Authors
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಹೊತ್ತಿನಲ್ಲೇ ರಾಜಕೀಯ ಕುರಿತ ಕ್ಲೇಮುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದ್ದವು. ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ವೇಳೆ ಕಲ್ಮಾ ಓದಲಾಗಿದೆ, ಕಾಂಗ್ರೆಸ್ ಚಿಹ್ನೆ ಇಸ್ಲಾಂ ಮೂಲದ್ದು, ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು ಎಂಬ ಕ್ಲೇಮುಗಳು ಹರಿದಾಡಿವೆ. ಇದರೊಂದಿಗೆ ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎಂಬ ಆರೋಗ್ಯ ಕ್ಲೇಮ್ ಕೂಡ ಇತ್ತು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಸುಳ್ಳು ಎಂದು ಸಾಕ್ಷ್ಯಗಳೊಂದಿಗೆ ಸಾಬೀತು ಪಡಿಸಿದೆ.
ಜೈಪುರದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಸಂದರ್ಭ ಕಲ್ಮಾ ಓದಲಾಗಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು
ಜೈಪುರ ಕಾಂಗ್ರೆಸ್ ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ ಇಸ್ಲಾಮಿಕ್ ಧರ್ಮಗ್ರಂಥ ಕುರಾನ್‌ನ ಶ್ಲೋಕಗಳನ್ನು ಪಠಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಜೈಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನಾ ಸಭೆಯ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಾಂಗ್ರೆಸ್ ಚಿಹ್ನೆ ಇಸ್ಲಾಮಿನ ಮೂಲದ್ದೇ, ಇಲ್ಲ ವೈರಲ್ ಕ್ಲೇಮ್ ಸುಳ್ಳು
ಸಾಮಾಜಿಕ ಜಾಲತಾಣದಲ್ಲಿ ಹಲವು ಬಳಕೆದಾರರು ಕಾಂಗ್ರೆಸ್ ಚಿಹ್ನೆಯೊಂದಿಗೆ ಚಿನ್ನದಿಂದ ಮಾಡಿದ ಅರೇಬಿಕ್ ಅಕ್ಷರಗಳಿಂದ ಅಲಂಕರಿಸಲ್ಪಟ್ಟ ಕೈಯ ಅಲಂಕಾರಿಕ ಮಾದರಿಯ (ಇಸ್ಲಾಮಿಕ್ ಪ್ರತಿಮಾಶಾಸ್ತ್ರದ ಚಿತ್ರ ಎಂದು ಹೇಳಿರುವ) ಚಿತ್ರವನ್ನು ತೋರಿಸುವ ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಚುನಾವಣಾ ಆಯೋಗ ಪ್ರಸ್ತುತ ಕಾಂಗ್ರೆಸ್ ಬಳಸುತ್ತಿರುವ ಕೈ ಚಿಹ್ನೆಯನ್ನು ಕೊಟ್ಟಿದೆ. ಇದಕ್ಕೆ ಇಸ್ಲಾಮಿನ ಗುರುತುಗಳೊಂದಿಗೆ ಸಂಬಂಧ ಇಲ್ಲ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ರಾಮ ಮಂದಿರ ಭೂಮಿ ಪೂಜೆ ದಿನ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರೇ?.
ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆದ ದಿನದಂದು ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಬಂದರು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹರಿದಾಡಿದೆ. ಆದರೆ ಸತ್ಯಶೋಧನೆ ವೇಳೆ ವೈರಲ್ ಚಿತ್ರವು 2022 ರಲ್ಲಿ ಬೆಲೆ ಏರಿಕೆಯ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯದ್ದಾಗಿದೆ ಮತ್ತು ರಾಮಮಂದಿರ ಭೂಮಿ ಪೂಜೆ 2020 ರಲ್ಲಿ ನಡೆದಿದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಎಡಭಾಗದಲ್ಲಿ ಮಲಗಿದರೆ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎಂಬುದು ನಿಜವೇ?
ರಾತ್ರಿ ವೇಳೆ ಎಡಭಾಗದಲ್ಲಿ ಮಲಗುಗುವುದು ಉತ್ತಮ. ಇದರಿಂದ ದೇಹದ ವಿಷಕಾರಿ ಅಂಶಗಳು ಹೊರಹೋಗಲು ಸಹಾಯವಾಗುತ್ತದೆ ಎಂದು ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ಪ್ರಕಾರ, ಎಡಭಾಗದಲ್ಲಿ ಮಲಗುವುದರಿಂದ ಯಕೃತ್ತಿನ ಕಾಯಿಲೆ ಬರುವುದಿಲ್ಲ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ ಇಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.