Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಾಜೀವ್ ಗಾಂಧಿ ಪುಣ್ಯತಿಥಿಯಂದು (ಮೇ 21) ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಫೋಟೋ ಇಟ್ಟು ಗೌರವ ಸಮರ್ಪಿಸಿದ್ದಾರೆ ಎಂದು ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಅಪ್ಪ ಯಾರು ಮಗ ಯಾರು ಅಂತ ತಿಳಿಯದ ಮೂರ್ಖ ಗುಲಾಮರು ಕಾಂಗ್ರೆಸ್ಸಿನಲ್ಲಿದ್ದಾರೆ! ತೀರಿ ಹೋಗಿದ್ದು ಅಪ್ಪ, ಆದರೇ ವಯನಾಡಿನ ಕಾಂಗ್ರೆಸ್ಸ್ ಗುಲಾಮರು ಶ್ರದ್ಧಾಂಜಲಿ ಅರ್ಪಿಸಿದ್ದು ಮಗನಿಗೆ!!” ಎಂದಿದೆ.
ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.


ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ವೈರಲ್ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆ ವೇಳೆ ನಾವು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆದರೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಆ ನಂತರ ವೈರಲ್ ಫೊಟೋದಲ್ಲಿ ಕಾಣಿಸಿಕೊಂಡಿರುವ ಕೇರಳದ ನೆಯ್ಯಟ್ಟಿಂಕರ ಮೂಲದ ತಿರುವನಂತಪುರಂ ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಸೇನ್ ಅವರನ್ನು ಸಂಪರ್ಕಿಸಲಾಯಿತು.
ಈ ಫೋಟೋದ ಬಗ್ಗೆ ಮಾತನಾಡಿದ ವಿನೋದ್ ಸೇನ್ ಅವರು, “ಇದು ತಿರುವನಂತಪುರದ ನೆಯ್ಯಟ್ಟಿಂಕರ ಕ್ಷೇತ್ರದ ಫೋಟೋ. ಫೋಟೋದಲ್ಲಿರುವ ಜನರು ಎಸ್.ಕೆ.ಅಶೋಕ್ ಕುಮಾರ್ ಮತ್ತು ನಾನಾಗಿದ್ದೇನೆ. ನಾನು ತಿರುವನಂತಪುರಂ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಸ್.ಕೆ.ಅಶೋಕ್ ಕುಮಾರ್ ಆ ಸಮಯದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು.ಈಗ ನನ್ನ ಬಳಿ ಮೂಲ ಫೋಟೋ ಇಲ್ಲ. ತಿರುವನಂತಪುರದಲ್ಲಿ ಓಣಂ ಅಂಗವಾಗಿ ತಿರುವನಂತಪುರ ಪಂಚಾಯತ್ ನಲ್ಲಿ ಕಿಸಾನ್ ಕಾಂಗ್ರೆಸ್ ಆಯೋಜಿಸಿದ್ದ ಓಣಂ ಮಾರುಕಟ್ಟೆಯ ಉದ್ಘಾಟನೆಯ ಫೋಟೋ ಇದಾಗಿದೆ. ಫೋಟೋದಲ್ಲಿ ದೀಪವನ್ನು ನಾನು ಬೆಳಗಿಸುತ್ತಿದ್ದೇನೆ. ಎಸ್.ಕೆ. ಅಶೋಕ್ ಕುಮಾರ್ ಅವರು ದೀಪ ಬೆಳಗಿಸಿ ಓಣಂ ಮಾರುಕಟ್ಟೆಯನ್ನು ಉದ್ಘಾಟಿಸಿದ ನಂತರ ನಾನೂ ದೀಪ ಬೆಳಗಿಸಿದೆ. ತಿರುವನಂತಪುರ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿತ್ರಂ ಲಾಲು ಅವರು ರಾಹುಲ್ ಅವರ ಕಟ್ಟಾ ಅಭಿಮಾನಿ. ಅವರು ಆ ಫೋಟೋವನ್ನು ಅಲ್ಲಿ ಇಟ್ಟಿದ್ದರು” ಎಂದು ಸೇನ್ ಹೇಳಿದ್ದಾರೆ.
ವಿನೋದ್ ಸೇನಿನ್ ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದರೆ ಫೋಟೋದಲ್ಲಿರುವ ವ್ಯಕ್ತಿ ಇವರೇ ಎಂದು ತಿಳಿಯುತ್ತದೆ.

ಸೇನ್ ಅವರ ಎಡಭಾಗದಲ್ಲಿ ಕ್ಯಾಮೆರಾ ಕಡೆಗೆ ಮುಖ ಮಾಡಿ ನಿಂತಿರುವ ವ್ಯಕ್ತಿ ಅಶೋಕ್ ಕುಮಾರ್ . ನಾವು ಅವರ ಫೇಸ್ಬುಕ್ ಖಾತೆಯನ್ನು ಸಹ ನೋಡಿದೆವು, ಅಲ್ಲಿ ಫೋಟೋದಲ್ಲಿರುವವರು ಅವರೇ ಎಂದು ದೃಢಪಡಿಸಿದ್ದೇವೆ.

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ರಾಜೀವ್ ಗಾಂಧಿ ಪುಣ್ಯತಿಥಿಯಂದು ವಯನಾಡ್ ಕಾಂಗ್ರೆಸ್ಸಿಗರು ರಾಹುಲ್ ಗಾಂಧಿ ಫೊಟೋ ಇಟ್ಟು ಗೌರವ ಸಮರ್ಪಿಸಿಲ್ಲ. ಬದಲಾಗಿ ಇದು ತಿರುವನಂತಪುರದಲ್ಲಿ ಓಣಂ ಅಂಗವಾಗಿ ಮಾರುಕಟ್ಟೆಯೊಂದರ ಉದ್ಘಾಟನೆ ಸಂದರ್ಭದ ಫೋಟೋ ಆಗಿದೆ ಎಂದು ತಿಳಿದುಬಂದಿದೆ.
Our Sources
Conversation with Vinod Sen, Thiruvananthapuram DCC General Secretary
Facebook Profile of Vinod Sen
Facebook Profile of S K Ashok Kumar
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ
Ishwarachandra B G
November 21, 2025
Newschecker Team
August 25, 2025
Ishwarachandra B G
August 23, 2025