Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ನಡೆಸಲಾಗಿದೆ
Fact
ವೈರಲ್ ಚಿತ್ರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಇದು “ಚಿನ್-ಕುಕಿ ನಾರ್ಕೋ ಭಯೋತ್ಪಾದನೆ” ವಿರುದ್ಧ ಪ್ರತಿಭಟಿಸಿದ ಇನ್ನೊಂದು ರಾಲಿಯದ್ದು
” ಕುಕಿ ಮಹಿಳೆಯನ್ನು ಬೆತ್ತಲಾಗಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸುವುದರ ವಿರುದ್ಧ ಮೈತೇಯಿ ಹಿಂದೂಗಳು ಪ್ರತಿಭಟನಾ ರಾಲಿ ನಡೆಸುತ್ತಿದ್ದಾರೆ” ಎಂದು ಹೇಳಿಕೊಂಡು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ಯಾನರ್ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವ ಬೃಹತ್ ಜನಸಮೂಹದ ಚಿತ್ರವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.
Also Read: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ರೊಬೋಟ್ ಮಾನವ ಎದುರಾಳಿಯನ್ನು ಸೋಲಿಸುವ ವೀಡಿಯೋ ವೈರಲ್



ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿರು ಬಹುಸಂಖ್ಯಾತ ಮೈತೇಯಿ ಸಮುದಾಯದ ಬೇಡಿಕೆ ವಿರುದ್ಧ “ಬುಡಕಟ್ಟು ಐಕ್ಯತಾ ಮೆರವಣಿಗೆ”ಯೊಂದಿಗೆ ಮಣಿಪುರದಲ್ಲಿ ಶುರುವಾದ ಹಿಂಸಾಚಾರ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲಾಗಿ ಮೆರವಣಿಗೆ ಮಾಡುವ ಪ್ರಕರಣದೊಂದಿಗೆ ವಿಶ್ವಾದ್ಯಂತ ಸುದ್ದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಮಣಿಪುರ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಸಿಬಿಐ ಹಿಂದಿನ ವಾರ ವಹಿಸಿಕೊಂಡಿದ್ದು, ಮಣಿಪುರ ಪೊಲೀಸರು ಬಂಧಿಸಿರುವ ಏಳು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಂಡು ಹೊಸದಾಗಿ ವಿಚಾರಣೆ ನಡೆಸುವಂತೆ ಕೋರಿತ್ತು. ಇನ್ನು ಮೈತೇಯಿ ಸಮುದಾಯದ ಬೇಡಿಕೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ,ಕನಿಷ್ಠ 150 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವೈರಲ್ ಚಿತ್ರದಲ್ಲಿ ಪ್ರತಿಭಟನಾಕಾರರು ಹಿಡಿದಿರುವ ಬ್ಯಾನರ್ ಅನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ನಾವು ಸತ್ಯಶೋಧನೆಯನ್ನು ಆರಂಭಿಸಿದ್ದೇವೆ. ಅದರಲ್ಲಿ “ಚಿನ್-ಕುಕಿ ನಾರ್ಕೋ ಭಯೋತ್ಪಾದನೆಯ ವಿರುದ್ಧ ಸಾಮೂಹಿಕ ರಾಲಿ” ಎಂದು ಬರೆಯಲಾಗಿದೆ, ಇದು ವೈರಲ್ ವೀಡಿಯೊ ಪ್ರಕರಣದ ಆರೋಪಿಗಳನ್ನು ಬೆಂಬಲಿಸುವ ರಾಲಿ ಎಂಬ ವೈರಲ್ ಹೇಳಿಕೆಗೆ ವಿರುದ್ಧವಾಗಿದೆ.


ನಂತರ ನಾವು “ರಾಲಿ ಚಿನ್-ಕುಕಿ ನಾರ್ಕೋ ಟೆರರಿಸಂ” ಎಂದು ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಮಣಿಪುದ ಕೊಕೊಮಿ ಸಂಘಟನೆ ಆಯೋಜಿಸಿದ್ದ ಮೆರವಣಿಗೆಯ ಬಗ್ಗೆ ಅನೇಕ ಸುದ್ದಿಗಳು ಲಭ್ಯವಾಗಿವೆ.
“ಜುಲೈ 29 ರಂದು ಸಾವಿರಾರು ಪ್ರತಿಭಟನಾಕಾರರು ಚಿನ್-ಕುಕಿ ನಾರ್ಕೊ ಭಯೋತ್ಪಾದನೆಯ ವಿರುದ್ಧ ಥಾವು ಮೈದಾನದಿಂದ ಮಣಿಪುರದ ಇಂಫಾಲ್ ಜಿಲ್ಲೆಯ ಹಪ್ಟಾ ಕಾಂಗ್ಜೆಬಂಗ್ವರೆಗೆ ರಾಲಿ ನಡೆಸಿದರು” ಎಂದು ಜುಲೈ 29, 2023 ರ ಇಂಡಿಯಾ ಟುಡೇ ಎನ್ಇ ವರದಿ ತಿಳಿಸಿದೆ.

ಮಣಿಪುರದ ರಾಜಧಾನಿ ಇಂಫಾಲದಲ್ಲಿ ಶನಿವಾರ ಸಾವಿರಾರು ಜನರು ಬೀದಿಗಿಳಿದು ‘ಚಿನ್-ಕುಕಿ ಮಾದಕವಸ್ತು-ಭಯೋತ್ಪಾದಕರ’ ವಿರುದ್ಧ ಪ್ರತಿಭಟನೆ ನಡೆಸಿದರು. ಮೈತೇಯಿ ಮತ್ತು ಕುಕಿಗಳ ನಡುವಿನ ಸುಮಾರು ಮೂರು ತಿಂಗಳ ಹಿಂಸಾತ್ಮಕ ಜನಾಂಗೀಯ ಸಂಘರ್ಷದ ಕೇಂದ್ರಬಿಂದು ಇದಾಗಿದ್ದು, ಇದರಲ್ಲಿ ಸುಮಾರು 150 ಜನರು ಪ್ರಾಣ ಕಳೆದುಕೊಂಡರು ಮತ್ತು 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡರು” ಎಂದು ಜುಲೈ 29, 2023 ರ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾದ ವರದಿ ಹೇಳಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಾಜ್ಯದಲ್ಲಿ ಅಕ್ರಮ ವಲಸಿಗರು ನಡೆಸಿದ “ಚಿನ್-ಕುಕಿ ನಾರ್ಕೋ ಭಯೋತ್ಪಾದನೆ” ಯನ್ನು ನಿರ್ಮೂಲನೆ ಮಾಡಲು ಸಭೆ ನಿರ್ಧರಿಸಿತು ಮತ್ತು ಎನ್ಆರ್ ಸಿಯನ್ನು ಸಂಪೂರ್ಣವಾಗಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು ಎಂದಿದೆ.
ಫೋಟೋದ ರಿವರ್ಸ್ ಇಮೇಜ್ ಸರ್ಚ್ ವೇಳೆ ಜುಲೈ 29, 2023 ರ ಇಂಫಾಲ್ ಟೈಮ್ಸ್ ವರದಿ ಯನ್ನು ನಾವು ನೋಡಿದ್ದೇವೆ. ಇದು ವೈರಲ್ ಚಿತ್ರವು ರಾಜ್ಯದಲ್ಲಿ ಮಾದಕವಸ್ತು-ಭಯೋತ್ಪಾದನೆಯ ವಿರುದ್ಧದ ರಾಲಿಯದ್ದಾಗಿದೆ ಎಂದು ದೃಢಪಟ್ಟಿದೆ.
Also Read: ಬ್ರೆಜಿಲ್ ನಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆಯ ಹಳೆಯ ವೀಡಿಯೋ ಮಣಿಪುರದ್ದು ಎಂದು ತಪ್ಪಾಗಿ ಹಂಚಿಕೆ

ಮಣಿಪುರದಲ್ಲಿ ನಡೆದ ಮಾದಕವಸ್ತು ವಿರೋಧಿ ಭಯೋತ್ಪಾದನಾ ರಾಲಿಯ ಫೋಟೋ ವನ್ನು ಬೆತ್ತಲೆ ಮೆರವಣಿಗೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸುವ ಮೆರವಣಿಗೆ ಎಂದು ಹೇಳಲಾಗಿದೆ.
Our Sources
India Today NE report, July 29, 2023
Imphal Times report, July 29, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Komal Singh
May 19, 2025
Ishwarachandra B G
August 28, 2023
Sabloo Thomas
July 31, 2023