ವಕ್ಫ್ ಮಸೂದೆ ವಿರುದ್ಧ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಮೆಸೇಜ್ ನಲ್ಲಿ, “ಉತ್ತರ ಪ್ರದೇಶದಲ್ಲಿ ವಕ್ಫ್ ಮಸೂದೆಯ ವಿರುದ್ಧ ಒಂದು ನಿರ್ದಿಷ್ಟ ಸಮುದಾಯದ ಜನರು ಗುಂಪುಗೂಡಿದರು! ತಕ್ಷಣ ಚಿಕಿತ್ಸೆ ಮಾಡಲಾಯಿತು!” ಎಂದಿದೆ.
Also Read: ಕ್ರಿಕೆಟಿಗ ಧೋನಿ ಬಿಜೆಪಿ ಸೇರ್ಪಡೆ? ಪ್ರಧಾನಿ ಮೋದಿ ಜೊತೆಗಿನ ವೈರಲ್ ಚಿತ್ರ ನಿಜವಾದ್ದಲ್ಲ!

Fact Check/Verification
ಈ ಕುರಿತ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್ ಚೆಕರ್ ಮುಂದಾಗಿದ್ದು, ಇದು 2019ರ ಸಿಎಎ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದೇವೆ. ಈ ವೇಳೆ ವಿವರಗಳು ಲಭ್ಯವಾಗಿವೆ.
ಡಿಸೆಂಬರ್ 20, 2019ರಂದು ಲೈವ್ ಹಿಂದೂಸ್ತಾನ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋ ಲಭ್ಯವಾಗಿದ್ದು, ಇದು ಗೋರಖ್ ಪುರದಲ್ಲಿ ನಡೆದ ಸಿಎಎ ವಿರುದ್ಧದ ಗಲಾಟೆ ಎಂದು ಹೇಳಲಾಗಿದೆ. ಗೋರಖ್‌ಪುರ: ಸಿಎಎ ವಿರುದ್ಧದ ಪ್ರತಿಭಟನೆಯ ವೇಳೆ ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್‌ನಲ್ಲಿ ಇಬ್ಬರಿಗೆ ಗಾಯ ಎಂಬ ಶೀರ್ಷಿಕೆ ಇದರಲ್ಲಿದ್ದು, ವಿವರಣೆಯಲ್ಲಿ, “ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಖಾಸ್ ಚೌಕ್‌ನಲ್ಲಿ ಕಲ್ಲು ತೂರಾಟದ ಘಟನೆಯ ನಂತರ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಹಿಂಸಾತ್ಮಕ ಗುಂಪನ್ನು ಚದುರಿಸಲು, ಪೊಲೀಸರು ಲಾಠಿ ಚಾರ್ಜ್ ಅನ್ನು ಸಹ ಆಶ್ರಯಿಸಿದರು. ಶುಕ್ರವಾರದ ಪ್ರಾರ್ಥನೆಯ ನಂತರ, ಘಂಟಾಘರ್‌ನಲ್ಲಿರುವ ಜಾಮಾ ಮಸೀದಿಯಿಂದ ಹೊರಬರುತ್ತಿದ್ದ ಜನರು ತಮ್ಮ ಕೈಗಳಿಗೆ ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡು ಪ್ರತಿಭಟಿಸಿದರು.” ಎಂದಿದೆ.
ಈ ವೀಡಿಯೋದಲ್ಲಿ ನಾವು “ಮಂಗಲ್ ವೆಂಡ್ಡಿಂಗ್ ಕಲೆಕ್ಷನ್” ಎಂಬ ಅಂಗಡಿಯೊಂದರ ಬೋರ್ಡ್ ನೋಡಿದ್ದೇವೆ. ಇದೇ ಅಂಗಡಿಯನ್ನು ನಾವು ವೈರಲ್ ವೀಡಿಯೋದಲ್ಲೂ ಕಂಡಿದ್ದೇವೆ.


ಈ ಸ್ಥಳವನ್ನು ಗೂಗಲ್ ಮ್ಯಾಪ್ ನಲ್ಲಿ ಗುರುತಿಸಲಾಗಿದ್ದು, ಗೋರಖ್ ಪುರದಲ್ಲಿದೆ ಎಂದು ಖಚಿತವಾಗಿದೆ.

ಆ ನಂತರ ಹೆಚ್ಚಿನ ಮಾಹಿತಿಗೆ ನಾವು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದು, 2019ರಲ್ಲಿ ಗೋರಖ್ ಪುರದಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದು, ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ವಿದ್ಯಮಾನ ನಡೆದಿದೆ ಎಂಬುದು ಖಚಿತವಾಗಿದೆ.
ಡಿಸೆಂಬರ್ 20, 2019ರಂದು ಹಿಂದಿ ನ್ಯೂಸ್ 18 ಮಾಡಿದ ವರದಿಯ ಪ್ರಕಾರ, ಮಾಹಿತಿಯ ಪ್ರಕಾರ,ಶುಕ್ರವಾರದ ಪ್ರಾರ್ಥನೆಗಳುಇದಾದ ನಂತರ, ನಗರದ ಕೊತ್ವಾಲಿ ಪೊಲೀಸ್ ಠಾಣೆ ಪ್ರದೇಶದ ಮದೀನಾ ಮಸೀದಿ ಬಳಿ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅದೇ ಸಮಯದಲ್ಲಿ, ಪೊಲೀಸರು ಕೋಲುಗಳಿಂದ ತೀವ್ರವಾಗಿ ಹೊಡೆದರು. ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ. ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಅರ್ಧ ಡಜನ್ ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಗರದ ಕೊತ್ವಾಲಿ, ರಾಜ್‌ಘಾಟ್ ಮತ್ತು ತಿವಾರಿಪುರ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಡಿಸೆಂಬರ್ 20, 2019ರ ಪತ್ರಿಕಾ ವರದಿಯಲ್ಲೂ ಸಿಎಎ ವಿರುದ್ಧ ಗೋರಖ್‌ಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಯಿತು ಇದರ ವಿರುದ್ಧ ಪೊಲೀಸರು ಲಾಠಿಚಾರ್ಜ್ ಮಾಡಿದರು, ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದಿದೆ.

Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, 2019ರಲ್ಲಿ ಗೋರಖ್ ಪುರದಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯನ್ನು ವಕ್ಫ್ ವಿರುದ್ಧದ ಪ್ರತಿಭಟನೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Also Read: ಸುಧಾ ಮೂರ್ತಿ ಹೂಡಿಕೆ ವೇದಿಕೆಯನ್ನು ಪ್ರಚಾರ ಮಾಡುತ್ತಿರುವ ವೀಡಿಯೋ ನಕಲಿ
Our Sources
YouTube Video By Live Hindustan, Dated: December 20, 2019
Report By Hindi News 18, Dated: December 20, 2019
Report By Patrika, Dated: December 20, 2019