Weekly wrap: ಸೇನಾ ವಾಹನಕ್ಕೆ ತಡೆ, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ವಾರದ ಕ್ಲೇಮ್ ಗಳ ನೋಟ

weekly wrap thumnbnail

Authors

ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಗಾಯಾಳು ಯೋಧನನ್ನು ಸಾಗಿಸುತ್ತಿದ್ದ ಸೇನಾ ವಾಹನ ತಡೆದಿದ್ದಾರೆ, ಹಿಂದೂಗಳೊಂದಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ಬಹಿಷ್ಕರಿಸಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರು ಬೆಂಗಳೂರಿನಲ್ಲಿ ಕರೆ ನೀಡಿದ್ದಾರೆ, ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲೇ ಬಟ್ಟೆ ಬಿಚ್ಚಿದ್ದಾರೆ, ಬೆಂಗಳೂರಿನ ಜೋಡಿ ಕೊಲೆಗೆ ಕೋಮು ಬಣ್ಣದೊಂದಿಗೆ ಪ್ರಸಾರ, ಕಿತ್ತಳೆಯಲ್ಲಿರುವ ವಿಟಮಿನ್‌ ಸಿ ಕಣ್ಣಿನ ಪೊರೆ ಬಾರದಂತೆ ತಡೆಯುತ್ತದೆ ಎಂಬ ಕ್ಲೇಮ್‌ಗಳು ಈ ವಾರ ಸುದ್ದಿಮಾಡಿವೆ. ವಾರದ ಕ್ಲೇಮ್‌ಗಳಲ್ಲಿ ಮೂರು ಕ್ಲೇಮುಗಳು ಕೋಮು ವಿಚಾರದ್ದಾಗಿದೆ. ಈ ಕ್ಲೇಮ್‌ ಗಳನ್ನು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಮತ್ತು ತಪ್ಪಾದ ಸಂದರ್ಭಗಳನ್ನು ಹೊಂದಿವೆ ಎಂಬುದನ್ನು ಕಂಡುಕೊಂಡಿದೆ.

ಸೇನಾ ವಾಹನ ತಡೆದ ಮುಸ್ಲಿಮರು, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ಹಿಂದೂ ಬಹಿಷ್ಕಾರಕ್ಕೆ ಕರೆ,  ವಾರದ ಕ್ಲೇಮ್‌ಗಳ ನೋಟ

ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್‌ ವೀಡಿಯೋ ಹಿಂದಿನ ಸತ್ಯವೇನು?

ಪಶ್ಚಿಮ ಬಂಗಾಳದಲ್ಲಿ ಗಾಯಗೊಂಡ ಸೇನಾಯೋಧನನ್ನು ಕರೆಯದೊಯ್ಯುವ ವೇಳೆ ಮುಸ್ಲಿಂ ಗುಂಪು ವಾಹನ ತಡೆದು ನಿಲ್ಲಿಸಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯಶೋಧನೆ ನಡೆಸಿದ ವೇಳೆ ಈ ವೀಡಿಯೋ ಪಶ್ಚಿಮ ಬಂಗಾಳದ್ದಲ್ಲ, ಇದು ಬಾಂಗ್ಲಾದೇಶದ್ದು. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಭೇಟಿ ವಿರೋಧಿಸಿ ತೀವ್ರವಾದಿ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಸೇನಾ ವಾಹನ ತಡೆದ ಮುಸ್ಲಿಮರು, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ಹಿಂದೂ ಬಹಿಷ್ಕಾರಕ್ಕೆ ಕರೆ,  ವಾರದ ಕ್ಲೇಮ್‌ಗಳ ನೋಟ

ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್‌ ವೀಡಿಯೋ ನಿಜವೇ?

ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹಿಂದೂಗಳನ್ನು ಬಹಿಷ್ಕರಿಸಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರು ಕರೆ ನೀಡಿದ್ದಾರೆ ಎಂಬ ವೀಡಿಯೋ ವೈರಲ್‌ ಆಗಿತ್ತು. ನ್ಯೂಸ್‌ಚೆಕರ್‌ ನಡೆಸಿದ ಸತ್ಯಶೋಧನೆಯಲ್ಲಿ ಇದು ಬೆಂಗಳೂರಿನ ವೀಡಿಯೋ ಅಲ್ಲ, 2019ರಲ್ಲಿ ರಾಜಸ್ಥಾನದ ಬಾರ್ಮೇರ್ನದ್ದು ಎಂದು ತಿಳಿದುಬಂದಿದೆ. ಅಪಘಾತ ಪ್ರಕರಣವೊಂದರ ಸಂದರ್ಭ ಪ್ರತಿಭಟನೆಯ ವೇಳೆ ಮೃತರ ಸಂಬಂಧಿಕರು ಆಕ್ರೋಶ ಭರಿತರಾಗಿ ಮಾತನಾಡಿದ ವೀಡಿಯೋ ಇದಾಗಿತ್ತು. ಹೀಗೆ ಮಾತನಾಡಿದವರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಸೇನಾ ವಾಹನ ತಡೆದ ಮುಸ್ಲಿಮರು, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ಹಿಂದೂ ಬಹಿಷ್ಕಾರಕ್ಕೆ ಕರೆ,  ವಾರದ ಕ್ಲೇಮ್‌ಗಳ ನೋಟ

ಬೆಂಗಳೂರಿನ ಜೋಡಿ ಕೊಲೆ ಪ್ರಕರಣ, ಕೋಮು ಬಣ್ಣದೊಂದಿಗೆ ಮೃತರ ಫೋಟೋ ವೈರಲ್

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ  ಹಿಂದೂ ನಾಯಕರ ಕೊಲೆಗಳು ನಡೆದಿದ್ದು, ಬೆಂಗಳೂರಿನಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಕ್ಲೇಮ್‌ ಗಳು ಹರಿದಾಡಿವೆ. ‘ಹಿಂದೂ ಸ್ವಾಮೀಜಿಗಳ ಕೊಲೆ, ಇನ್ನೊಂದು ಹಿಂದೂ ನಾಯಕನ ಕೊಲೆ ನಡೆದಿದೆ ಎಂಬ ಹೇಳಿಕೆಗಳೊಂದಿಗೆ ಪೋಸ್ಟ್‌ ಗಳನ್ನುಹಂಚಿಕೊಳ್ಳಲಾಗಿದೆ. ಆದರೆ ಮೃತ ಫಣೀಂದ್ರ ಸುಬ್ರಹ್ಮಣ್ಯಂ ಅವರು ಸ್ವಾಮೀಜಿಯಲ್ಲ, ಏರೋನಿಕ್ಸ್‌ ಇಂಟರ್ನೆಟ್ ಕಂಪೆನಿಯ ಎಂ.ಡಿ. ವ್ಯವಹಾರ ಕುರಿತ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಸೇನಾ ವಾಹನ ತಡೆದ ಮುಸ್ಲಿಮರು, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ಹಿಂದೂ ಬಹಿಷ್ಕಾರಕ್ಕೆ ಕರೆ,  ವಾರದ ಕ್ಲೇಮ್‌ಗಳ ನೋಟ

ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಭಾಷಣ ವೇಳೆ ಬಟ್ಟೆ ಬಿಚ್ಚಿದ್ದಾರೆಯೇ, ಸತ್ಯ ಏನು?

ಬಡತನ, ಭ್ರಷ್ಟಾಚಾರಗಳನ್ನು ವಿರೋಧಿಸಿ, ಮೆಕ್ಸಿಕನ್‌ ಸಂಸತ್‌ ಸದಸ್ಯರೊಬ್ಬರು ಸಂಸತ್ತಿನ್ಲಲೇ ಬಟ್ಟೆ ಬಿಚ್ಚಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಇದು, ಸಂಸದ ಆಂಟೋನಿಯೊ ಗಾರ್ಸಿಯಾ ಅವರು 2013ರಲ್ಲಿ ಮೆಕ್ಸಿಕೋ ಸಂಸತ್ತಿನಲ್ಲಿ ತೈಲ ಮಸೂದೆ ವಿರುದ್ಧ ಮಾಡಿದ ಭಾಷಣ ವೇಳೆ ಅದನ್ನು ಪ್ರತಿಭಟಿಸಿ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ

ಸೇನಾ ವಾಹನ ತಡೆದ ಮುಸ್ಲಿಮರು, ಮೆಕ್ಸಿಕನ್‌ ಸಂಸದನ ಬೆತ್ತಲೆ ಭಾಷಣ, ಹಿಂದೂ ಬಹಿಷ್ಕಾರಕ್ಕೆ ಕರೆ,  ವಾರದ ಕ್ಲೇಮ್‌ಗಳ ನೋಟ

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆಯೇ?

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನ್ಯೂಸ್‌ಚೆಕರ್‌ ಮತ್ತು ಥಿಪ್‌ ಸತ್ಯಶೋಧನೆಯಲ್ಲಿ ವಿಟಮಿನ್‌ ಸಿ ಇರುವ ಕಿತ್ತಳೆ ಸೇರಿದಂತೆ ಸಮತೋಲಿತ ಆಹಾರ, ಜೀವನಶೈಲಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors