Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇಸ್ರೋದ ನೂತನ ಸರ್ವೇಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ
ಇಸ್ರೋದ ನೂತನ ಸರ್ವೇಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿಯಾಗಿಲ್ಲ, ಪಿಎಸ್ಎಲ್ವಿ ರಾಕೆಟ್ ಮೂರನೇ ಹಂತ ವಿಫಲವಾದ್ದರಿಂದ ಉಪಗ್ರಹ ಕಕ್ಷೆಯಲ್ಲಿ ಕೂರಿಸುವ ಯೋಜನೆ ವಿಫಲವಾಗಿದೆ.
ಇಸ್ರೋದ ನೂತನ ಸರ್ವೇಕ್ಷಣಾ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂಬಂತೆ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಇಸ್ರೋ ಇಂದು ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ EOS-09 (ಭೂಮಿ ವೀಕ್ಷಣಾ ಉಪಗ್ರಹ-09) ವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಪ್ರಕ್ಷೇಪಿಸಿದೆ. ಇದನ್ನು ನಾಗರೀಕ ಹಾಗು ಮಿಲಿಟರಿ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಆಪರೇಶನ್ ಸಿಂದೂರ ಬೆನ್ನಲ್ಲೇ ಇಸ್ರೋ ಮಾಡಿರುವ ಈ ಸಾಧನೆ ಜಗತ್ತು ಮತ್ತೊಮ್ಮೆ ಭಾರತವನ್ನು ತಿರುಗಿ ನೋಡುವಂತೆ ಮಾಡಿದೆ” ಎಂದಿದೆ.


ಈ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ಬೆಂಗಳೂರು ಮಳೆಗೆ ಬಸ್ ಒಳಗೆ ನೀರು ನುಗ್ಗಿದೆ ಎಂದು ಹಳೆಯ ವೀಡಿಯೋ ವೈರಲ್
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದಾಗ, ಇಒಎಸ್-09 ಉಪಗ್ರಹವನ್ನು ಯಶಸ್ವಿಯಾಗಿ ಕೂರಿಸಲು ಸಾಧ್ಯವಾಗಿಲ್ಲ ಈ ಯೋಜನೆ ವಿಫಲವಾಗಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಉಡಾವಣೆ ವಿಫಲವಾಗಿರುವ ಕುರಿತು ನಾವು ಹಲವು ವರದಿಗಳನ್ನು ನೋಡಿದ್ದೇವೆ.
ಮೇ 18, 2025ರ ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (SDSC) ಮೊದಲ ಉಡಾವಣಾ ಪ್ಯಾಡ್ನಿಂದ EOS-09 ಭೂ ಸರ್ವೇಕ್ಷಣಾ ಉಪಗ್ರಹವನ್ನು ಸೂರ್ಯ ಸಮಕಾಲಿಕ ಧ್ರುವೀಯ ಕಕ್ಷೆಗೆ ನಿಯೋಜಿಸುವ ಗುರಿಯನ್ನು ಹೊಂದಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್ಎಲ್ವಿ-ಸಿ61 ಉಡಾವಣೆ ಭಾನುವಾರ ವಿಫಲವಾಯಿತು.”ಉಡಾವಣಾ ವಾಹನವು ಎರಡನೇ ಹಂತದವರೆಗೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಿತು ಮತ್ತು ಮೂರನೇ ಹಂತದಲ್ಲಿ ಸಾಧ್ಯವಾಗಲಿಲ್ಲ. ಈ ಬಗ್ಗೆ ಪರಿಶೀಲನೆ ಬಳಿಕ ವಿವರಿಸುವುದಾಗ ವೀಕ್ಷಣೆ ಮಾಡಿದರು. ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.” ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ” ಎಂದಿದೆ

ಮೆ 19,2025ರ ದಿ ಹಿಂದೂ ವರದಿಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾನುವಾರ (ಮೇ 18, 2025) ತಾಂತ್ರಿಕ ದೋಷದಿಂದಾಗಿ ತನ್ನ 101 ನೇ ಕಾರ್ಯಾಚರಣೆಯಾದ PSLV-C61/EOS-09 ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ . ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 5:59 ಕ್ಕೆ ಭೂ ವೀಕ್ಷಣಾ ಉಪಗ್ರಹ EOS-09 ಅನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ಉಡಾವಣೆಯಾದ ಕೆಲವೇ ನಿಮಿಷಗಳ ನಂತರ, ಉಡಾವಣಾ ವಾಹನದ ಮೂರನೇ ಹಂತದಲ್ಲಿ ದೋಷ ಕಂಡುಬಂದ ಕಾರಣ ಕಾರ್ಯಾಚರಣೆಯನ್ನು “ಸಾಧಿಸಲು ಸಾಧ್ಯವಿಲ್ಲ” ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಉಡಾವಣೆಯಾದ 17 ನಿಮಿಷಗಳ ನಂತರ PSLV ಉಪಗ್ರಹವನ್ನು ಸೂರ್ಯ ಸಮಕಾಲಿಕ ಧ್ರುವೀಯ ಕಕ್ಷೆಗೆ (SSPO) ಗೆ ಇರಿಸುವ ನಿರೀಕ್ಷೆಯಿತ್ತು. ಎಂದಿದೆ.

ಆ ಬಳಿಕ ಮೇ 18, 2025ರಂದು ಎಕ್ಸ್ ನಲ್ಲಿ ಇಸ್ರೋ ನೀಡಿದ ಹೇಳಿಕೆಯನ್ನು ನೋಡಿದ್ದೇವೆ. ಇಂದು 101 ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು, ಪಿಎಸ್ಎಲ್ವಿ-ಸಿ 61 ಕಾರ್ಯಕ್ಷಮತೆ 2 ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3 ನೇ ಹಂತದಲ್ಲಿನ ಸಮಸ್ಯೆಯಿಂದಾಗಿ , ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದಿದೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
ಇಸ್ರೋ ವೆಬ್ ಸೈಟ್ ನಲ್ಲೂ ಉಪಗ್ರಹ ಉಡಾವಣೆ ವಿಫಲವಾಗಿರುವುದರ ಬಗ್ಗೆ ಹೇಳಲಾಗಿದೆ.
ಈ ಸತ್ಯಶೋಧನೆಯ ಪ್ರಕಾರ, ಇಸ್ರೋದ ಹೊಸ ಇಒಎಸ್ 09 ಉಪಗ್ರಹ ಉಡಾವಣೆ ಯೋಜನೆ ವಿಫಲವಾಗಿದೆ. ಪಿಎಸ್ಎಲ್ ವಿ ರಾಕೆಟ್ ಮೂರನೇ ಹಂತದಲ್ಲಿ ವಿಫಲಗೊಂಡಿದ್ದರಿಂದ ಉಪಗ್ರಹ ಕಕ್ಷೆಗೆ ಕೂರಿಸುವುದಕ್ಕೆ ಸಾಧ್ಯವಾಗಿಲ್ಲ ಎಂದು ಗೊತ್ತಾಗಿದೆ. ಆದ್ದರಿಂದ ವೈರಲ್ ಹೇಳಿಕೆ ತಪ್ಪಾದ ಸಂದರ್ಭವಾಗಿದೆ.
Also Read: ಧ್ವಂಸವಾದ ರಾವಲ್ಪಿಂಡಿ ಕ್ರೀಡಾಂಗಣ ಎಂದು ವೈರಲ್ ಆಗುತ್ತಿರುವ ಫೋಟೋ ಎಐ ಸೃಷ್ಟಿ
Our Sources
Report By Times of India, Dated: May 18, 2025
Report By The Hindu, Dated: May 19, 2025
X post By ISRO, Dated: May 18, 2025
Ishwarachandra B G
September 2, 2023
Pankaj Menon
August 29, 2023
Ishwarachandra B G
August 31, 2023