Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಪ್ರವಾಹ
Fact
ಇದು ಕೇರಳದ ಪಟ್ಟಾಂಬಿ ಸೇತುವೆಯ ದೃಶ್ಯವಾಗಿದ್ದು, ಭಾರತಪ್ಪುಳ ನದಿಯಾಗಿದೆ
ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯ ಕರ್ನಾಟಕ ಮತ್ತು ಕೇರಳದ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಇದ್ದು, ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿ ಬಳಿ ನೇತ್ರಾವತಿ ನದಿ ಸೇತುವೆ ಮಟ್ಟಕ್ಕೆ ಹರಿಯುತ್ತಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಕ್ಲೇಮ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಈ ವೈರಲ್ ವೀಡಿಯೋ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ, ವೀಡಿಯೋ ಕೇರಳದ ಭಾರತಪ್ಪುಳ ನದಿಯದ್ದಾಗಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗೆ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ. ಕೆಲವು ಯೂಟ್ಯೂಬ್ ಚಾನೆಲ್ ಗಳು ವೈರಲ್ ವೀಡಿಯೋವನ್ನು ಹೋಲುವ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು ಅದರಲ್ಲಿ “ಪಟ್ಟಾಂಬಿ ಬ್ರಿಡ್ಜ್” ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.
ಇದೇ ರೀತಿಯ ವೀಡಿಯೋಗಳನ್ನು ಇಲ್ಲಿ, ಇಲ್ಲಿ ಗುರುತಿಸಿದ್ದೇವೆ.
ಹೆಚ್ಚಿನ ಮಾಹಿತಿಗೆ ನಾವು ಕೀವರ್ಡ್ ಸರ್ಚ್ ನಡೆಸಿದ್ದು, ಜುಲೈ 30, 2024ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಲಭ್ಯವಾಗಿದೆ. ಇದರಲ್ಲಿ “ಪಾಲಕ್ಕಾಡ್ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಾಂಬಿ ಸೇತುವೆಯನ್ನು ಬೆಳಗ್ಗೆ 11.30ಕ್ಕೆ ಮುಚ್ಚಲಾಯಿತು. ಹೆಚ್ಚಿನ ಮಾಹಿತಿ ಬರುವವರೆಗೆ ಜಿಲ್ಲೆಯ ಎಲ್ಲಾ ಪ್ರವಾಸೋದ್ಯಮ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದರು” ಎಂದಿದೆ.
ಇದೇ ರೀತಿ ವಿವಿಧ ಮಾಧ್ಯಮಗಳು ಪಟ್ಟಾಂಬಿ ಸೇತುವೆ ಮೇಲೆ ಭಾರತಪ್ಪುಳ ನದಿ ಹರಿದಿರುವುದನ್ನು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ವೈರಲ್ ವೀಡಿಯೋದಲ್ಲಿ ತೋರಿಸಿರುವ ಸ್ಥಳದ ಖಚಿತ ಮಾಹಿತಿಗೆ ನಾವು ಗೂಗಲ್ ಲೊಕೇಶನ್ ಸರ್ಚ್ ನಡೆಸಿದ್ದೇವೆ. ಅದು ಇಲ್ಲಿದೆ
ಪಟ್ಟಾಂಬಿ ಸೇತುವೆ ಗೂಗಲ್ ಫೋಟೋ ಮತ್ತು ವೈರಲ್ ವೀಡಿಯೋಕ್ಕೂ ಸಾಮ್ಯತೆ ಗುರುತಿಸಲಾಗಿದೆ. ಈ ಮೂಲಕ ಅದು ಪಟ್ಟಾಂಬಿಯದ್ದೇ ವೀಡಿಯೋ ಎಂಬುದನ್ನು ಖಚಿತಪಡಿಸಲಾಗಿದೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಇದು ಕೇರಳದ ಪಟ್ಟಾಂಬಿ ಸೇತುವೆಯ ದೃಶ್ಯವಾಗಿದ್ದು, ಭಾರತಪ್ಪುಳ ನದಿಯಾಗಿದೆ. ಆದ್ದರಿಂದ ನೇತ್ರಾವತಿಯಲ್ಲಿ ಪ್ರವಾಹ, ಉಪ್ಪಿನಂಗಡಿಯಲ್ಲಿ ಸೇತುವೆ ಸನಿಹ ಪ್ರವಾಹ ಎಂಬ ಹೇಳಿಕೆಯು ತಪ್ಪಾಗಿದೆ.
Also Read: ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ ಎಂದ ವೀಡಿಯೋ ಬ್ರೆಜಿಲ್‌ನದ್ದು!
Our Sources
Report By The New Indian Express, Dated: July 30, 2024
Report By Asianet News, Dated: July 31, 2024
Google Map
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Sabloo Thomas
December 9, 2024
Sabloo Thomas
November 20, 2024
Kushel Madhusoodan
May 21, 2024