ್ಕಿಶ್ ಮಾಧ್ಯಮ TRT ಹೇಬರ್ ವರದಿ ಲಭ್ಯವಾಗುವಂತೆ ಮಾಡಿದೆ. ಈ ವರದಿ ಮತ್ತು ಫೋಟೋ ಪ್ರಕಾರ, ಘಟನೆಯು ಟರ್ಕಿಯ ಕೊನ್ಯಾ ನಗರದಲ್ಲಿ ನಡೆದಿದೆ.
ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿದ್ದಾನೆ ಎನ್ನಲಾದ ವ್ಯಕ್ತಿಯನ್ನು ಎಮ್ರೆ ಸಯಾರ್ ಎಂದು ಗುರುತಿಸಲಾಗಿದ್ದು, ಆತನ ಸಹೋದ್ಯೋಗಿ ಉಗುರ್ ತುರ್ಗುಟ್ ಎಂಬಾತ ಈ ವೀಡಿಯೋವನ್ನು ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ. ವೀಡಿಯೋ ವೈರಲ್ ಆದ ನಂತರ ಇಬ್ಬರನ್ನೂ ಬಂಧಿಸಲಾಗಿದೆ.
ವರದಿಯ ಪ್ರಕಾರ, ಅವರು ಸ್ನಾನ ಮಾಡಿದ ದ್ರವವು ಹಾಲು ಅಲ್ಲ ಎಂದು ಅವರು ಹೇಳಿದ್ದಾರೆ. ಟಬ್ನಲ್ಲಿ ಸೋಂಕುನಿವಾರಕ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿತು. ಸಯರ್ ನಂತರ 120,000 ಲೀರಾದ ಮೊಕದ್ದಮೆಯನ್ನು ಹೂಡಿದರು. ಸಯಾರ್ ಪ್ರಕರಣವನ್ನು ಗೆದ್ದರು ಮತ್ತು ಕೊನ್ಯಾದಲ್ಲಿನ ನ್ಯಾಯಾಲಯವು ಅವರಿಗೆ 1,150 ಲೀರಾಗಳನ್ನು ಪಾವತಿಸಬೇಕೆಂದು ಆದೇಶಿಸಿತು. ಈ ಘಟನೆಯು ನವೆಂಬರ್ 2020 ರಲ್ಲಿ ನಡೆದಿದೆ ಎಂದು ವರದಿ ಹೇಳಿದೆ. ನವೆಂಬರ್ 13, 2020 ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯನ್ನೂ ನೋಡಿದ್ದೇವೆ , “ಟರ್ಕಿಯ ಡೈರಿ ಪ್ಲಾಂಟ್‌ನಲ್ಲಿ ಕೆಲಸಗಾರ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡಿದ್ದಾನೆ; ವೀಡಿಯೋ ವೈರಲ್ ಆದ ನಂತರ ಬಂಧಿಸಲಾಗಿದೆ ಎಂದು ಇದರಲ್ಲಿದೆ.
ಜೂನ್ 13, 2022 ರ ಹುರಿಯೆತ್ ಡೈಲಿ ನ್ಯೂಸ್ ವರದಿಯ ಪ್ರಕಾರ , ‘ಹಾಲಿನ ಸ್ನಾನ’ ಮಾಡುತ್ತಿರುವ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಎಮ್ರೆ ಸಯರ್ ಮತ್ತು ಅವರ ಟಿಕ್‌ಟಾಕ್ ಖಾತೆಯಲ್ಲಿ ದೃಶ್ಯಾವಳಿಗಳನ್ನು ಹಂಚಿಕೊಂಡ ಉಗುರ್ ತುರ್ಗುಟ್ ಅವರನ್ನು 2020ರ ಘಟನೆಯ ನಂತರ ಬಂಧಿಸಲಾಯಿತು ಎಂದಿದೆ.
“ಪ್ರಕರಣದ ಪ್ರಾಸಿಕ್ಯೂಟರ್, ಕಡಾಯಿಯಲ್ಲಿರುವ ವಸ್ತುವು ಹಾಲು ಅಲ್ಲ ಆದರೆ ಬಿಸಿ ನೀರು ಮತ್ತು ಹಾಲಿನ ಅವಶೇಷಗಳು ಎಂದು ಹೇಳಿದರು. ನ್ಯಾಯಾಲಯವು ಅಕ್ಟೋಬರ್ 2021 ರಲ್ಲಿ ಸಯಾರ್ ಮತ್ತು ಉಗುರ್ ಅವರನ್ನು ಖುಲಾಸೆಗೊಳಿಸಿತು. ನ್ಯಾಯಾಲಯದ ತೀರ್ಪಿನ ನಂತರ, ಸಯಾರ್ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು, ಒಟ್ಟು 120,000 ಟರ್ಕಿಶ್ ಲಿರಾಗಳನ್ನು ಪರಿಹಾರವಾಗಿ ಕೇಳಿದರು. ಸಯಾರ್ ಪ್ರಕರಣವನ್ನು ಗೆದ್ದರು ಆದರೆ ಕೊನ್ಯಾದಲ್ಲಿನ ನ್ಯಾಯಾಲಯವು ಅವರಿಗೆ ಕೇವಲ 1,150 ಲೀರಾಗಳನ್ನು ಪರಿಹಾರವಾಗಿ ಪಾವತಿಸಬೇಕೆಂದು ಆದೇಶಿಸಿತು, ”ಎಂದು ವರದಿಯಲ್ಲಿದೆ.
ಈ ಸತ್ಯಶೋಧನೆಗಳ ಪ್ರಕಾರ, ವೀಡಿಯೋ ಟರ್ಕಿಯಿಂದ ಬಂದಿದೆಯೇ ಹೊರತು ಕೇರಳದಿಂದಲ್ಲ. ಈ ವೀಡಿಯೋಕ್ಕೆ ಯಾವುದೇ ಕೋಮು ಆಯಾಮವಿಲ್ಲ ಎಂದು ನಾವು ತೀರ್ಮಾನಿಸಿದ್ದೇವೆ.
Result: False
Our Sources
Report By TRT Haber, Dated: June 10, 2022
Report By Indian Express, Dated: November 13, 2020
Report By Hurriyet Daily News, Dated: June 13, 2022
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಇದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.