Fact Check: ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಭಾಷಣ ಮಾಡಿದ ವೇಳೆ ಬಟ್ಟೆ ಬಿಚ್ಚಿದ್ದಾರೆಯೇ, ಸತ್ಯ ಏನು?

ಮೆಕ್ಸಿಕೋ, ಸಂಸದ, ತೈಲ ಮಸೂದೆ, ಬಟ್ಟೆ ಬಿಚ್ಚಿದ,

Claim
ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಭಾಷಣ ವೇಳೆ ಬಟ್ಟೆ ಬಿಚ್ಚಿದ್ದಾರೆ

Fact
ಸಂಸದ ಆಂಟೋನಿಯೊ ಗಾರ್ಸಿಯಾ ಅವರು 2013ರಲ್ಲಿ ಮೆಕ್ಸಿಕೋ ಸಂಸತ್ತಿನಲ್ಲಿ ತೈಲ ಮಸೂದೆ ವಿರುದ್ಧ ಮಾಡಿದ ಭಾಷಣ ವೇಳೆ ಅದನ್ನು ಪ್ರತಿಭಟಿಸಿ ಹೀಗೆ ಮಾಡಿದ್ದಾರೆ.

ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆಯೊಂದಿಗೆ ರಾಜಕಾರಣಿಗಳು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಭಾವನೆ ಸಾರ್ವತ್ರಿಕವಾಗಿರುವಾಗಲೇ, ಬಡತನ, ಭ್ರಷ್ಟಾಚಾರಗಳನ್ನು ವಿರೋಧಿಸಿ, ಮೆಕ್ಸಿಕನ್‌ ಸಂಸತ್‌ ಸದಸ್ಯರೊಬ್ಬರು ಸಂಸತ್ತಿನ್ಲಲೇ ಬಟ್ಟೆ ಬಿಚ್ಚಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಪೋಸ್ಟ್‌ನಲ್ಲಿ, “ಮೆಕ್ಸಿಕೋದ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ, ಸಂಸತ್ ಸದಸ್ಯನೊಬ್ಬ ತನ್ನ ಎಲ್ಲಾ ಬಟ್ಟೆಗಳನ್ನು ಕಳಚಿ ಹಾಕಿ ಸಂಸತ್ ನಲ್ಲಿ ಮಾತನಾಡುತ್ತಾನೆ. ಆಗ ಅಲ್ಲಿನ ಅಧ್ಯಕ್ಷ , ನಿನಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳುತ್ತಾನೆ. ನನ್ನನ್ನು ಬೆತ್ತಲೆ ನೋಡಿದಾಗ ನಿನಗೆ ನಾಚಿಕೆಯಾಗುತ್ತಿದೆಯೇ.? ದೇಶದ ಕೆಟ್ಟ ಆರ್ಥಿಕ ಸ್ಥಿತಿ, ನಿರುದ್ಯೋಗ, ಉಚಿತವಾಗಿ ಕೊಟ್ಟು ಜನರನ್ನೂ ಭ್ರಷ್ಟರನ್ನಾಗಿಸಿ, ತಾವೂ ಭ್ರಷ್ಟರಾಗಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಈ ದೇಶವನ್ನು ಲೂಟಿ ಮಾಡಿ , ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವುದನ್ನು ನೋಡಿ ನಿನಗೆ ನಾಚಿಕೆಯಾಗುವುದಿಲ್ಲವೇ.? ಇಡೀ ದೇಶ ಈಗ ಬೆತ್ತಲೆಯಾಗಿರುವುದು ನಿನಗೆ ಕಾಣುತ್ತಿಲ್ಲವೇ.‌? ಎಂದು ಕೇಳುತ್ತಾನೆ. ಪರದೇಶದಲ್ಲಿ MP, MLA ಗಳು ಪ್ರಶ್ನೆ ಕೇಳುತ್ತಾರೆ. ನಮ್ಮ ದೇಶದಲ್ಲಿ ಆಯ್ಕೆಯಾಗಿರುವ ರಾಜಕಾರಣಿಗಳು ಈ ರೀತಿ ಪ್ರಶ್ನೆ ಕೇಳುತ್ತಾರೆಯೇ?” ಎಂದು ಹೇಳಿದೆ.

Also Read: ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್‌ ವೀಡಿಯೋ ಹಿಂದಿನ ಸತ್ಯವೇನು?

ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಮತ್ತುಇಲ್ಲಿ ನೋಡಬಹುದು.

ಮೆಕ್ಸಿಕನ್‌ ಸಂಸದರು ಇಂತಹ ವಿಲಕ್ಷಣವಾದ ಪ್ರತಿಭಟನೆ ನಡೆಸಿದ್ದಾರೆಯೇ ಎಂಬುದನ್ನು ಸತ್ಯಶೋಧನೆ ಮಾಡಲು ನ್ಯೂಸ್ ಚೆಕರ್‌ ಮುಂದಾಗಿದ್ದು ಈ ವೇಳೆ ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ವೈರಲ್‌ ಚಿತ್ರದ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. ಇದರೊಂದಿಗೆ ನಾವು ಕೀವರ್ಡ್ ಸರ್ಚ್ ಮಾಡಿದ್ದೇವೆ.

ಈ ವೇಳೆ ಬಿಬಿಸಿ ನ್ಯೂಸ್‌ ಡಿಸೆಂಬರ್ 13, 2013ರಂದು ಪ್ರಕಟಿಸಿದ ವರದಿ ಲಭ್ಯವಾಗಿದೆ. ಇದರಲ್ಲಿ “ಮೆಕ್ಸಿಕನ್‌ ಸಂಸದ ಪಾರ್ಲಿಮೆಂಟ್ನಲ್ಲಿ ವಿವಾದಿತ ಇಂಧನ ನೀತಿ ಕುರಿತಾಗಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದರು. ಈ ನೀತಿಯಿಂದ ಖಾಸಗಿ ತೈಲ ಕಂಪೆನಿಗಳು ಸರ್ಕಾರಿ ಸ್ವಾಮ್ಯದ ತೈಲ ವಲಯಗಳಿಂದ ತೈಲ ತೆಗೆದು ಲಾಭ ಮಾಡುವಂತಾಗುತ್ತದೆ. ಇದನ್ನು ವಿರೋಧಿಸಿ ಅವರು ಬಟ್ಟೆ ಬಿಚ್ಚಿ ಪ್ರತಿಭಟಿಸಿದರು” ಎಂದಿದೆ.

ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಭಾಷಣ ವೇಳೆ ಬಟ್ಟೆ ಬಿಚ್ಚಿದ್ದಾರೆಯೇ, ಸತ್ಯ ಏನು?
ಬಿಬಿಸಿ ವರದಿ

ಸೆಪ್ಟೆಂಬರ್ 7, 2021 ರಂದು ಎಫ್‌ಎಫ್‌ಪಿ ಫ್ಯಾಕ್ಟ್‌ ಚೆಕ್‌ ಪ್ರಕಟಿಸಿದ ವರದಿಯಲ್ಲಿ, “ಸೆಪ್ಟೆಂಬರ್ 2021ರ ವೇಳೆ ಥಾಯ್‌ ಸಾಮಾಜಿಕ ಜಾಲತಾಣದಲ್ಲಿ ಮೆಕ್ಸಿಕನ್‌ ರಾಜಕಾರಣಿಯೊಬ್ಬರ ಫೋಟೋದೊಂದಿಗೆ ತಪ್ಪಾದ ಹೇಳಿಕೆಯೊಂದಿಗೆ ಫೋಟೋ ಹರಿದಾಡುತ್ತಿದೆ. ಅವರು ಸಂಸತ್ತಿನಲ್ಲಿ ಭಾಷಣದ ವೇಳೆ ಭ್ರಷ್ಟಾಚಾರ ಮತ್ತು ಬಡತನ ವಿರುದ್ಧ ಮಾತನಾಡುತ್ತ ಬಟ್ಟೆಗಳನ್ನು ತೆಗದು ಎಂದಿದೆ. ಆದರೆ ಇದು ನಿಜಕ್ಕೂ 2013 ಡಿಸೆಂಬರ್ ನಲ್ಲಿ ಇಂಧನ ಕಾಯ್ದೆ ವಿರುದ್ಧವಾಗಿದೆ” ಎಂದು ಹೇಳಲಾಗಿದೆ.

Also Read: ಫಾಸ್ಟ್ ಅಂಡ್ ಫ್ಯೂರಿಯಸ್ 8 ವೀಡಿಯೋಕ್ಕೆ ಫ್ರಾನ್ಸ್ ಹಿಂಸಾಚಾರದ ಲಿಂಕ್‌!

ಇದೇ ಘಟನೆಯನ್ನು ಇಂಡಿಯಾ ಟುಡೇ ಡಿಸೆಂಬರ್ 13, 2013ರಂದು ವರದಿ ಮಾಡಿದ್ದು, “ಮೆಕ್ಸಿಕನ್ ಕಾಂಗ್ರೆಸ್‌ನಲ್ಲಿ ಇಂಧನ ಉದ್ಯಮವನ್ನು ಖಾಸಗೀಕರಣಗೊಳಿಸುವ ಮಸೂದೆಯ ಮೇಲಿನ ಮತದಾನ ಸಂದರ್ಭದಲ್ಲಿ ಎಡಪಂಥೀಯ ಡೆಮಾಕ್ರಟಿಕ್ ರೆವಲ್ಯೂಷನ್ ಪಾರ್ಟಿಯ ಕಾಂಗ್ರೆಸ್ಸಿಗರ ಮುಷ್ಟಿಯುದ್ಧ, ಬಿಸಿ ಬಿಸಿ ಚರ್ಚೆ ಮತ್ತು ಬಟ್ಟೆ ಬಿಚ್ಚಿ ಬೆತ್ತಲಾದ ಘಟನೆಗಳು ನಡೆದಿವೆ” ಎಂದಿದೆ. ಜೊತೆಗೆ ಪಾರ್ಟಿ ಆಫ್ ದಿ ಡೆಮಾಕ್ರಟಿಕ್ ರೆವಲ್ಯೂಷನ್ (PRD) ನ ಸಂಸದ ಆಂಟೋನಿಯೊ ಗಾರ್ಸಿಯಾ ಅವರು ಮೆಕ್ಸಿಕೋ ನಗರದಲ್ಲಿ ಮೆಕ್ಸಿಕೋದ ತೈಲ ಸಂಪತ್ತನ್ನು ಹೊರತೆಗೆಯುವುದನ್ನು ಸಾಂಕೇತಿಸುವ ಬಗ್ಗೆ  ರಾತ್ರಿಯ ಚರ್ಚೆಯ ಸಮಯದಲ್ಲಿ ವೇದಿಕೆಯ ಮೇಲೆ ತಮ್ಮ ಭಾಷಣದ ಸಮಯದಲ್ಲಿ ಬಟ್ಟೆಗಳನ್ನು ಕಿತ್ತೆಸೆದರು” ಎಂದಿದೆ.

ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಭಾಷಣ ವೇಳೆ ಬಟ್ಟೆ ಬಿಚ್ಚಿದ್ದಾರೆಯೇ, ಸತ್ಯ ಏನು?
ಇಂಡಿಯಾ ಟುಡೇ ವರದಿ

Conclusion

ಈ ಸತ್ಯಶೋಧನೆಯ ಪ್ರಕಾರ, ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್‌ ಸಂಸದ ಸಂಸತ್ತಿನಲ್ಲಿ ಬಟ್ಟೆ ಬಿಚ್ಚಿ ಪ್ರತಿಭಟಿಸಿ ಭಾಷಣ ಮಾಡಿದ್ದಾರೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಸಂಸದ ಆಂಟೋನಿಯೊ ಗಾರ್ಸಿಯಾ ಅವರು 2013ರಲ್ಲಿ ತೈಲ ಮಸೂದೆ ವಿರುದ್ಧ ಮಾಡಿದ ಭಾಷಣ ವೇಳೆ ಅದನ್ನು ಪ್ರತಿಭಟಿಸಿ ಹೀಗೆ ಮಾಡಿದ್ದಾರೆ.

Result: Missing Context

Our Sources

Report By BBC News, Dated: December 13, 2021

Report By AFP Fact Check, Dated: September 7, 2021

Report By India Today, Dated: December 13, 2013


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.