Authors
Claim
‘ಮೇರೆ ಘರ್ ರಾಮ್ ಆಯಾ ಹೈ’ ಭಜನೆಗೆ ನೃತ್ಯ ಮಾಡುತ್ತಿರುವ ಮಹಿಳೆ ಸಂಬಲ್ಪುರ ಜಿಲ್ಲಾಧಿಕಾರಿ ಅನನ್ಯಾ ದಾಸ್
Fact
ನೃತ್ಯ ಮಾಡುತ್ತಿರುವ ಮಹಿಳೆ ಸಂಬಲ್ಪುರ ಜಿಲ್ಲಾಧಿಕಾರಿ ಅನನ್ಯಾ ದಾಸ್ ಅಲ್ಲ, ಬದಲಾಗಿ ಕಂಟೆಂಟ್ ಕ್ರಿಯೇಟರ್ ಆಗಿರುವ ಮೃದುಲಾ ಮಹಾಜನ್ ಎಂಬವರಾಗಿದ್ದಾರೆ
‘ಮೇರೆ ಘರ್ ರಾಮ್ ಆಯೆ ಹೈ’ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಂಡುಬರುವ ಮಹಿಳೆ ಒಡಿಶಾದ ಸಂಬಲ್ಪುರದ ಜಿಲ್ಲಾಧಿಕಾರಿ ಅನನ್ಯಾ ದಾಸ್ ಎಂದು ಹೇಳಲಾಗುತ್ತಿದೆ.
ಜನವರಿ 28, 2024 ರಂದು ಭರತ್ ರಾವತ್ ಎಂಬ ಫೇಸ್ಬುಕ್ ಬಳಕೆದಾರರು ಹಂಚಿಕೊಂಡ
ಫೇಸ್ಬುಕ್ ಪೋಸ್ಟ್ನಲ್ಲಿ, ಮಹಿಳೆಯೊಬ್ಬರು ರಾಮ್ ಭಜನೆಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೋದೊಂದಿಗೆ ಹಾಕಲಾದ ಹೇಳಿಕೆಯಲ್ಲಿ ಹೀಗಿದೆ, ‘ರಾಮ್ ಲಲ್ಲಾ ಮೇಲೆ ಮಹಿಳಾ ಐಎಎಸ್ ಅಧಿಕಾರಿಯ ನಂಬಿಕೆಯನ್ನು ನೋಡಿ! ಐಎಎಸ್ ಅನನ್ಯಾ ದಾಸ್ ಅವರು ಪಶ್ಚಿಮ ಬಂಗಾಳದ ಸಂಬಲ್ಪುರದ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನನ್ಯಾ ದಾಸ್ ಗುಜರಾತ್ ಕೇಡರ್ನ 2015 ರ ಐಎಎಸ್ ಅಧಿಕಾರಿ ‘ ಎಂದಿದೆ.
Also Read: Fact Check: ಅಯೋಧ್ಯೆಯಲ್ಲಿ ಬಾಲರಾಮನ ನೋಡಲು ಜನಸಾಗರ ಎಂದ ಫೋಟೋ ಪುರಿ ಜಗನ್ನಾಥ ರಥಯಾತ್ರೆಯದ್ದು!
Fact Check/ Verification
ತನಿಖೆಯ ಆರಂಭದಲ್ಲಿ, ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಮೂಲ ವೀಡಿಯೋವನ್ನು ಮಾಡಿದ ಕಂಟೆಂಟ್ ಕ್ರಿಯೇಟರ್ ಆಗಿರುವ ಮೃದುಲಾ ಮಹಾಜನ್ ಅವರು ಜನವರಿ 8, 2024 ರಂದು ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಹಂಚಿಕೊಂಡ ವೀಡಿಯೋ ಗಮನಿಸಿದ್ದೇವೆ.
ಆ ಬಳಿಕ ನಾವು ವೀಡಿಯೋದಲ್ಲಿ ಕಂಡುಬಂದ ಮಹಿಳೆಯ ಮುಖವನ್ನು ಐಎಎಸ್ ಅನನ್ಯಾ ದಾಸ್ ಅವರ ಮುಖಕ್ಕೆ ಹೊಂದಿಸಿ ನೋಡಿದ್ದೇವೆ. ಇದರಿಂದ ನೃತ್ಯ ಮಾಡುತ್ತಿರುವ ಮಹಿಳೆ ಐಎಎಸ್ ಅನನ್ಯಾ ದಾಸ್ ಅಲ್ಲ, ಬದಲಾಗಿ ಕಂಟೆಂಟ್ ಕ್ರಿಯೇಟರ್ ಆಗಿರುವ ಮೃದುಲಾ ಮಹಾಜನ್ ಎಂದು ನಮಗೆ ತಿಳಿಯಿತು.
ತನಿಖೆಯ ಸಮಯದಲ್ಲಿ, ಐಎಎಸ್ ಅನನ್ಯಾ ದಾಸ್ ಅವರ ಎಕ್ಸ್ ಖಾತೆಯಿಂದ ಬಳಕೆದಾರರ ಪೋಸ್ಟ್ ಒಂದಕ್ಕೆ ಜನವರಿ 27, 2024 ರಂದು ಪ್ರತಿಕ್ರಿಯಿಸಲಾಗಿದೆ. ಇದರಲ್ಲಿ “ನಿಜವಾಗಿಯೂ ಉತ್ತಮ ಪ್ರದರ್ಶನ, ದುಃಖಕರ ಇದು ನನ್ನ ವೀಡಿಯೋ ಅಲ್ಲ” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
ಈ ಹೇಳಿಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನಾವು ಐಎಎಸ್ ಅನನ್ಯಾ ದಾಸ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ಪ್ರತಿಕ್ರಿಯಿಸಿದಾಗ ಲೇಖನವನ್ನು ನವೀಕರಿಸಲಾಗುವುದು.
Conclusion
ವೀಡಿಯೋದಲ್ಲಿ ನೃತ್ಯ ಮಾಡುತ್ತಿರುವ ಮಹಿಳೆ ಸಂಬಲ್ಪುರ ಜಿಲ್ಲಾಧಿಕಾರಿ ಅನನ್ಯಾ ದಾಸ್ ಅಲ್ಲ, ಬದಲಾಗಿ ಕಂಟೆಂಟ್ ಕ್ರಿಯೇಟರ್ ಆಗಿರುವ ಮೃದುಲಾ ಮಹಾಜನ್ ಎಂಬವರಾಗಿದ್ದಾರೆ ಎಂದು ನಮ್ಮ ತನಿಖೆಯಲ್ಲಿ ಸ್ಪಷ್ಟವಾಗಿದೆ.
Also Read: ಅಲ್ವಾರ್ ನಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ದೊಣ್ಣೆಯಿಂದ ಹೊಡೆದರು ಎಂದ ವೀಡಿಯೋ ಹಿಂದಿನ ಸತ್ಯಾಂಶ ಏನು?
Result: False
Our Sources:
YouTube video By Mradula Mahajan Dated: January 8,2024
Instagram video By Mradula Mahajan Dated: January6,2024
Facebook video By Mradula Mahajan Dated: January 20,2024
Tweet by Ananya Das Dated: January 28,2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.