Authors
ಜಿಹಾದಿಗಳು ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ, ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿದರೆ ಆಸ್ಪತ್ರೆಗೆ ಹೋಗುವುದೇ ಬೇಡ ಎನ್ನುವ ಹೇಳಿಕೆಗಳು ಹರಿದಾಡಿವೆ. ಈ ಕುರಿತ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್ ನಡೆಸಿದ್ದು, ಇವು ತಪ್ಪು ಹೇಳಿಕೆಗಳು ಎಂದು ಕಂಡುಬಂದಿದೆ.
ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ ಹಿಂದಿನ ಸತ್ಯವೇನು?
ಜಿಹಾದಿಗಳು ವಂದೇ ಭಾರತ್ ರೈಲಿನ ಕಿಟಕಿ ಗಾಜುಗಳನ್ನು ಒಡೆಯುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಯಾರೂ ಉದ್ದೇಶಪೂರ್ವಕವಾಗಿ ರೈಲಿನ ಕಿಟಕಿಯ ಗಾಜನ್ನು ಒಡೆಯುತ್ತಿಲ್ಲ. ಬದಲಾಗಿ, ಅಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಆದ್ದರಿಂದ ಜಿಹಾದಿಗಳಿಂದ ಭಾರತೀಯ ರೈಲ್ವೇ ಮೇಲೆ ದಾಳಿ ಎನ್ನುವುದು ತಪ್ಪಾಗಿದೆ. ಈ ಕುರಿತು ಇಲ್ಲಿ ಓದಿ
ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ತೋರಿಸಿದ ವೀಡಿಯೋ ಈಗಿನದ್ದಲ್ಲ!
ಮೋದಿಯವರ ಗುಜರಾತ್ ನಲ್ಲಿ ಉದ್ಯೋಗಕ್ಕಾಗಿ ನೂಕುನುಗ್ಗಲು ಎಂದು ವೀಡಿಯೋ ಒಂದನ್ನು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ಪ್ರಕಾರ ಪ್ರಕಾರ, ಗುಜರಾತಿನಲ್ಲಿ ನೇಮಕಾತಿ ಸಂದರ್ಭ ಆಕಾಂಕ್ಷಿಗಳ ನೂಕುನುಗ್ಗಲು ನಡೆದಿರುವುದು 2021ರ ಘಟನೆಯಾಗಿದೆ. ಈ ಕುರಿತು ಇಲ್ಲಿ ಓದಿ
ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಹಿಂದಿನ ಸತ್ಯವೇನು?
ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸತ್ಯಶೋಧನೆ ಪ್ರಕಾರ ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ನಕಲಿಯಾಗಿದ್ದು, ಇದರ ಬಗ್ಗೆ ಪೊಲೀಸರು 2011ರಲ್ಲಿ ಕ್ರಮ ಕೈಗೊಂಡಿದ್ದರು. ಈ ಕುರಿತು ಇಲ್ಲಿ ಓದಿ
ಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿದರೆ ಆಸ್ಪತ್ರೆಗೆ ಹೋಗುವುದೇ ಬೇಡ ಎನ್ನುವುದು ಸತ್ಯವೇ?
ಬಿಸಿನೀರು, ಮಧ್ಯಾಹ್ನ ಮಜ್ಜಿಗೆ ಮತ್ತು ರಾತ್ರಿ ಅರಿಶಿನ ಹಾಲು ಕುಡಿಯುವುದರಿಂದ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಶೋಧನೆಯ ಪ್ರಕಾರ ಬಿಸಿನೀರು, ಮಜ್ಜಿಗೆ, ಅರಿಶಿನ ಹಾಕಿದ ಹಾಲು ಕುಡಿಯುವುದು ಉತ್ತಮ ಆರೋಗ್ಯದ ಅಭ್ಯಾಸಗಳು, ಆದರೆ ಇದು ಔಷಧವಲ್ಲ, ರೋಗ ತಡೆಗೆ ನಿರ್ಣಾಯಕವೂ ಅಲ್ಲ ಎಂದು ಗೊತ್ತಾಗಿದೆ. ಈ ಕುರಿತು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.