Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹರಿದ್ವಾರದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿದ್ದಾನೆ
ಹರಿದ್ವಾರದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆ ಸುಳ್ಳಾಗಿದೆ. ಮುಸ್ಲಿಂ ಸಮುದಾಯದ ಯುವಕನೊಬ್ಬ ಅದೇ ಸಮುದಾಯದ ಯುವತಿಯನ್ನು ಹತ್ಯೆ ಮಾಡಿದ ಘಟನೆ ಇದಾಗಿದೆ
ಹರಿದ್ವಾರದಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿದ್ದಾನೆ ಎಂಬಂತೆ ಹೇಳಿಕೆಯೊಂದನ್ನು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಮುಸ್ಲಿಂ ಹುಡುಗನೊಬ್ಬ ತನ್ನ ಹಿಂದೂ ಪ್ರೇಮಿಯನ್ನು ಕೊಂದು ದೇಹವನ್ನು ವಿಲೇವಾರಿ ಮಾಡಲು ಸೂಟ್‌ಕೇಸ್‌ನಲ್ಲಿ ತುಂಬಿಸಿದ ಎಂಬರ್ಥದ ಹೇಳಿಕೆಯೊಂದಿಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ಈ ಹೇಳಿಕೆ ದಾರಿತಪ್ಪಿಸುವಂತಿದೆ ಮತ್ತು ವೈರಲ್ ಆಗಿರುವ ವೀಡಿಯೋ 2022ರದ್ದು ಎಂದು ನ್ಯೂಸ್‌ಚೆಕರ್ ಕಂಡುಕೊಂಡಿದೆ.
Also Read: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ಎನ್ನುವುದು ನಿಜವಲ್ಲ

ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿಯನ್ನು ಕೊಂದಿದ್ದಾನೆ ಎಂಬ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನ್ಯೂಸ್ ಚೆಕರ್ ಕೀವರ್ಡ್ ಹುಡುಕಾಟವನ್ನು ನಡೆಸಿತು ಮತ್ತು ಘಟನೆಯ ಕುರಿತು ಹಲವಾರು ವರದಿಗಳು ಕಂಡುಬಂದಿವೆ.
ಈಟಿವಿ ಭಾರತ್ ವರದಿಯ ಪ್ರಕಾರ , ಘೋಸಿಯನ್ ಜ್ವಾಲಾಪುರದ ನಿವಾಸಿ ಗುಲ್ಜೇಬ್ ಎಂಬ ಹುಡುಗ ತನ್ನ ಗೆಳತಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣ ಕೊಲೆ ಮಾಡಿದ್ದಾನೆ. ವರದಿಯಲ್ಲಿ, “ಹುಡುಗಿಯ ಕುಟುಂಬ ಸದಸ್ಯರು ತಮ್ಮ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ಅವನ ಗೆಳತಿ ತನ್ನ ಕುಟುಂಬದ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರೇಮಿ ಗೆಳತಿಯ ಕೊಲೆ ಮಾಡಿ, ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ, ಶವವನ್ನು ಗಂಗನಹಾರ್ ಕಾಲುವೆಗೆ ಎಸೆಯಲು ಹೊರಟಿದ್ದ.” ಎಂದಿದೆ.

ವೈರಲ್ ವೀಡಿಯೋದಲ್ಲಿರುವ ಹುಡುಗನ ಚಿತ್ರವನ್ನು ಹೊಂದಿರುವ ನ್ಯೂಸ್ 18 ವರದಿಯ ಪ್ರಕಾರ, ಆ ಹುಡುಗನನ್ನು ‘ಗುಲ್ಜೇಬ್’ ಎಂದು ಗುರುತಿಸಲಾಗಿದ್ದು, ತನ್ನ ಗೆಳತಿಯ ಕುಟುಂಬದವರು ತಮ್ಮ ಮದುವೆಗೆ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಂದಿದ್ದಾನೆ ಎನ್ನಲಾಗಿದೆ. ಮೃತ ಹುಡುಗಿಯ ತಂದೆಯನ್ನು ‘ರಶೀದ್’ ಎಂದು ಗುರುತಿಸಲಾಗಿದೆ.

ಘಟನೆಯ ಕುರಿತು ಜಾಗರಣ್ ವರದಿಯ ಪ್ರಕಾರ, ಹುಡುಗಿ ಮತ್ತು ಹುಡುಗ ದೂರದ ಸಂಬಂಧಿಗಳು ಎಂದು ಹೇಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿದ್ದರು ಎಂದು ಅದು ಹೇಳಿದೆ.

ಆದಾಗ್ಯೂ, ಯಾವುದೇ ವರದಿಗಳು ಘಟನೆಯಲ್ಲಿ ಯಾವುದೇ ಕೋಮು ಕೋನವನ್ನು ಉಲ್ಲೇಖಿಸಿಲ್ಲ.
ಘಟನೆ ಕುರಿತಾಗಿ ನ್ಯೂಸ್‌ಚೆಕರ್ 2022ರಲ್ಲಿ ಕಲಿಯಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯವರನ್ನು ಸಂಪರ್ಕಿಸಿದಾಗ ಅವರು ಘಟನೆಗೆ ಕೋಮು ದೃಷ್ಟಿಕೋನವನ್ನು ತಳ್ಳಿಹಾಕಿದ್ದರು. ಅಧಿಕಾರಿ ಧರ್ಮೇಂದ್ರ ರಥಿ ಅವರು ಮಾತನಾಡಿ, “ಆ ಹುಡುಗನ ಹೆಸರು ಗುಲ್ಜೇಬ್. ಹುಡುಗ ಮತ್ತು ಮೃತ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಅದರಲ್ಲಿ ಯಾವುದೇ ಕೋಮು ದೃಷ್ಟಿಕೋನವಿಲ್ಲ” ಎಂದು ತಿಳಿಸಿದ್ದರು. ಗುಲ್ಜೇಬ್ ಮತ್ತು ಹುಡುಗಿ ಸಂಬಂಧದಲ್ಲಿದ್ದರು ಮತ್ತು ಮದುವೆಗೆ ಹುಡುಗಿಯ ಕುಟುಂಬದವರು ಆಕ್ಷೇಪಿಸಿದ ಬಳಿಕ ಆಕೆ ಆತನನ್ನು ನಿರಾಕರಿಸಿದ್ದು, ಆತ ಆಕೆಯನ್ನು ಕೊಲ್ಲಲು ಕಾರಣವಾಗಿದೆ ಎಂದು ರಥಿ ನಮಗೆ ತಿಳಿಸಿದ್ದಾರೆ.
ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಕೊಂದು ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ ಎಂದು ನಮ್ಮ ಸತ್ಯ ಪರಿಶೀಲನೆ ತೋರಿಸಿದೆ. ಈ ವಿಷಯದಲ್ಲಿ ಯಾವುದೇ ‘ಲವ್ ಜಿಹಾದ್’ ಅಥವಾ ಕೋಮು ಕೋನವಿಲ್ಲ.
Our Sources
Report By ETV Bharat, Dated: Mar 25, 2022
Report By News 18, Dated: March 26, 2022
Report By Jagran, Dated: March 26, 2022
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)