Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬಾಂಬ್ ಸ್ಫೋಟದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಾವು ಎಂಬ ವೈರಲ್ ವೀಡಿಯೋ
Fact
ಉಗ್ರ ಮಸೂದ್ ಅಜರ್ ಮೃತಪಟ್ಟ ಸ್ಫೋಟದ ವೀಡಿಯೋ ಎಂದು ಹೇಳಲಾದ ದೃಶ್ಯ ವಾಸ್ತವವಾಗಿ ಡೇರಾ ಇಸ್ಮಾಯಿಲ್ ಖಾನ್ ನದ್ದು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡ ಈ ಸ್ಫೋಟ ನವೆಂಬರ್ ನಲ್ಲಿ ನಡೆದಿರುವುದಾಗಿದೆ
ಮೋಸ್ಟ್ ವಾಂಟೆಡ್ ಉಗ್ರ, ಕಂದಹಾರ್ ವಿಮಾನ ಅಪಹರಣದ ರೂವಾರಿ ಪಾಕಿಸ್ಥಾನದ ಮಸೂದ್ ಅಜರ್ ಮೇಲೆ ಅಜ್ಞಾತ ವ್ಯಕ್ತಿಗಳಿಂದ ಬಾಂಬ್ ದಾಳಿ ಎಂದು ವೈರಲ್ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, ಭಾರತದ ಮೋಸ್ಟ್ ವಾಂಟೆಡ್ ಯಗ್ರ ಮಸೂದ್ ಅಜರ್ ಹೊಸ ವರ್ಷದ ಆಚರಣೆಯಲ್ಲಿ ಅಪರಿಚಿತ ವ್ಯಕ್ತಿ ಹಾರಿಸಿದ ಪಟಾಕಿಗೆ ಮೃತಪಟ್ಟಿದ್ದಾನೆ. ಅವನಿಗೆ ಜನ್ನತ್ ಸಿಗಲಿ… ಎಂದು ಹೇಳಲಾಗಿದೆ.
Also Read: ಮೋದಿ 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ತಲೆಕೆಳಗಾಗಿ ಪ್ರದಕ್ಷಿಣೆ ಮಾಡಿದ್ದಾರೆಯೇ?
ಇದೇ ರೀತಿ ಫೇಸ್‌ಬುಕ್, ವಾಟ್ಸಾಪ್ ನಲ್ಲಿ ಕಂಡುಬಂದಿರುವ ಕ್ಲೇಮ್ ಗಳನ್ನು ಇಲ್ಲಿ ನೋಡಬಹುದು.
ಈ ಕುರಿತಂತೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಅಜರ್ ಕುರಿತಾಗಿರುವ ಈ ವೀಡಿಯೋ ಸುಳ್ಳು ಎಂದು ಕಂಡುಬಂದಿದೆ.
ವೈರಲ್ ಆಗುತ್ತಿರುವ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದೆ. ಅದು @OSINTUpdates ಎಂಬ ಹ್ಯಾಂಡಲ್ನ ಎಕ್ಸ್ ಪೋಸ್ಟ್ ಒಂದಕ್ಕೆ ನಮ್ಮನ್ನು ಕರೆದೊಯ್ದಿದೆ, ಆ ಪ್ರಕಾರ ಇದು ನವೆಂಬರ್ 3 ರಂದು ಡೇರಾ ಇಸ್ಮಾಯಿಲ್ ಖಾನ್ನಲ್ಲಿ ನಡೆದ ಘಟನೆ ಇದಾಗಿದೆ ಎಂದು ಹೇಳಿದೆ.
ಈ ಕುರಿತಾಗಿ ಎಕ್ಸ್ ನಲ್ಲಿ ನಾವು ಇನ್ನಷ್ಟು ಹುಡುಕಾಟ ನಡೆಸಿದ್ದು, ಇದೇ ಘಟನೆಯ ಹೆಚ್ಚಿನ ಪುರಾವೆಗಳು ಇದೇ ರೀತಿಯ ವಿವರಗಳೊಂದಿಗೆ ಇರುವುದು ಕಂಡುಬಂದಿದೆ.
ಇದರ ಆರ್ಕೈವ್ ಮಾಡಲಾದ ಪೋಸ್ಟ್ ಇಲ್ಲಿದೆ.
ಅದೇ ದಿನಾಂಕವನ್ನು ಪರಿಗಣಿಸಿ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಹೆಚ್ಚಿನ ವರದಿಗಳು ಲಭ್ಯವಾಗಿವೆ. ಚೀನಾದ ಮಾಧ್ಯಮ ಕ್ಸಿನ್ಹುವಾ ವರದಿಯ ಪ್ರಕಾರ, “ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾದಲ್ಲಿ ಪೊಲೀಸ್ ವಾಹನದ ಬಳಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 22 ಜನರು ಗಾಯಗೊಂಡಿದ್ದಾರೆ. ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪೊಂಡಾ ಬಜಾರ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದಾಗ ವಾಹನವು ಜನನಿಬಿಡ ಮಾರುಕಟ್ಟೆಯ ಮೂಲಕ ಹಾದುಹೋಗುತ್ತಿತ್ತು ಎಂದು ಡೇರಾ ಉಪ ಆಯುಕ್ತ ಇಸ್ಮಾಯಿಲ್ ಖಾನ್ ಅವರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
Also Read: ರಾಜ್ಯ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ದರಗಳನ್ನು ಏರಿಸುತ್ತಿದೆಯೇ?
ಪಾಕಿಸ್ತಾನ ಮೂಲದ ಜಿಯೋ ನ್ಯೂಸ್ ನ ವರದಿಯ ಪ್ರಕಾರ, “ಡಿಐ ಖಾನ್ನಲ್ಲಿ ಪೊಲೀಸ್ ವ್ಯಾನ್ ಅನ್ನು ಗುರಿಯಾಗಿಸಿಕೊಂಡು ನಡೆದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ” ಎಂದು ಬರೆಯಲಾಗಿದೆ, “ನಗರದ ಟ್ಯಾಂಕ್ ಅಡ್ಡಾದಲ್ಲಿ ಪೊಲೀಸ್ ವ್ಯಾನ್ ಬಳಿ ಸ್ಫೋಟ ಸಂಭವಿಸಿದ್ದು, 22 ಜನರು ಗಾಯಗೊಂಡಿದ್ದಾರೆ, ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ” ಎಂದಿದೆ.
ನವೆಂಬರ್ 3, 2023 ರಂದು ಪಾಕಿಸ್ತಾನ್ ಪ್ರೆಸ್ 88 ಹ್ಯಾಂಡಲ್ ಯೂಟ್ಯೂಬ್ನಲ್ಲಿ ಪ್ರಕಟಿಸಿದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ, ಇದು ಡೇರಾ ಇಸ್ಮಾಯಿಲ್ ಖಾನ್ನಲ್ಲಿ ನಡೆದ ಸ್ಫೋಟದ ಸಿಸಿಟಿವಿ ದೃಶ್ಯಾವಳಿ ಎಂದು ಗೊತ್ತಾಗಿದೆ.
ಆ ಪ್ರಕಾರ ಮಸೂದ್ ಅಜರ್ ಮೃತಪಟ್ಟ ಸ್ಫೋಟದ ವೀಡಿಯೋ ಎಂದು ಹೇಳಲಾದ ದೃಶ್ಯ ವಾಸ್ತವವಾಗಿ ಡೇರಾ ಇಸ್ಮಾಯಿಲ್ ಖಾನ್ ನದ್ದು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡ ಈ ಸ್ಫೋಟ ನವೆಂಬರ್ ನಲ್ಲಿ ನಡೆದಿರುವುದು ಎಂದು ದೃಢಪಟ್ಟಿದೆ.
ಆದಾಗ್ಯೂ ಮಸೂದ್ ಸಾವಿನ ಸುದ್ದಿಯ ಕುರಿತಂತೆ ಆತ ನಿಜಕ್ಕೂ ಸ್ಫೋಟದಲ್ಲಿ ಗಾಯಗೊಂಡಿದ್ದಾನೆಯೇ ಅಥವಾ ಯಾವುದಾದರೂ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆಯೇ ಎಂದು ಖಚಿತ ಪಡಿಸಲು ನಮಗೆ ಸಾಧ್ಯವಾಗಲಿಲ್ಲ.
ಜೆಇಎಂ ಮುಖ್ಯಸ್ಥ, ಉಗ್ರ ಮಸೂದ್ ಅಜರ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಸ್ಫೋಟ ನಡೆಸಿದ್ದಾರೆ ಎಂಬ ವೈರಲ್ ವೀಡಿಯೋ ವಾಸ್ತವವಾಗಿ ನವೆಂಬರ್ 3, 2023 ರದ್ದು ಎಂದು ನ್ಯೂಸ್ ಚೆಕರ್ ಸಂಶೋಧನೆ ಬಹಿರಂಗ ಮಾಡಿದೆ.
Also Read : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳು ಸಿದ್ಧವಾಗಿವೆಯೇ?
Our Sources
Social media post on X, by @OSINTUpdates, dated November 3, 2023
Social media post on X, by @Aliwazirna50, dated November 3, 2023
Report by Xinhua, published on November 3, 2023
Report by Geo News, published on November 3, 2023
YouTube video posted by handle @PakistanPress88, dated November 3, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel Madhusoodan
November 13, 2024
Sabloo Thomas
July 3, 2024
Kushel Madhusoodan
May 21, 2024