Saturday, December 20, 2025

Fact Check

Fact Check: ಯೋಗಿ ಸರ್ಕಾರ ಮಸೀದಿ ತೆರವುಗೊಳಿಸಿ, ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ ಎನ್ನುವ ಹೇಳಿಕೆ ನಿಜವೇ?

Written By Ishwarachandra B G, Edited By Pankaj Menon
Feb 10, 2025
banner_image

Claim
ಯೋಗಿ ಸರ್ಕಾರ ಅಕ್ರಮ ಮಸೀದಿ ತೆರವುಗೊಳಿಸಿ, ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ

Fact
ಉತ್ತರ ಪ್ರದೇಶದ ಕುಶಿನಗರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಮಸೀದಿಯನ್ನು ತೆರವು ಮಾಡಿ ಆ ಜಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿಲ್ಲ. ಸರ್ಕಾರಿ ಜಾಗ ಅತಿಕ್ರಮಣ ಹಿನ್ನೆಲೆಯಲ್ಲಿ ಮಸೀದಿಯ ಭಾಗಶಃ ಅತಿಕ್ರಮಣ ತೆರವು ಮಾಡಲಾಗಿದೆ

ಅಕ್ರಮ ಮಸೀದಿಯನ್ನು ತೆರವು ಮಾಡಿ ಆ ಜಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಕಂಡುಬಂದಿರುವ ಪೋಸ್ಟ್ ನಲ್ಲಿ, “ಅಕ್ರಮ ಮಸೀದಿಯನ್ನು ತೆರೆವುಗೊಳಿಸಿ, ಆ ಜಾಗದಲ್ಲಿ ಶಾಲೆಯೊಂದನ್ನು ತೆರೆಯಲು ಮುಂದಾದ ಯೋಗಿ ಸರ್ಕಾರ” ಎಂದಿದೆ.

ಈ ಕುರಿತ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್ ಮಾಡಿದ್ದು, ಉ.ಪ್ರ. ಸರ್ಕಾರ ಒತ್ತುವರಿ ತೆರವು ಕಾರ್‍ಯಾಚರಣೆಯೊಂದನ್ನು ನಡೆಸಿದ್ದು ಅದರಲ್ಲಿ ಭಾಗಶಃ ಒತ್ತುವರಿ ಮಾಡಿದ್ದ ಮಸೀದಿಯನ್ನು ತೆರವು ಮಾಡಿದೆ ಎಂದು ಗೊತ್ತಾಗಿದೆ.

Also Read: ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರೇ?

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಫೆಬ್ರವರಿ 9, 2025ರ ಇಂಡಿಯಾಟಿವಿ ನ್ಯೂಸ್‌ ವರದಿಯ ಪ್ರಕಾರ, ಕುಶಿನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದ್ನಿ ಮಸೀದಿಯ ಭಾಗವನ್ನು ಕೆಡವಲಾಗಿದೆ. ಪೊಲೀಸರ ಪ್ರಕಾರ, ಮದನಿ ಮಸೀದಿಯ ಸುತ್ತಲಿನ ವಿವಾದವು 1999 ಕ್ಕೂ ಹಿಂದಿನದ್ದು. ಸ್ಥಳೀಯ ನಾಯಕ ರಾಮ್ ಬಚ್ಚನ್ ಸಿಂಗ್ ಅವರು ಇದು ಅಕ್ರಮ ನಿರ್ಮಾಣ ಎಂದು ದೂರು ದಾಖಲಿಸಿದಾಗಿನಿಂದ ಈ ವಿವಾದ ಚಾಲ್ತಿಯಲ್ಲಿದೆ ಎಂದಿದೆ.

ಈ ಬಗ್ಗೆ ಇನ್ನಷ್ಟು ಶೋಧ ನಡೆಸಿದಾಗ, ವರದಿಗಳು ಲಭ್ಯವಾಗಿವೆ.

ಫೆಬ್ರವರಿ 9, 2025ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ  ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿಲ್ಲಿರುವ ಮಸೀದಿಯ ಒಂದು ಭಾಗವನ್ನು ‘ಅತಿಕ್ರಮಣ’ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಅದನ್ನು ಭಾನುವಾರ ಬುಲ್ಡೋಜರ್‌ಗಳಿಂದ ಕೆಡವಲಾಗಿದೆ.  ಮೂಲಗಳ ಪ್ರಕಾರ, ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಮದ್ನಿ ಮಸೀದಿಯ ‘ಅತಿಕ್ರಮಣ’ಗೊಂಡ ಭಾಗವನ್ನು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆರು ಬುಲ್ಡೋಜರ್‌ಗಳನ್ನು ಬಳಸಿ ಕೆಡವಲಾಯಿತು. ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಮದ್ನಿ ಮಸೀದಿ ನಿರ್ಮಿಸಲಾಗಿದೆ ಎಂದು  ರಾಮ್‌ ಬಚನ್ ಸಿಂಗ್ ಮುಖ್ಯಮಂತ್ರಿಯವರ ಪೋರ್ಟಲ್‌ನಲ್ಲಿ ದೂರು ನೀಡಿದ್ದರು ಮತ್ತು ಅದರ ಸಮೀಕ್ಷೆಗೆ ಒತ್ತಾಯಿಸಿದ್ದರು ಎಂದಿದೆ.

ಫೆಬ್ರವರಿ 10, 2025ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿರುವ ಮಸೀದಿಯ ಒಂದು ಭಾಗವನ್ನು ಭಾನುವಾರ ಬುಲ್ಡೋಜರ್‌ಗಳಿಂದ ಕೆಡವಲಾಯಿತು. ಸರ್ಕಾರಿ ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಹಟಾ ಪಟ್ಟಣದಲ್ಲಿರುವ ಮದ್ನಿ ಮಸೀದಿಯ “ಅತಿಕ್ರಮಣ” ಭಾಗವನ್ನು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಡವಲು ಆರು ಬುಲ್ಡೋಜರ್‌ಗಳನ್ನು ಬಳಸಲಾಯಿತು. ಕಾರ್ಯಕರ್ತ ರಾಮ್ ಬಚನ್ ಸಿಂಗ್ ಅವರು ಮದ್ನಿ ಮಸೀದಿಯನ್ನು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಪೋರ್ಟಲ್‌ನಲ್ಲಿ ದೂರು ನೀಡಿದ್ದರು ಮತ್ತು ಸಮೀಕ್ಷೆಗೆ ಒತ್ತಾಯಿಸಿದ್ದರು. ನಂತರ ಮಸೀದಿ ಆಡಳಿತ ಮಂಡಳಿಯು ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿತ್ತು ಮತ್ತು ಮಸೀದಿಯ ಅತಿಕ್ರಮಣಗೊಂಡ ಭಾಗವನ್ನು ಕೆಡವಲು ತಡೆಯಾಜ್ಞೆ ನೀಡಲಾಗಿತ್ತು. ಶನಿವಾರದವರೆಗೆ ತಡೆಯಾಜ್ಞೆ ನೀಡಲಾಗಿತ್ತು ಎಂದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ದೈನಿಕ್ ಜಾಗರಣ್ ಪತ್ರಕರ್ತರಾದ ವಿವೇಕ್ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, ಈ ಮಸೀದಿ ವಿವಾದ ಹಳೆಯದಾಗಿದ್ದು ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ರಾಮ್‌ ಬಚನ್ ಎಂಬವರು ದೂರು ನೀಡಿದ್ದರು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ತಡೆಯಾಜ್ಞೆ ಇತ್ತು. ತಡೆಯಾಜ್ಞೆಯ ಅವಧಿ ಮುಗಿಯುತ್ತಿದ್ದಂತೆ ಮಸೀದಿಯ ಒಂದು ಭಾಗವನ್ನು ಕೆಡವಲಾಗಿದೆ. ಈ ಜಾಗದಲ್ಲಿ ಯಾವುದೇ ಶಾಲೆ ನಿರ್ಮಾಣದ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದ್ದಾರೆ.

Conclusion

ಸತ್ಯಶೋಧನೆಯ ಪ್ರಕಾರ ಉತ್ತರ ಪ್ರದೇಶದ ಕುಶಿನಗರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಮಸೀದಿಯನ್ನು ತೆರವು ಮಾಡಿ ಆ ಜಾಗದಲ್ಲಿ ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಅತಿಕ್ರಮಿತ ಜಾಗದಿಂದ ಮಸೀದಿಯನ್ನು ಭಾಗಶಃ ತೆರವು ಮಾಡಲಾಗಿದ್ದು, ಇನ್ನೊಂದು ಸ್ಥಳದಲ್ಲಿನ ನಿರ್ಮಾಣ ಸಕ್ರಮದ್ದಾಗಿರುವುದರಿಂದ ಶಾಲೆ ನಿರ್ಮಾಣದ ಉದ್ದೇಶ ಇಲ್ಲ ಎಂದು ತಿಳಿದುಬಂದಿದೆ.

Fact Check: ಮತ್ತೆ ಹರಿದಾಡುತ್ತಿದೆ ಸ್ಟ್ರಾಬೆರಿ ಕ್ವಿಕ್ ಎನ್ನುವ ಹಳೆ ವಂಚನೆ ಸಂದೇಶ!

Result: Missing context

Our Sources
Report By Indiatv news, Dated: February, 2025

Report By Deccan Herald, Dated: February 9, 2025

Report By Times of India, Dated: February 10, 2025

Conversation with Vivek Singh, Dainik Jagaran


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,641

Fact checks done

FOLLOW US
imageimageimageimageimageimageimage