Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹೂಡಿಕೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಅನುಮೋದನೆ, ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಘರ್ಷಣೆಗೆ ಆರ್ಎಸ್ಎಸ್ ಸಂಚನ್ನು ಡೊನಾಲ್ಡ್ ಟ್ರಂಪ್ ಬಹಿರಂಗ ಪಡಿಸಿದ್ದಾರೆ ಎಂಬ ನಕಲಿ ವೀಡಿಯೋಗಳು ಈ ವಾರ ಪ್ರಮುಖವಾಗಿದ್ದವು. ಇದರೊಂದಿಗೆ ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ, ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ, ತಾವರೆ ಬೀಜ ಹಾಲಿನಲ್ಲಿ ಕುದಿಸಿ ತಿನ್ನುವುದು ರಕ್ತಹೀನತೆ, ಕೀಲು ನೋವಿಗೆ ಪ್ರಯೋಜನಕಾರಿ ಎಂಬ ಹೇಳಿಕೆಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ನಿಜವಲ್ಲ ಎಂದು ಸಾಬೀತು ಮಾಡಿದೆ.

ನಿರ್ಮಲಾ ಸೀತಾರಾಮನ್ ಹೂಡಿಕೆ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂಬಂತೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೋ ಪ್ರಕಾರ, ಯೋಜನೆಯಲ್ಲಿ ₹21,000 ಹೂಡಿಕೆ ಮಾಡುವ ಪ್ರತಿಯೊಬ್ಬ ನಾಗರಿಕನು ಮೊದಲ ತಿಂಗಳಲ್ಲಿ ₹15,00,000 ಪಡೆಯುತ್ತಾನೆ ಎಂದಿದೆ. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಇದರಲ್ಲಿರುವ ಆಡಿಯೋ ಕೃತಕವಾಗಿದ್ದು, ವೀಡಿಯೋ ನಕಲಿಯಾಗಿದೆ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆ ಎನ್ನುವುದು ನಿಜವಲ್ಲ,. ಈ ತ್ರಿಶೂಲದ ಚಿತ್ತಾರದ ಫೊಟೋ 2019ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಅರುಣಾಚಲ ಪ್ರದೇಶದಲ್ಲಿ ಜನಾಂಗೀಯ ಸಂಘರ್ಷವನ್ನು ಹುಟ್ಟುಹಾಕಲು ಆರ್ಎಸ್ಎಸ್ ನಡೆಸುತ್ತಿರುವ ಪಿತೂರಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ ಎಂದು ಹೇಳುವ ವೀಡಿಯೋ ಒಂದು ವೈರಲ್ ಆಗಿದೆ. ಸತ್ಯಶೋಧನೆ ವೇಳೆ ಈ ವೀಡಿಯೋ ನಿಜವಾದ್ದಲ್ಲ, ಎಐ ನಿಂದ ಮಾಡಿದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಹೇಳಿಕೆ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದಾಗ, ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ ಎನ್ನುವುದು ತಪ್ಪಾಗಿದೆ. ಹಳೆಯ ಹಣಕಾಸಿನ ವಿಚಾರದಲ್ಲಿ ಬಂಧುಗಳ ನಡುವಿನ ಕಲಹ ಇದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ತಾವರೆ ಬೀಜ ಹಾಲಿನಲ್ಲಿ ಕುದಿಸಿ ತಿನ್ನುವುದರಿಂದ ರಕ್ತಹೀನತೆಗೆ, ಕೀಲು ನೋವಿಗೆ ಪ್ರಯೋಜನಕಾರಿ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಶೋಧನೆ ನಡೆಸಿದಾಗ, ತಾವರೆ ಬೀಜ ಹಾಲಿನಲ್ಲಿ ಕುದಿಸಿ ತಿನ್ನುವುದರಿಂದ ರಕ್ತಹೀನತೆಗೆ, ಕೀಲು ನೋವಿಗೆ ಪ್ರಯೋಜನಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ, ಉತ್ತಮ ಆಹಾರದ ಭಾಗವಾಗಿ ಹಾಲು, ತಾವರೆ ಬೀಜ ಸೇವನೆ ಮಾಡಬಹುದು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
Ishwarachandra B G
November 1, 2025
Ishwarachandra B G
October 29, 2025
Vasudha Beri
October 24, 2025