Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

Weekly wrap

Authors

ಹಮಾಸ್‌-ಇಸ್ರೇಲ್‌ ಸಂಘರ್ಷ ಮುಂದುವರಿದಿರುವಂತೆ, ಆ ಕುರಿತ ಕ್ಲೇಮ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ, ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ, ಕರ್ನಾಟಕದಲ್ಲಿ ವಾಹನ ಚಕ್ರ ಹೋಗುವಲ್ಲಿ ಮಾತ್ರವೇ ಡಾಮರು ಹಾಕಲಾಗಿದೆ, ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣ ಎಂದು ಎಐ ಚಿತ್ರ, ಮೊಳಕೆಯೊಡೆದ ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಕ್ಲೇಮ್‌ ಗಳು ಈ ವಾರ ಹೈಲೈಟ್ ಆಗಿದ್ದವು. ಈ ಬಗ್ಗೆ ನ್ಯೂಸ್‌ ಚೆಕರ್‌ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಸಾಬೀತು ಪಡಿಸಿದೆ.

Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?

ಹಮಾಸ್‌-ಇಸ್ರೇಲ್‌ ಸಂಘರ್ಷದ ಮಧ್ಯೆ ಹಮಾಸ್‌ ದಾಳಿಕೋರರು ನಾಟಕ ಮಾಡುತ್ತಿದ್ದಾರೆ ಎಂದು ಶವಯಾತ್ರೆಯೊಂದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಸತ್ಯಶೋಧನೆ ನಡೆಸಿದಾಗ ಇದು ಹಮಾಸ್ ವೀಡಿಯೋವಲ್ಲ, ಜೋರ್ಡಾನ್‌ ನಲ್ಲಿ ಕೋವಿಡ್ ವೇಳೆ ನಿರ್ಬಂಧಗಳಿಂದ ಪಾರಾಗಲು ಮಾಡಿದ ನಾಟಕವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು!

ಬೆಂಗಳೂರಿನಲ್ಲಿ ವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಆರಂಭಿಸಲಾಗಿದೆ ಎಂಬ ಹೇಳಿಕೆಯುಳ್ಳ ವಾಟ್ಸಾಪ್‌ ಸಂದೇಶವೊಂದು ವೈರಲ್‌ ಆಗಿತ್ತು. ಆದರೆ ಸತ್ಯಶೋಧನೆಯಲ್ಲಿ ವಿಧಾನಸೌಧದಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು. ಅಲ್ಲಿಗೆ ನೇರ ಬಸ್‌ ಇಲ್ಲ ಮತ್ತು ವೈರಲ್‌ ಪೋಸ್ಟ್ ನಲ್ಲಿ ಬಳಸಿದ ಚಿತ್ರ ತಿರುಚಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

ಕರ್ನಾಟಕದಲ್ಲಿ ವಾಹನದ ಚಕ್ರ ಹೋಗುವಲ್ಲಿ ಮಾತ್ರವೇ ಡಾಮರು ಹಾಕಲಾಗಿದೆ ಎನ್ನುವುದು ನಿಜವೇ?

ಗ್ಯಾರೆಂಟಿ ಸ್ಕೀಂಗಳಿಂದ ಕರ್ನಾಟಕ ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾಗಿದ್ದು, ವಾಹನದ ಚಕ್ರಗಳು ಹೋಗುವ ಜಾಗಕ್ಕೆ ಮಾತ್ರವೇ ಡಾಮರು ಹಾಕಲಾಗಿದೆ ಎಂದು ಹೇಳುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯರ್ಶೋಧನೆ ವೇಳೆ ಇದು ಕರ್ನಾಟಕದ ಚಿತ್ರವಲ್ಲ, ಬಲ್ಗೇರಿಯಾದ್ದು ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರ ಹೀಗಿದೆಯೇ?

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ನಿಲ್ದಾಣದ ಚಿತ್ರಣ ಎಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪರಿಶೀಲನೆ ವೇಳೆ ಇದು ನಿಜವಾದ್ದಲ್ಲ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್ ನೆರವಿನಿಂದ ಮಾಡಿದ ಚಿತ್ರಗಳು ಎಂದು ಕಂಡುಬಂದಿವೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

Weekly wrap: ಹಮಾಸ್‌ನಿಂದ ಶವಯಾತ್ರೆ ನಾಟಕ, ಪರಪ್ಪನ ಅಗ್ರಹಾರಕ್ಕೆ 420 ಬಸ್‌, ವಾರದ ಕ್ಲೇಮ್‌ ನೋಟ

ಮೊಳಕೆಯೊಡೆದ ಕಡಲೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನ ಎನ್ನುವುದು ಸತ್ಯವೇ?

ಮೊಳಕೆಯೊಡೆದ ಕಡಲೆಕಾಯಿಯನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳಿವೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ, ಮೊಳಕೆಯೊಡೆದ ಕಡಲೆಕಾಯಿ ತಿನ್ನುವುದರಿಂದ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳಿವೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಆದರೆ ಉತ್ತಮ ಮತ್ತು ಸಮತೋಲಿತ ಆಹಾರದ ಭಾಗವಾಗಿ ಅದನ್ನು ತಿನ್ನಬಹುದು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors