Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಹಿಜಾಬ್ ಧರಿಸದ ಕಾರಣಕ್ಕೆ/ವಿದೇಶಿ ಮಹಿಳೆಯರಿಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ
Fact
ಬಾಂಗ್ಲಾದೇಶದ ನಟಿ ಮಾಡೆಲ್ ಮಿಶ್ತಿ ಸುಬಾಸ್ ಅವರು ಶೇಖ್ ಹಸೀನಾ ಅವರ ಜನ್ಮದಿನದಂದು ಟಿಎಸ್ ಸಿಯಲ್ಲಿ ಕೇಕ್ ಕತ್ತರಿಸಲು ಮುಂದಾಗಿದ್ದ ವೇಳೆ ಅದಕ್ಕೆ ವಿರೋಧ ವ್ಯಕ್ತವಾಯಿತು. ಅವರು ಹಿಜಾಬ್ ಧರಿಸದ್ದ ಕಾರಣಕ್ಕೆ ಅಥವಾ ವಿದೇಶಿ ಮಹಿಳೆ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದಲ್ಲ
ಹಿಜಾಬ್ ಧರಿಸದ ಕಾರಣಕ್ಕೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬಳು ರಿಕ್ಷಾದಲ್ಲಿ ಕುಳಿತಿದ್ದಾಗ ಕೆಲವು ಸಣ್ಣ ಹುಡುಗರು ಅವಳ ರಿಕ್ಷಾವನ್ನು ಹಿಂದಿನಿಂದ ತಳ್ಳುತ್ತಿರುವುದನ್ನು ಕಾಣಬಹುದು.
ಇತರ ಎಕ್ಸ್-ಹ್ಯಾಂಡಲ್ಗಳು ಅವರು ಅಮೆರಿಕನ್ ಪ್ರಜೆಯಾಗಿದ್ದು, ಬಾಂಗ್ಲಾದೇಶದಲ್ಲಿ ರಜಾದಿನಗಳನ್ನು ಕಳೆಯುವಾಗ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಹೇಳುತ್ತವೆ. ಇದೇ ರೀತಿ ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, ಬಾಂಗ್ಲಾದೇಶದಲ್ಲಿ ವಿದೇಶಿಗರಿಗೆ ಕಿರುಕುಳ ನೋಡಿ, ಇನ್ನೂ ಅಪ್ರಾಪ್ತ ಬಾಲಕರು ಅವರು, ಇನ್ಯಾವ ಶಿಕ್ಷಣ, ಸಂಸ್ಕಾರ, ನೀತಿ, ಶಿಸ್ತಿನ ವಿದ್ಯೆಯನ್ನ ಪಡೆದಿರ್ಬೋದು ಎಂದಿದೆ. ಈ ರೀತಿಯ ಪೋಸ್ಟ್ ಗಳನ್ನು ಇಲ್ಲಿ ಇಲ್ಲಿ, ಇಲ್ಲಿ ಮತ್ತು ಇಲ್ಲಿ, ಇಲ್ಲಿ, ಇಲ್ಲಿ, ವೀಕ್ಷಿಸಬಹುದು.
Also Read: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್
ವೀಡಿಯೋದ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಕೊಂಡಿದೆ.
ಹಿಜಾಬ್ ಧರಿಸಿದ ಮಹಿಳೆಗೆ ಕಿರುಕುಳ/ವಿದೇಶಿ ಮಹಿಳೆಗೆ ಕಿರುಕುಳ ಎಂಬ ಪೋಸ್ಟ್ ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದೇ ರೀತಿಯ ವೀಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ಕಂಡುಕೊಂಡಿದ್ದೇವೆ.
ಈ ವೀಡಿಯೋಗಳ ಮೂಲಕ ಅಲ್ಲಿ ಕಂಡುಬಂದ ಮಹಿಳೆ ಬಾಂಗ್ಲಾದೇಶದ ನಟಿ ಮತ್ತು ಮಾಡೆಲ್ ಆಗಿರುವ ಮಿಶ್ತಿ ಸುಬಾಸ್ ಎಂಬವರಾಗಿದ್ದಾರೆ. ಅವರ ಬಗ್ಗೆ ಎಸ್ಎ ಟಿವಿ ವರದಿಯನ್ನು ಇಲ್ಲಿ ವೀಕ್ಷಿಸಿ. ಜೊತೆಗೆ ಅವರು ಅವರು ಬಂಗಮಾತಾ ಸಾಂಸ್ಕೃತಿಕ ಜೋಟೆಯ ನಾಯಕಿಯೂ ಆಗಿದ್ದರು ಎಂದು ಗೊತ್ತಾಗಿದೆ.
ಡೈಲಿ ಇಂಕ್ವಿಲಾಬ್ ವರದಿಯ ಪ್ರಕಾರ ಸೆಪ್ಟೆಂಬರ್ 29 ರಂದು ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸಲು ಮಿಶ್ತಿ ಸುಬಾಸ್ ಅವರು ಕೇಕ್ ನೊಂದಿಗೆ ಎಎಸ್‌ಸಿಗೆ ಬಂದಿದ್ದಾರೆ. ಅಲ್ಲಿ ಅವರು ‘ಹ್ಯಾಪಿ ಗುಡ್ ಡೇ, ನನ್ನ ನಾಯಕಿ ಶೇಖ್ ಹಸೀನಾ ಅವರ ಜನ್ಮದಿನ’ ಎಂಬ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದೇ ವೇಳೆ ಹಾಜರಿದ್ದ ಮಕ್ಕಳು ‘ಸರ್ವಾಧಿಕಾರಿಗಳ ಜನ್ಮದಿನ’ ಎಂದು ಘೋಷಣೆ ಕೂಗಿದರು. ಮತ್ತು ವಾಗ್ವಾದಕ್ಕೆ ಇಳಿದರು ಎಂದಿದೆ.. ಆದಾಗ್ಯೂ, ಇಡೀ ವೀಡಿಯೋದಲ್ಲಿ ಎಲ್ಲಿಯೂ ಹಿಜಾಬ್ ವಿಚಾರ ಪ್ರಸ್ತಾಪವಾಗಿದ್ದು ಕಂಡುಬಂದಿಲ್ಲ. ಯಾವುದೇ ವೀಡಿಯೋದಲ್ಲಿಯೂ ಕೂಡ ಮಿಶ್ತಿ ಸುಬಾಸ್ ಅವರು ಈ ಕುರಿತು ಹೇಳಿಕೆ ನೀಡಿರುವುದು ಕಂಡುಬಂದಿಲ್ಲ.
ಕಾಲೇರ್ ಕಾಂತಾ, ಡೈಲಿ ಇಟ್ಟೆಫಾಕ್, ಎಸ್ಎ ಟಿವಿ ಪ್ರಕಾರ, ಸೆಪ್ಟೆಂಬರ್ 28ರಂದು ಶೇಖ್ ಹಸೀನಾ ಅವರ ಜನ್ಮದಿನ. ಆದ್ದರಿಂದ ಮಿಶ್ತಿ ಸುಬಾಸ್ ಅವರು ಕೇಕ್ ಕತ್ತರಿಸಲು ಬಂದಿದ್ದಾಗಿ ಅವರು ಅಲ್ಲಿ ಹಾಜರಿದ್ದ ಸುದ್ದಿಗಾರರಿಗೆ ತಿಳಿಸಿದರು. ಅವರ ಭಾಷಣದ ಕೆಲವು ವೀಡಿಯೋ ವರದಿಗಳನ್ನು ಇಲ್ಲಿ ವೀಕ್ಷಿಸಿ. ಈ ಪ್ರಕರಣಕ್ಕೆ ಸಂಬಂಧಿಸಿ ದೈನಿಕ್ ಬಾಂಗ್ಲಾದೇಶದ ವಿವರವಾದ ವರದಿಯನ್ನು ಇಲ್ಲಿ ನೋಡಿ.
ಈ ವರದಿಗಳಲ್ಲಿ ಶೇಖ್ ಹಸೀನಾ ಅವರ ಜನ್ಮದಿನದಂದು ಟಿಎಸ್ ಸಿಯಲ್ಲಿ ಕೇಕ್ ಕತ್ತರಿಸಲು ಮಿಶ್ತಿ ಸುಬಾಸ್ ಅವರು ಮುಂದಾಗಿದ್ದೇ ವಿರೋಧಕ್ಕೆ ಕಾರಣವಾಯಿತು ಎಂದಿದೆ.
ಈ ಸತ್ಯಶೋಧನೆ ಪ್ರಕಾರ, ಬಾಂಗ್ಲಾದೇಶದ ನಟಿ ಮಾಡೆಲ್ ಮಿಶ್ತಿ ಸುಬಾಸ್ ಅವರು ಶೇಖ್ ಹಸೀನಾ ಅವರ ಜನ್ಮದಿನದಂದು ಟಿಎಸ್ ಸಿಯಲ್ಲಿ ಕೇಕ್ ಕತ್ತರಿಸಲು ಮುಂದಾಗಿದ್ದ ವೇಳೆ ಅದಕ್ಕೆ ವಿರೋಧ ವ್ಯಕ್ತವಾಯಿತು ಎಂದು ಗೊತ್ತಾಗಿದೆ. ಮಿಶ್ತಿ ಸುಬಾಸ್ ಅವರು ಬಾಂಗ್ಲಾದೇಶದವರಾಗಿದ್ದು ಅವರು ಹಿಜಾಬ್ ಧರಿಸದ್ದ ಕಾರಣಕ್ಕೆ ಅಥವಾ ವಿದೇಶಿ ಮಹಿಳೆ ಎಂಬ ಕಾರಣಕ್ಕೆ ಕಿರುಕುಳ ನೀಡಿದ್ದಲ್ಲ ಎಂದು ತಿಳಿದುಬಂದಿದೆ.
Also Read: ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂದ ವೀಡಿಯೋ ಇಂಡೋನೇಷ್ಯಾ ಬೆಂಕಿ ಅವಘಡದ್ದು!
Our Sources
Report By dailyinqilab, Dated: September 30, 2024
YouTube Video By Kaler Kantho, Dated: September 29, 2024
YouTube Video By Ittefaq Digital, Dated: September 29, 2024
YouTube Video By SATV, Dated: September 29, 2024
YouTube Video By Protidiner Bangladesh, Dated: September 29, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಬಾಂಗ್ಲಾದೇಶದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 5, 2024
Ishwarachandra B G
March 11, 2023
Ishwarachandra B G
March 9, 2023