Authors
ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಹಿಜಾಬ್, ಷರಿಯಾ ವಿರುದ್ಧ ಮುಸ್ಲಿಂ ನೆಲದಲ್ಲಿ ಅರೆನಗ್ನ ಪ್ರತಿಭಟನೆ ನಡೆಸಿದ ಮಹಿಳೆಯರು, ಬಾಂಗ್ಲಾ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲರ ಹತ್ಯೆ, ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಮೋದಿ ಹೇಳಿದ್ದಾರೆ, 15 ಫ್ರೆಂಚ್ ಫ್ರೈಸ್ 25 ಸಿಗರೇಟ್ ಗಳಿಗೆ ಸಮ ಎನ್ನುವ ಹೇಳಿಕೆಗಳು ಈ ವಾರ ಹರಿದಾಡಿವೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆಗಳು ಎಂದು ಸಾಬೀತು ಮಾಡಿದೆ.
ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಮತ ಹಾಕಿದ ಗ್ರಾಮಸ್ಥರಿಂದಲೇ ಪ್ರತಿಭಟನೆ ಎನ್ನುವುದು ನಿಜವೇ?
ಮಹಾರಾಷ್ಟ್ರದ ಗ್ರಾಮದಲ್ಲಿ ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಮತ ಹಾಕಿದ ಗ್ರಾಮಸ್ಥರಿಂದಲೇ ಪ್ರತಿಭಟನೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಲಾಗಿದ್ದು, ಮಹಾರಾಷ್ಟ್ರದ ಗ್ರಾಮದಲ್ಲಿ ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಮತ ಹಾಕಿದ ಗ್ರಾಮಸ್ಥರಿಂದಲೇ ಪ್ರತಿಭಟನೆ ಎನ್ನುವುದು ತಪ್ಪಾಗಿದೆ. ಮಹಾರಾಷ್ಟ್ರದ ಅವಧಾನ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುನಾಲ್ ಬಾಬಾ ಅವರಿಗೆ 1057 ಮತಗಳು ಬಿದ್ದಿವೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?
ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಸತ್ಯಶೋಧನೆಯ ಪ್ರಕಾರ, ಮುಸ್ಲಿಂ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂಬುದು ನಿಜವಲ್ಲ, ಪ್ಯಾರಿಸ್ ನಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ನಡೆದ ಅರೆನಗ್ನ ಪ್ರತಿಭಟನೆ ಇದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಬಾಂಗ್ಲಾ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಅವರನ್ನು ಹತ್ಯೆ ಮಾಡಲಾಗಿದೆಯೇ?
ಬಾಂಗ್ಲಾದೇಶದ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಅವರನ್ನು ಹತ್ಯೆ ಮಾಡಲಾಗಿದೆ ಎಂಬಂತೆ ಮಾಧ್ಯಮಗಳು ವರದಿ ಮಾಡಿವೆ. ಸತ್ಯಶೋಧನೆಯಲ್ಲಿ ತಿಳಿದುಬಂದಂತೆ ಬಾಂಗ್ಲಾದೇಶದ ಘರ್ಷಣೆಯಲ್ಲಿ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ತಪ್ಪಾಗಿದೆ, ಛತ್ತಗ್ರಾಮದಲ್ಲಿ ಬರ್ಬರವಾಗಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ದಾಸ್ ಅವರ ಪರ ವಕೀಲರಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಮೋದಿ ಹೇಳಿದ್ದಾರೆಯೇ, ಸತ್ಯ ಏನು?
ಮಹಾರಾಷ್ಟ್ರ ಚುನಾವಣೆ ಬಳಿಕ ಮತ್ತೆ ಇವಿಎಂ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಬೆನ್ನಲ್ಲೇ, ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭಾಷಣದ ವೀಡಿಯೋ ಕತ್ತರಿಸಿ, ಬೇರೆ ಅರ್ಥ ಬರುವಂತೆ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
15 ಫ್ರೆಂಚ್ ಫ್ರೈಸ್ 25 ಸಿಗರೇಟ್ ಗಳಿಗೆ ಸಮ ಎನ್ನುವುದು ನಿಜವೇ?
ಫ್ರೆಂಚ್ ಫ್ರೈಗಳು ಸಿಗರೇಟಿಗಿಂತ ಹೆಚ್ಚು ಅಪಾಯಕಾರಿ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ನ್ಯೂಸ್ 18 ಕನ್ನಡ ಫೇಸ್‌ಬುಕ್ ನಲ್ಲಿ ಈ ಪೋಸ್ಟ್ ಮಾಡಿದ್ದು, 15 ಫ್ರೆಂಚ್ ಫ್ರೈ ಗಳು 25 ಸಿಗರೇಟ್ ಗೆ ಸಮ ಎಂದು ಹೇಳಲಾಗಿದೆ. ಸತ್ಯಶೋಧನೆಯ ಪ್ರಕಾರ, 15 ಫ್ರೆಂಚ್ ಫ್ರೈಸ್ 25 ಸಿಗರೇಟ್ ಗಳಿಗೆ ಸಮ ಎನ್ನುವುದು ಸರಿಯಾದ್ದಲ್ಲ. ಸಿಗರೇಟ್ ನಿಂದ ಧೂಮಪಾನಿಗೂ, ಹತ್ತಿರದಲ್ಲಿದ್ದವರಿಗೂ ಅಪಾಯ ಖಾತರಿ ಮತ್ತು ಅದು ಸಾವಿನೆಡೆಗೆ ತೆಗೆದುಕೊಂಡು ಹೋಗಬಹುದು. ಫ್ರೆಂಚ್ ಫ್ರೈಸ್ ನಿಂದ ಸ್ಥೂಲಕಾಯ, ಕೊಬ್ಬಿನ ಸಮಸ್ಯೆಗಳುಂಟಾಗಿ ದೀರ್ಘಕಾಲದಲ್ಲಿ ತೊಂದರೆಗಳು ಕಾಡಬಹುದು. ಆದರೆ ಉತ್ತಮಜೀವನ ಶೈಲಿಯಿಂದ ಇದರ ಅಪಾಯ ತಡೆಗಟ್ಟಬಹುದು. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.