Authors
Claim
ರಾಜಸ್ಥಾನದ ಭಿಲ್ವಾರಾದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಮರಿಗೆ ಪೊಲೀಸರು ಥಳಿಸಿದ ವೀಡಿಯೋ
Fact
ಭಿಲ್ವಾರಾದ ದೇವಾಲಯದ ಹೊರಗೆ ಹಸುವಿನ ಬಾಲವನ್ನು ಎಸೆದ ಆರೋಪಿಗಳನ್ನು ರಾಜಸ್ಥಾನ ಪೊಲೀಸ್ ಸಿಬ್ಬಂದಿ ಥಳಿಸುತ್ತಿರುವುದು ಎಂದು ಹೇಳಲು ಉತ್ತರ ಪ್ರದೇಶದ ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ರಾಜಸ್ಥಾನದ ಭಿಲ್ವಾರಾದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಪಾಠ ಕಲಿಸಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ರಾಜಸ್ಥಾನದ ಭಿಲ್ವಾರಾದಲ್ಲಿ 25 ಆಗಸ್ಟ್ 24 ರಂದು ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ದಾರಿತಪ್ಪಿದ ಯುವಕರಿಗೆ ರಾಜಸ್ಥಾನ ಪೊಲೀಸರು ಆತಿಥ್ಯವನ್ನು ನೀಡಿದರು” ಎಂದಿದೆ.
Also Read: ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತೇ?
ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ
ಈ ಪ್ರಕರಣದ ಹಿನ್ನೆಲೆ ಏನೆಂದರೆ, ರಾಜಸ್ಥಾನದ ಭಿಲ್ವಾರಾದ ದೇವಾಲಯವೊಂದರ ಹೊರಗೆ ಹಸುವಿನ ಬಾಲ ಪತ್ತೆಯಾಗಿದ್ದು, ಕಳೆದ ವಾರ ನಗರದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಈಗ, ಪೊಲೀಸ್ ಸಿಬ್ಬಂದಿ ಪುರುಷರ ಗುಂಪನ್ನು ಕ್ರೂರವಾಗಿ ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದೆ, ಇದು ಭಿಲ್ವಾರಾ ಪ್ರಕರಣದ ಆರೋಪಿಗಳ ವಿರುದ್ಧ ರಾಜಸ್ಥಾನ ಪೊಲೀಸರ ಕ್ರಮವನ್ನು ತೋರಿಸುತ್ತದೆ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಹೇಳಿದ್ದಾರೆ. ಆದಾಗ್ಯೂ, ನ್ಯೂಸ್ಚೆಕರ್ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ.
Fact Check/Verification
ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ನಡೆಸಿದ್ದೇವೆ. ಈ ವೇಳೆ ಜೂನ್ 12, 2022 ರ ಇಂಡಿಯಾ ಟುಡೇ ವರದಿ ಲಭ್ಯವಾಗಿದೆ. “ಈ ವೀಡಿಯೋ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸಹರಾನ್ಪುರ ಕೊಟ್ವಾಲಿಯಲ್ಲಿ ಪೊಲೀಸರು ಜಿಲ್ಲೆಯಲ್ಲಿ ಗಲಭೆ ಮತ್ತು ಕಲ್ಲು ತೂರಾಟದ ಆರೋಪ ಹೊತ್ತ ಪ್ರತಿಭಟನಾಕಾರರನ್ನು ಥಳಿಸುತ್ತಿರುವುದನ್ನು ಇದು ತೋರಿಸಿದೆ ಎಂದಿದೆ. ಸಹರಾನ್ಪುರ ಎಸ್ಎಸ್ಪಿ ಆಕಾಶ್ ತೋಮರ್ ಈ ವೀಡಿಯೋ ಜಿಲ್ಲೆಯದ್ದಲ್ಲ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಮೇಲೆ ಯುಪಿ ಪೊಲೀಸರ ದಬ್ಬಾಳಿಕೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಈ ವೀಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಅದು ಹೇಳಿದೆ. ವಿಶೇಷವೆಂದರೆ, ಯಾದವ್ ಅವರ ಪೋಸ್ಟ್ ನಲ್ಲೂ ವೀಡಿಯೋ ಉತ್ತರಪ್ರದೇಶದ್ದು ಎಂದು ಊಹಿಸಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ಜಿಲ್ಲೆ ಅಥವಾ ನಗರವನ್ನು ಉಲ್ಲೇಖಿಸಿಲ್ಲ.
ಈ ಪ್ರಕರಣದ ಹಿನ್ನೆಲೆ ಎಂದರೆ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಘಟಕದ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು ಎಂದು ವರದಿಯಾಗಿದೆ.
ಈ ಘಟನೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ವೀಡಿಯೋ ವರದಿಯಲ್ಲಿ, ಯುಪಿ ಪೊಲೀಸರು ಸಹರಾನ್ಪುರದಿಂದ ಈ ವೀಡಿಯೋ ಬಂದಿದೆ ಎಂಬುದನ್ನು ನಿರಾಕರಿಸಿದ್ದರೂ, ಕಸ್ಟಡಿಯಲ್ಲಿ ಹಲ್ಲೆ ನಡೆಸಿದ ಆರೋಪದ ಬಗ್ಗೆ ತನಿಖೆ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ಸಹರಾನ್ಪುರ ಎಸ್ಎಸ್ಪಿ ಆಕಾಶ್ ತೋಮರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮತ್ತೊಂದು ವರದಿಯಲ್ಲಿ, “ಎಎಸ್ಪಿ (ನಗರ) ರಾಜೇಶ್ ಕುಮಾರ್ ವೀಡಿಯೋ ಬಗ್ಗೆ ತನಿಖೆ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. “ವೀಡಿಯೋದಲ್ಲಿ ಪೊಲೀಸರು ಆರೋಪಿಗಳನ್ನು ಥಳಿಸುತ್ತಿರುವುದನ್ನು ಯಾವುದೇ ಕುಟುಂಬಗಳು ಗುರುತಿಸಲು ಸಾಧ್ಯವಾಗಿಲ್ಲ. ಈಗ ನಾವು ಜೈಲಿನಲ್ಲಿರುವ ಆರೋಪಿಗಳಿಂದ ಪೊಲೀಸರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ಆದಾಗ್ಯೂ, ವೀಡಿಯೋದಲ್ಲಿರುವ ವ್ಯಕ್ತಿಗಳ ಕುಟುಂಬಗಳು ಈ ಹೇಳಿಕೆಯನ್ನು ನಿರಾಕರಿಸಿವೆ ಎಂದು ವರದಿ ತಿಳಿಸಿದೆ. “ನನ್ನ ಮಗ ನೀಲಿ ಕುರ್ತಾ ಪೈಜಾಮಾ ಧರಿಸಿದ್ದಾನೆ. ಅವನ ಇನ್ನೊಬ್ಬ ಸ್ನೇಹಿತ ಸುಭಾನ್ ಹಳದಿ ಕುರ್ತಾ ಪೈಜಾಮಾ ಧರಿಸಿದ್ದಾನೆ. ಇಲ್ಲಿಯವರೆಗೆ ಪೊಲೀಸರಿಂದ ಯಾರೂ ನಮ್ಮ ಕುಟುಂಬಗಳನ್ನು ಸಂಪರ್ಕಿಸಿಲ್ಲ” ಎಂದು ವೀಡಿಯೋದಲ್ಲಿರುವ ಆಸಿಫ್ ಸಿದ್ದಿಕಿ ಎಂಬಾತನ ತಂದೆ ಶಾಹೀನ್ ಸಿದ್ದಿಕಿ ಹೇಳಿದ್ದಾರೆ.
2022 ರ ಜೂನ್ ನಲ್ಲಿ ವೀಡಿಯೋ ವೈರಲ್ ಆದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸಹರಾನ್ಪುರ ಪೊಲೀಸರಿಂದ ಈ ಕ್ರೌರ್ಯದ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದೆ.
ಇದಲ್ಲದೆ, ವೈರಲ್ ತುಣುಕಿನಲ್ಲಿ ಕಂಡುಬರುವ ಎಂಟು ವ್ಯಕ್ತಿಗಳನ್ನು ಬಳಿಕ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. “ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ಪ್ರತಿಭಟನೆಯ ನಂತರ ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಎಂಟು ಜನರನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ ನಂತರ ಮತ್ತು ಸ್ಥಳೀಯ ನ್ಯಾಯಾಲಯವು ಅವರ ಬಿಡುಗಡೆಗೆ ಆದೇಶ ನೀಡಿದ ನಂತರ ಅವರು ನಿನ್ನೆ ಜೈಲಿನಿಂದ ಹೊರಬಂದರು” ಎಂದು ಜುಲೈ 4, 2022 ರಂದು ಪ್ರಕಟವಾದ ಎನ್ ಡಿಟಿವಿ ವರದಿ ತಿಳಿಸಿದೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿಗಳ ಒಬ್ಬರಾದ ಮೊಹಮ್ಮದ್ ಅಲಿ ಜೊತೆಗಿನ ಸಂದರ್ಶನವನ್ನೂ ಇದು ಒಳಗೊಂಡಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಭಿಲ್ವಾರಾದ ದೇವಾಲಯದ ಹೊರಗೆ ಹಸುವಿನ ಬಾಲವನ್ನು ಎಸೆದ ಆರೋಪಿಗಳನ್ನು ರಾಜಸ್ಥಾನ ಪೊಲೀಸ್ ಸಿಬ್ಬಂದಿ ಥಳಿಸುತ್ತಿರುವುದು ಎಂದು ಹೇಳಲು ಉತ್ತರ ಪ್ರದೇಶದ ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
Result: False
Our Sources
Report By India Today, Dated June 12, 2022
Report By Times Of India, Dated June 17, 2022
Report By NDTV, Dated July 4, 2022
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.