Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿದೆ
Fact:
ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದಿಲ್ಲ. ಇದು ತಿರುಚಿದ ಚಿತ್ರ
‘ಚೋರ್ ಗ್ರೂಪ್ ಮೀಟಿಂಗ್’ ಎಂಬ ಬ್ಯಾನರ್ ನೊಂದಿಗೆ ಕಾಂಗ್ರೆಸ್ ಸಭೆಯ ಚಿತ್ರವೊಂದು ಇದೀಗ ವೈರಲ್ ಆಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಿಡಬ್ಲ್ಯುಸಿ ಸದಸ್ಯ ಎ.ಕೆ.ಆಂಟನಿ ಅವರು ಈ ಚಿತ್ರದಲ್ಲಿದ್ದು, ಅವರ ಹಿಂದಿನ ಬ್ಯಾನರ್‌ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂಬುದು ಕಾಣಿಸುತ್ತಿದೆ.
ಟ್ವಿಟರ್ ನಲ್ಲಿ ಈ ಕ್ಲೇಮ್ ಕಂಡುಬಂದಿದ್ದು ಅದು ಇಲ್ಲಿದೆ.
Also Read: ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್ ವೀಡಿಯೋ ಸತ್ಯವೇ?
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
ಈ ಚಿತ್ರ ಒಂದು ಹಾಸ್ಯಕ್ಕಾಗಿ ಮಾಡಲಾಗಿದೆ ಎಂದು ಹೇಳಬಹುದು. ಆದರೆ ಈ ಚಿತ್ರವನ್ನು ತಿರುಚಿದ ಬಗ್ಗೆ ಸಂಶಯಗಳಿವೆ. ಆದ್ದರಿಂದ ಗೂಗಲ್ ಕೀವರ್ಡ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ, ಅಂತಹ ಬಹಳಷ್ಟು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡುಬಂದಿದೆ. ಈ ರೀತಿಯ ಹುಡುಕಾಟದ ಮೂಲಕ ಈ ಚಿತ್ರದ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗಿದೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಇದಕ್ಕಾಗಿ ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು ಫಲಿತಾಂಶ ಲಭ್ಯವಾಗಿದೆ.
ಆಗಸ್ಟ್ 10, 2019ರ ಝೀ ನ್ಯೂಸ್‌ನಲ್ಲಿ ವೈರಲ್ ಆಗುತ್ತಿರುವಂಥದ್ದೇ ಚಿತ್ರವೊಂದನ್ನುನಾವು ಪತ್ತೆ ಹಚ್ಚಿದ್ದೇವೆ. ಈ ಚಿತ್ರ ಮತ್ತು ವೈರಲ್ ಚಿತ್ರದ ಮಧ್ಯೆ ಹಲವು ಸಾಮ್ಯತೆಗಳಿವೆ. ಆದರೆ ಇಲ್ಲಿ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಎಂದು ಬರೆದಿಲ್ಲ.
ಮೇ 25, 2019ರ ವಿಯೋನ್ ನ್ಯೂಸ್‌ನಲ್ಲಿಯೂ ಇದೇ ಚಿತ್ರವನ್ನು ಲಗತ್ತಿಸಲಾಗಿದೆ. ಇದೂ ವೈರಲ್ ಚಿತ್ರಕ್ಕೆ ಹಲವು ಸಾಮ್ಯತೆಗಳನ್ನು ಹೊಂದಿದ್ದು, ಇಲ್ಲೂ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಎಂದು ಬರೆದಿರುವುದು ಕಂಡುಬಂದಿಲ್ಲ.
ವಿವಿಧ ಹುಡುಕಾಟಗಳ ಬಳಿಕ 2019ರಲ್ಲಿ ನಡೆದಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ)ಯ ಸಭೆಯ ಚಿತ್ರ ಇದಾಗಿದ್ದು, ಇದನ್ನೇ ಬಳಸಿಕೊಂಡು ತಿರುಚಿರುವುದು ಕಂಡುಬಂದಿದೆ.
ಇನ್ನು ನೈಜವಾದ ಫೋಟೋ ಅಲ್ಲದಿದ್ದರೂ, ಆ ಸಭೆಯ ಕುರಿತ ಫೋಟೋಗಳನ್ನು ಎಎನ್ಐ ಟ್ವೀಟ್ ಒಂದರಲ್ಲಿ ಕಂಡುಬಂದಿದೆ.
ಈ ಫೋಟೋ ಅಲ್ಲದಿದ್ದರೂ, ಇದೇ ರೀತಿಯ ಫೋಟೋಗಳನ್ನು ಎಎನ್ಐ ಟ್ವಿಟರ್ ಹ್ಯಾಂಡಲ್ನಲ್ಲಿಯೂ ಕಾಣಬಹುದು. ಅವರಲ್ಲಿ ಯಾರೂ ಅಂತಹ ಬ್ಯಾನರ್ ಅನ್ನು ಬಳಸಲಿಲ್ಲ.
Also Read: ಚಂದ್ರಯಾನ 3 ಉಡಾವಣೆ ಎಂದು ತೋರಿಸಲು ಹಂಚಿಕೊಂಡ ವೈರಲ್ ವೀಡಿಯೋಗಳ ಅಸಲಿಯತ್ತೇನು?
ಇದು ಹಾಸ್ಯದ ರೀತಿ ಕಾಣುವ ಪೋಸ್ಟ್ ಆದರೂ ಮೂಲ ಚಿತ್ರಕ್ಕೆ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದು ಫೊಟೋವನ್ನು ತಿರುಚಿರುವುದು ಕಂಡುಬಂದಿದೆ.
Our Sources
Report By Zee News, Dated: August 10, 2019
Report By Wion News, Dated: May 25, 2019
Tweet By ANI, Dated: August 6, 2019
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
July 12, 2025
Newschecker and THIP Media
July 11, 2025
Vasudha Beri
July 10, 2025