Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕರ್ನಾಟಕದಲ್ಲಿ ಪತ್ನಿಯನ್ನು ಜೀವಂತ ಸಮಾಧಿ ಮಾಡುತ್ತಿರುವ ಮುಸ್ಲಿಂ ವ್ಯಕ್ತಿ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಈ ಘಟನೆ ಕರ್ನಾಟಕದ್ದು, ಅಲ್ಲಿ 62 ವರ್ಷದ ಮುಲ್ಲಾ ತನ್ನ 42 ವರ್ಷದ ಸಹೋದರಿಯನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಯನ್ನು ಜೀವಂತವಾಗಿ ಸಮಾಧಿ ಮಾಡುತ್ತಿದ್ದಾನೆ. ಜನರು ಅದರ ವೀಡಿಯೋ ಮಾಡುತ್ತಿದ್ದಾರೆ…” ಎಂದಿದೆ.

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿ ನೋಡಬಹುದು.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಾಡಿದ್ದೇವೆ. ಈ ವೇಳೆ ಆಗಸ್ಟ್ 9, 2025 ರಂದು ನೌರಿನ್ ಮಿಮ್ ಎಂಬವರ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಅದೇ ಕ್ಲಿಪ್ ಅನ್ನು ಒಳಗೊಂಡಿತ್ತು, ಘಟನೆಯು ಬಾಂಗ್ಲಾದೇಶದ ಶೆರ್ಪುರದ ಶ್ರೀಬಾರ್ಡಿ ಉಪಜಿಲ್ಲಾದ ಕಾಕಿಲಕುರಾ ಒಕ್ಕೂಟ ಸನಿಹದ ಸ್ಥಳ 3 ನಂ ಕಣಿಪಾರ ಬಜಾರ್ನಲ್ಲಿ ಸಂಭವಿಸದೆ ಎಂದು ಹೇಳುತ್ತದೆ.

ಈ ಸುಳಿವನ್ನು ತೆಗೆದುಕೊಂಡು, ನಾವು ಬಂಗಾಳಿ ಭಾಷೆಯಲ್ಲಿ “Sherpur,” “man buries wife” ಎಂಬ ಕೀವರ್ಡ್ಗಳ ಮೂಲಕ ಹುಡುಕಿದೆವು ಗೂಗಲ್ ಇದರ ಬಾಂಗ್ಲಾದೇಶ ಆಧಾರಿತ ವರದಿಗಳನ್ನು ನೀಡಿತು. ಆಗಸ್ಟ್ 9, 2025 ರಂದು ಪ್ರಕಟವಾದ ಢಾಕಾ ಪ್ರೋಕಾಶ್ 24 ರ ಅಂತಹ ಒಂದು ವರದಿಯು ವೈರಲ್ ಕ್ಲಿಪ್ ಅನ್ನು ಒಳಗೊಂಡಿತ್ತು ಮತ್ತು ಆ ವ್ಯಕ್ತಿಯನ್ನು ಎಂಡಿ ಖಲೀಲುರ್ ರೆಹಮಾನ್ ಎಂದು ಗುರುತಿಸಿದೆ. ರೆಹಮಾನ್ ತನ್ನ ಪಾರ್ಶ್ವವಾಯು ಪೀಡಿತ ಪತ್ನಿ ಖೋಶೆದಾ ಬೇಗಂ ಅವರನ್ನು ಅಂಗಳಕ್ಕೆ ಎಳೆದೊಯ್ದು ಜೀವಂತವಾಗಿ ಹೂಳಲು ಪ್ರಯತ್ನಿಸಿದರು ಎಂದು ಅದು ಹೇಳಿದೆ. ಈ ಘಟನೆ ಶೇರ್ಪುರದ ಶ್ರೀಬಾರ್ಡಿ ಉಪಜಿಲ್ಲಾದಲ್ಲಿ ನಡೆದಿದೆ ಎಂದು ವರದಿ ದೃಢಪಡಿಸಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋದರು, ಆದರೆ ಸ್ಥಳೀಯರು ಸಮಸ್ಯೆಯನ್ನು ಸೌಹಾರ್ದವಾಗೊ ಪರಿಹರಿಸಿದ್ದಾರೆ ಎಂದು ಶ್ರೀಬಾಡಿ ಪೊಲೀಸ್ ಠಾಣಾಧಿಕಾರಿ (ಒಸಿ) ಎಂಡಿ ಅನ್ವರ್ ಜಾಹಿದ್ ಹೇಳಿದ್ದಾರೆ. ಲಿಖಿತ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ಎಂದು ಡೈಲಿ ಇತ್ತೆಫಾಕ್ ವರದಿ ಮಾಡಿದೆ.

ಹಾಗಾಗಿ, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಮದುವೆಯಾಗಲು ಕರ್ನಾಟಕದಲ್ಲಿ ತನ್ನ ಪತ್ನಿಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾನೆ ಎಂಬ ಪೋಸ್ಟ್ ಸುಳ್ಳು ಎಂದು ತಿಳಿದುಬಂದಿದೆ.
Also Read: ಅಲೆಪ್ಪಿ ಹಿನ್ನೀರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲುವ ಬ್ಯಾಂಕ್ ಸ್ಥಾಪಿಸಿದೆಯೇ?
Sources
Facebook Post By Nourin Mim, Dated August 9, 2025
Report By Dhaka Prokash 24, Dated August 9, 2025
Report By Daily Ittefaq, Dated August 9, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 22, 2025
Tanujit Das
November 17, 2025
Ishwarachandra B G
November 3, 2025