Authors
ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಿಂದೂ ಯುವಕನ ಮೇಲೆ ಹಲ್ಲೆ, ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಉಗ್ರರ ಬಂಧನ ಎಂಬ ಈ ಕೋಮು ಹೇಳಿಕೆಗಳೊಂದಿಗೆ, ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕೊಠಡಿ ಹೊರಗೆ ನಿಲ್ಲಿಸಲಾಗಿತ್ತು, ಮಹಾಮಳೆಗೆ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ, ಕಡಲೆ ಮತ್ತು ಬೆಲ್ಲ ಸೇವಿಸಿದರೆ ರಕ್ತ ಹೀನತೆ ಕಡಿಮೆಯಾಗುತ್ತದೆ ಎಂಬ ಹೇಳಿಕೆಗಳು ಈ ವಾರ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು ತಪ್ಪು ಹೇಳಿಕೆಗಳು ಎಂದು ನಿರೂಪಿಸಿದೆ.
ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬಂತೆ ಹೇಳಿಕೆಯೊಂದು ಹರಿದಾಡುತ್ತಿದೆ. ನ್ಯೂಸ್ಚೆಕರ್ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ವಿಮಾನವು ಬ್ಯಾಂಕಾಂಕ್ ನಿಂದ ಕೋಲ್ಕತಾಕ್ಕೆ ಹೊರಟಿದ್ದು, ಈ ವೇಳೆ ಸುರಕ್ಷತಾ ನಿಯಮ ಪಾಲನೆ ಕುರಿತಾಗಿ ಪ್ರಯಾಣಿಕರ ನಡುವಿನ ಜಗಳ ಇದಾಗಿದೆ, ವೈರಲ್ ವೀಡಿಯೋವನ್ನು ಕೋಮು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ನಿಜವೇ?
ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನವಾಗಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಮುರ್ಡೇಶ್ವರ ದೇಗುಲಕ್ಕೆ ಬಾಂಬ್ ಹಾಕಲು ಕಾಯುತ್ತಿದ್ದ 6 ಜನ ಉಗ್ರರ ಬಂಧನ ಎನ್ನುವುದು ಕರಾವಳಿ ಪೊಲೀಸ್ ಪಡೆ ನಡೆಸಿದ ಸಾಗರ ರಕ್ಷಾ ಕವಚ ಅಣಕು ಕಾರ್ಯಾಚರಣೆ ಕುರಿತ ಸುದ್ದಿಯಾಗಿದೆ, ಇದು ನಿಜವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ: ಮಲ್ಲಿಕಾರ್ಜುನ ಖರ್ಗೆಯವರನ್ನು ಕೊಠಡಿ ಹೊರಗೆ ನಿಲ್ಲಿಸಿದರೇ, ಸತ್ಯ ಏನು?
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೊಠಡಿ ಹೊರಗೆ ಕಾಯುತ್ತಿರುವ ದೃಶ್ಯವಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದಲಿತ ನಾಯಕನನ್ನು ಕೊಠಡಿ ಹೊರಗೆ ನಿಲ್ಲಿಸಲಾಗಿದೆ ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗಿತ್ತು. ಸತ್ಯಶೋಧನೆಯಲ್ಲಿ ಕಂಡುಬಂದಂತೆ ವೈರಲ್ ವೀಡಿಯೋ ಕ್ಲಿಪ್ ಮಾಡಿದ್ದಾಗಿದೆ. ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷರು ಅವರ ಪಕ್ಕದಲ್ಲಿಯೇ ಕುಳಿತಿರುವುದನ್ನು ಫೋಟೋಗಳು ಮತ್ತು ವೀಡಿಯೊಗಳು ತೋರಿಸಿವೆ. ಈ ಕುರಿತ ವಿವರ ಇಲ್ಲಿದೆ
ಮಹಾಮಳೆಗೆ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ಹಂಚುತ್ತಿರುವ ವೀಡಿಯೋ ವಿಯೆಟ್ನಾಂನದ್ದು!
ಬೆಂಗಳೂರಿಲ್ಲಿ ಭಾರೀ ಮಳೆ ಸುರಿದ ವರದಿಗಳ ಮಧ್ಯೆ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುತ್ತಿರುವ ದೃಶ್ಯವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದ ವೈರಲ್ ವೀಡಿಯೋ ನಿಜವಾಗಿ ವಿಯೆಟ್ನಾಂನದ್ದು ಎಂದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿದೆ
ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆಯೇ? ಇಲ್ಲ, ವೈರಲ್ ಪೋಸ್ಟ್ ಸುಳ್ಳು
ಭಾರತ-ಚೀನ ಗಡಿಯಲ್ಲಿ ಸೇನೆ ಹಿಂತೆಗೆತ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯ ವೇಳೆ ಈ ವೀಡಿಯೋಗಳನ್ನು 2024ರ ಜನವರಿಯಲ್ಲಿಯೂ ಹಂಚಿಕೊಂಡಿರುವುದು ಕಂಡುಬಂದಿದೆ. ಈ ಕುರಿತ ವಿವರ ಇಲ್ಲಿದೆ
ಕಡಲೆ ಮತ್ತು ಬೆಲ್ಲ ಸೇವಿಸಿದರೆ, ರಕ್ತ ಹೀನತೆ ಕಡಿಮೆಯಾಗುತ್ತಾ?
ರಕ್ತ ಹೀನತೆ ಸಮಸ್ಯೆ ಇರುವವರು ಪ್ರತಿದಿನ ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಕಾಣಬಹುದು ಎಂದು ಹೇಳಿಕೆಯೊಂದು ಹರಿದಾಡಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ರಕ್ತಹೀನತೆ ಸಮಸ್ಯೆ ಇರುವವರು ಬೆಲ್ಲ ಮತ್ತು ಕಡಲೆಯನ್ನು ತಿಂದರೆ, ಸಮಸ್ಯೆಯಿಂದ ಪರಿಹಾರ ಎಂಬುದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಯಾವ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಗಂಭೀರ ಕಾಯಿಲೆಗಳ ಸೂಚನೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.