Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಭಾರತ ದಾಳಿ ಮಾಡಿದ ಬಳಿಕ ಧ್ವಂಸಗೊಂಡ ಸ್ಟೇಡಿಯಂ
ರಾವಲ್ಪಿಂಡಿ ಕ್ರೀಡಾಂಗಣದ ಮೇಲೆ ಭಾರತ ದಾಳಿ ಮಾಡಿದ ಬಳಿಕ ಧ್ವಂಸಗೊಂಡ ಸ್ಟೇಡಿಯಂ ಎಂದು ವೈರಲ್ ಆಗುತ್ತಿರುವ ಫೋಟೋ ಎಐ ನಿಂದ ಮಾಡಿದ್ದಾಗಿದೆ
ಧ್ವಂಸವಾದ ರಾವಲ್ಪಿಂಡಿ ಕ್ರೀಡಾಂಗಣದ ಇತ್ತೀಚಿನ ಫೋಟೋ ಎಂದು ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ಸಶಸ್ತ್ರ ಪಡೆಗಳು ದಾಳಿ ನಡೆಸಿದ್ದು, ಈ ವೇಳೆ ರಾವಲ್ಪಿಂಡಿ ಕ್ರೀಡಾಂಗಣದ ಮೇಲೆಯೂ ದಾಳಿ ನಡೆಸಿ ಅದನ್ನು ಧ್ವಂಸ ಮಾಡಲಾಗಿದೆ ಎಂಬರ್ಥದಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.


ಈ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ನೋಡಬಹುದು.
Also Read: ಮೊದಲ ಕರ್ತವ್ಯದಲ್ಲೇ ಕಿರಣ್ ಶೇಖಾವತ್ ಹುತಾತ್ಮರಾಗಿದ್ದಾರೆ ಎಂದ ಈ ವೀಡಿಯೋ ಸತ್ಯಾಸತ್ಯತೆ ಏನು?
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ)ಯಿಂದ ಮಾಡಿದ ಫೋಟೋ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ನಾವು ಯಾವುದೇ ರೀತಿಯ ಫಲಿತಾಂಶವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ರಾವಲ್ಪಿಂಡಿ ಮೈದಾನದ ಮೇಲೆ ದಾಳಿ ನಡೆದಿದೆಯೇ ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಭಾರತದ ಡ್ರೋನ್ ದಾಳಿಯಿಂದಾಗಿ ಕ್ರಿಕೆಟ್ ಮೈದಾನದ ಹೊರಭಾಗದಲ್ಲಿ ತುಸು ಹಾನಿಯಾಗಿರುವುದು ಪತ್ತೆಯಾಗಿದೆ, ಆದರೆ ವೈರಲ್ ಫೋಟೋದಲ್ಲಿ ಕಾಣಿಸುವ ರೀತಿ ಇಡೀ ಧ್ವಂಸಗೊಂಡಿರುವುದು ಕಂಡುಬಂದಿರುವುದಿಲ್ಲ. ಈ ಕುರಿತ ವರದಿಯನ್ನು ಇಲ್ಲಿ ನೋಡಬಹುದು.

ಈ ಸತ್ಯಶೋಧನೆಯ ಭಾಗವಾಗಿ ನಾವು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಅನ್ನು ಗೂಗಲ್ ನಲ್ಲಿ ಪರಿಶೀಲಿಸಿದ್ದೇವೆ. ಅದು ವೈರಲ್ ಫೋಟೋಕ್ಕಿಂತ ಸಂರಚನೆಯಲ್ಲಿ ಸಂಪೂರ್ಣ ಭಿನ್ನವಾಗಿರುವುದನ್ನು ಕಂಡಿದ್ದೇವೆ.
ಮೇ 10, 2025ರಂದು ಸಿಎನ್ಎನ್ ಇಂಟರ್ ನ್ಯಾಷನಲ್ ಫೇಸ್ ಬುಕ್ ನಲ್ಲಿ, ರಾವಲ್ಪಿಂಡಿ ಕ್ರೀಡಾಂಗಣಕ್ಕೆ ಡ್ರೋನ್ ದಾಳಿಯಾಗಿದೆ ಎಂದ ನಂತರದ ಕುರಿತ ಸ್ಥಳೀಯ ವರದಿಯನ್ನು ನಾವು ಗಮನಿಸಿದ್ದೇವೆ. ಇದು ವೈರಲ್ ಚಿತ್ರದಲ್ಲಿ ಹೇಳಿದಂತೆ ಇಲ್ಲ ಎಂಬುದನ್ನು ಇಲ್ಲಿ ನೋಡಬಹುದು.

ರಾವಲ್ಪಿಂಡಿ ಸ್ಟೇಡಿಯಂ ಅನ್ನು ನಾವು ಗೂಗಲ್ ಮ್ಯಾಪ್ ನಲ್ಲೂ ನೋಡಿದ್ದು ಅದನ್ನು ಇಲ್ಲಿ ನೋಡಬಹುದು.
ವೈರಲ್ ಆಗುತ್ತಿರುವ ಫೋಟೋದಲ್ಲಿ ಸ್ಟೇಡಿಯಂ ಸಂರಚನೆ ತುಸು ಸಣ್ಣದಾಗಿರುವುದರಿಂದ ಮತ್ತು ಫೋಟೋ ಸ್ಪಷ್ಟವಾಗಿ ಇರದೇ ಇರುವುದರಿಂದ ಸಂಶಯಕ್ಕೆಡೆ ಮಾಡಿದ್ದು, ಇದು ಎಐ ಮೂಲಕ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ.
ಆ ಪ್ರಕಾರ ನ್ಯೂಸ್ ಚೆಕರ್ ವಿವಿಧ ಎಐ ಪತ್ತೆ ಸಾಧನಗಳ ಮೂಲಕ ಫೋಟೋಗಳನ್ನು ಪರಿಶೀಲಿಸಿದೆ. ಹೆಚ್ಚಿನ ಪತ್ತೆ ಸಾಧನಗಳು ವೈರಲ್ ಫೋಟೋ ಎಐ ನಿಂದ ಮಾಡಿದ್ದಾಗಿದೆ ಎಂದು ಹೇಳಿವೆ.
ವಾಸ್ ಇಟ್ ಎಐನಲ್ಲಿ ಪರಿಶೀಲಿಸಿದಾಗ, ಈ ಫೊಟೋ ಈ ಫೋಟೋ ಎಐನಿಂದ ಮಾಡಿದ್ದು ಎಂದು ಹೇಳಿದೆ.

ಈಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಶೇ.98%ರಷ್ಟು ಇದು ಎಐನಿಂದ ಮಾಡಿದ್ದಾಗಿದೆ ಎಂದು ಫಲಿತಾಂಶ ನೀಡಿದೆ.

ಇದಾದ ಬಳಿಕ ನಾವು ಇನ್ನೊಂದು ಎಐ ಪತ್ತೆ ಸಾಧನ ಸೈಟ್ ಎಂಜಿನ್ ನಲ್ಲೂ ವೈರಲ್ ಚಿತ್ರವನ್ನು ಹಾಕಿ ನೋಡಿದ್ದೇವೆ. ಇದೂ ಶೇ.98%ರಷ್ಟು ಎಐನಿಂದ ಮಾಡಿರುವ ಸಾಧ್ಯತೆಯನ್ನು ಹೇಳಿದೆ.

ಈ ಸತ್ಯಶೋಧನೆಯ ಪ್ರಕಾರ, ರಾವಲ್ಪಿಂಡಿ ಸ್ಟೇಡಿಯಂ ಮೇಲೆ ಭಾರತದ ದಾಳಿ ಎಂಬಂತೆ ಹಂಚಿಕೊಳ್ಳಲಾಗುತ್ತಿರುವ ಫೋಟೋ ಎಐನಿಂದ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ.
Also Read: ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ ಎಂದು ಲೆಬನಾನ್ ವೀಡಿಯೋ ವೈರಲ್
Our Sources
Report By Hindustan Times, Dated: May 8, 2025
Report By India Today, Dated: May 7, 2025
Facebook Post By CNN International, Dated: May 10, 2025
sightengine.com
wasitai.com
Is it AI
Google Maps
Vasudha Beri
November 20, 2025
Vasudha Beri
October 9, 2025
Vasudha Beri
August 7, 2025