Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೇಪಾಳ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋ ಪ್ರದರ್ಶಿಸಲಾಗಿದೆ
ನೇಪಾಳ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋ ಪ್ರದರ್ಶಿಸಿಲ್ಲ, ಕಳೆದ ಮಾರ್ಚ್ ನಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರಾಲಿಯಲ್ಲಿ ಆದಿತ್ಯನಾಥ್ ಫೊಟೋ ಪ್ರದರ್ಶಿಸಲಾಗಿದೆ
ನೇಪಾಳದಲ್ಲಿ ನಾಗರಿಕ ದಂಗೆ ಭುಗಿಲೆದ್ದಿರುವಂತೆಯೇ ಪ್ರತಿಭಟನೆ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಪ್ರದರ್ಶಿಸಲಾಗಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದಿರುವ ಹೇಳಿಕೆಯಲ್ಲಿ, “ಪ್ರಪಂಚದ ಮೊದಲ ಹಿಂದೂ ರಾಷ್ಟ್ರವಾಗಿ ನೇಪಾಳ ಘೋಷಣೆಯಾಗುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ನೇಪಾಳ ಪ್ರತಿಭಟನೆಯಲ್ಲಿ ನಮ್ಮ ಸನಾತನಿ ಯೋಗಿ ಆದಿತ್ಯನಾಥ್ ಅವರ ಫೋಟೋಗಳು ಕಾಣುತ್ತಿವೆ” ಎಂದಿದೆ.

ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ನೋಡಬಹುದು.

ಇದನ್ನು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಹಳೆಯ ಘಟನೆಯಾಗಿದ್ದು, ಈಗಿನ ನಾಗರಿಕ ದಂಗೆ/ಪ್ರತಿಭಟನೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಕಂಡುಬಂದಿದೆ.
ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಮಾರ್ಚ್ 24, 2025 ರಂದು, ದಿ ಡಿಪ್ಲೊಮ್ಯಾಟ್ ನ ವೆಬ್ ಸೈಟ್ ನಲ್ಲಿ ಇದನ್ನೇ ಹೋಲುವ ಫೋಟೋವನ್ನು ವರದಿಯೊಂದಿಗೆ ಪ್ರಕಟಿಸಲಾಗಿದೆ. ವರದಿಯ ಪ್ರಕಾರ, ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರಾಲಿಯಲ್ಲಿ, ನೇಪಾಳದ ಪದಚ್ಯುತಗೊಂಡ ರಾಜ ಜ್ಞಾನೇಂದ್ರ ಶಾ ಅವರ ಫೋಟೋವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋದೊಂದಿಗೆ ಪ್ರದರ್ಶಿಸಲಾಗಿದೆ.

ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಸಲಹೆಗಾರ ಬಿಷ್ಣು ರಿಮಲ್ ಅವರು ಈ ಫೋಟೋವನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಮತ್ತೊಂದು ನೇಪಾಳಿ ಸುದ್ದಿ ಸಂಸ್ಥೆ ರಾತೋಪತಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ರಾಜಪ್ರಭುತ್ವವನ್ನು ಮರಳಿ ತರುವಂತೆ ಒತ್ತಾಯಿಸಲು ಮತ್ತು ನೇಪಾಳದ ಮಾಜಿ ದೊರೆ ಜ್ಞಾನೇಂದ್ರ ಶಾ ಅವರನ್ನು ಸ್ವಾಗತಿಸಲು ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ರಾಷ್ಟ್ರೀಯ ರಿಪಬ್ಲಿಕನ್ ಪಕ್ಷ ಸೇರಿದಂತೆ ಹಲವಾರು ಸಂಘಟನೆಗಳು ಅಲ್ಲಿ ಜಮಾಯಿಸಿದ್ದವು. ರಾಜಾ ಜ್ಞಾನೇಂದ್ರ ಶಾ ಅವರ ಫೋಟೋದ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಕೂಡ ಇತ್ತು. ಜನವರಿ 30 ರಂದು ಶಾ ಅವರು ಗೋರಖ್ಪುರಕ್ಕೆ ಭೇಟಿ ನೀಡಿದ ನಂತರ, ಆದಿತ್ಯನಾಥ್ ಅವರ ಫೋಟೋವನ್ನು ಪ್ರದರ್ಶಿಸಿದ ವಿದ್ಯಮಾನ ಗಮನ ಸೆಳೆದಿದೆ.

ನೇಪಾಳದಲ್ಲಿ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆ
ಇತ್ತೀಚೆಗೆ, ನೇಪಾಳ ಸರ್ಕಾರವು ಫೇಸ್ಬುಕ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಯುವಕರು ಸೋಮವಾರದಿಂದ ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ರೂಪ ತಳೆದಿತ್ತು. ಇವರು ತಮ್ಮನ್ನು ‘ಜೆನ್ ಜಿ’ ಎಂದು ಕರೆಸಿಕೊಂಡಿದ್ದಾರೆ. ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ 19 ಮಂದಿ ಸಾವನ್ನಪ್ಪಿದ್ದು ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಎಂದರೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಇತರ ಸಚಿವರು ರಾಜೀನಾಮೆ ನೀಡಿದ್ದು, ನೇಪಾಳ ಅತಂತ್ರ ಸ್ಥಿತಿಗೆ ಬಂದಿದೆ.
ನೇಪಾಳದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಕಂಡುಬಂದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಫೋಟೋ ಹಿಂದಿನದ್ದಾಗಿದ್ದು, ಬೇರೆ ಸಂದರ್ಭದ್ದಾಗಿದೆ.
Our Sources
Report by The Diplomat, Dated: March 24, 2025
Report by Ratopati, Dated: March 9, 2025
Facebook post by Bishnu Rimal, March 9, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಬಾಂಗ್ಲಾದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 19, 2025
Ishwarachandra B G
November 18, 2025
Kushel Madhusoodan
November 15, 2025