ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 24, 2025 ರಂದು, ರಂಜಾನ್ ಮಾಸದ ಸಂದರ್ಭ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು . ಈ ಕಾರ್ಯಕ್ರಮದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿವಿಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಾದವ್‌ಪುರ ವಿಶ್ವವಿದ್ಯಾಲಯವು ಸರಸ್ವತಿ ಪೂಜೆ ಅಥವಾ ಧೋಲ್ ಹಬ್ಬದಂತಹ ಹಿಂದೂ ಹಬ್ಬಗಳನ್ನು ಆಚರಿಸದಿದ್ದರೂ, ವಿಶ್ವವಿದ್ಯಾಲಯದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿದೆ ಎಂದು ಒಂದು ವರ್ಗದ ನೆಟಿಜನ್‌ಗಳು ಆರೋಪಿಸಿದ್ದಾರೆ.
ಆ ಕುರಿತ ಪೋಸ್ಟ್ ಗಳನ್ನು ನಾವು ಫೇಸ್‌ಬುಕ್, ಮುಂತಾದ ಕಡೆಗಳಲ್ಲಿ ನೋಡಿದ್ದೇವೆ. ಇವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.


Also Read: ಔರಂಗಜೇಬ್ ನಿಂದಿಸುವ ಫಲಕ ಹಿಡಿದ ಸಿಎಸ್‌ಕೆ ಅಭಿಮಾನಿ; ವೈರಲ್ ಚಿತ್ರ ನಿಜವೇ?
Fact Check/Verification
ಸತ್ಯಶೋಧನೆಯ ಭಾಗವಾಗಿ, ನ್ಯೂಸ್‌ಚೆಕರ್ ಮೊದಲು ಜಾದವ್‌ಪುರ ವಿಶ್ವವಿದ್ಯಾಲಯದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಧ್ಯಕ್ಷ ನಿಖಿಲ್ ದಾಸ್ ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ಮಾತನಾಡಿ, ಸರಸ್ವತಿ ಪೂಜೆ ಆಚರಣೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿವೆ ಎಂದು ಅವರು ಸ್ಪಷ್ಟಪಡಿಸಿದರು.
“ಕಳೆದ ಎರಡು ವರ್ಷಗಳಿಂದ, ಎಬಿವಿಪಿ ತ್ರಿಗುಣ ಸೇನ್ ಸಭಾಂಗಣದ ಬಳಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ಪೂಜೆ ಆಯೋಜಿಸಲಾತ್ತಿದೆ. ನಾವು ಡೋಲ್ ಉತ್ಸವ (ಹೋಳಿ) ಯನ್ನೂ ಆಚರಿಸಿದ್ದೇತ್ತೇವೆ” ಎಂದು ಅವರು ಮಾಹಿತಿ ನೀಡಿದರು. ಆದಾಗ್ಯೂ, ಎಡಪಂಥೀಯ ವಿದ್ಯಾರ್ಥಿಗಳು ತಮ್ಮ ಧ್ವಜಗಳು ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಜಾದವ್‌ಪುರ ವಿಶ್ವವಿದ್ಯಾಲಯದ ಎಬಿವಿಪಿ ವಿದ್ಯಾರ್ಥಿ ಘಟಕವಾದ ಜೆಯು ಎಬಿವಿಪಿ ಪುಟದಲ್ಲಿ ಕ್ಯಾಂಪಸ್‌ನಲ್ಲಿ ಸರಸ್ವತಿ ಪೂಜೆ ಆಚರಣೆಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ.
ವೈರಲ್ ಆದ ಈ ಹೇಳಿಕೆಯನ್ನು ಸುಳ್ಳು ಎಂದು ಬಣ್ಣಿಸಿರುವ ಜಾದವ್‌ಪುರ ವಿಶ್ವವಿದ್ಯಾಲಯದ ತೃಣಮೂಲ ಛಾತ್ರ ಪರಿಷತ್ (TMCP) ನ ಸಂಶೋಧಕ ಮತ್ತು ನಾಯಕ ಸಂಜೀವ್ ಪ್ರಾಮಾಣಿಕ್ ಅವರು, 2012 ರಿಂದ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು ಮತ್ತು ಹಾಸ್ಟೆಲ್‌ಗಳಲ್ಲಿ ಸರಸ್ವತಿ ಪೂಜೆಯನ್ನು ಆಯೋಜಿಸಲಾಗುತ್ತಿದೆ ಎಂದು ದೃಢಪಡಿಸಿದ್ದಾರೆ. ತೃಣಮೂಲ ಛಾತ್ರ ಪರಿಷತ್ (TMCP) 2019 ರಿಂದ ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದಿದ್ದಾರೆ.
ಕೋವಿಡ್ ಕಾರಣದಿಂದಾಗಿ 2021 ಮತ್ತು 2022 ರಲ್ಲಿ ಸರಸ್ವತಿ ಪೂಜೆಯನ್ನು ಸ್ಥಗಿತಗೊಳಿಸಲಾಗಿದ್ದರೂ, 2025 ಸೇರಿದಂತೆ ಪ್ರತಿ ವರ್ಷವೂ ಇದನ್ನು ನಡೆಸಲಾಗುತ್ತಿದೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಡೋಲ್ ಹಬ್ಬ ಹಾಗೂ ವಿಶ್ವಕರ್ಮ ಪೂಜೆಯನ್ನು ಆಚರಿಸಲಾಗುತ್ತದೆ ಎಂದೂ ಪ್ರಾಮಾಣಿಕ್ ಉಲ್ಲೇಖಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳು ಸರಸ್ವತಿ ಪೂಜೆಯಲ್ಲಿ ಭಾಗವಹಿಸುವಂತೆಯೇ, ಹಿಂದೂ ವಿದ್ಯಾರ್ಥಿಗಳು ಸಹ ಇಫ್ತಾರ್ ಕೂಟಗಳಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.
2025 ರಲ್ಲಿ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆಯನ್ನು ಆಯೋಜಿಸಲು ತೃಣಮೂಲ ಛತ್ರ ಪರಿಷತ್‌ಗೆ ರಿಜಿಸ್ಟ್ರಾರ್ ನೀಡಿದ ಅನುಮತಿ ಪತ್ರವನ್ನು ಸಂಜೀವ್ ಪ್ರಾಮಾಣಿಕ್ ನ್ಯೂಸ್‌ಚೆಕರ್ ಜೊತೆಗೆ ಹಂಚಿಕೊಂಡಿದ್ದಾರೆ. ಪತ್ರದಲ್ಲಿ ಕಿಶ್ಲೋಯ್ ರಾಯ್ ಅವರನ್ನು ಜಾದವ್‌ಪುರ ವಿಶ್ವವಿದ್ಯಾಲಯದ ತೃಣಮೂಲ ಛಾತ್ರ ಪರಿಷತ್ ಘಟಕದ ಅಧ್ಯಕ್ಷರಾಗಿ ಪಟ್ಟಿ ಮಾಡಲಾಗಿದೆ ಎಂದು ತೋರಿಸುತ್ತದೆ.

ಕಿಶ್ಲೋಯ್ ರಾಯ್ ಅವರ ಫೇಸ್‌ಬುಕ್ ಖಾತೆಯಲ್ಲಿ ಹುಡುಕಾಟ ನಡೆಸಿದಾಗ , ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆಯ ಹಲವಾರು ಚಿತ್ರಗಳು ಫೆಬ್ರವರಿ 2, 2025 ರಂದು ಪೋಸ್ಟ್ ಮಾಡಿರುವುದನ್ನು ನೋಡಿದ್ದೇವೆ . ಈ ಚಿತ್ರಗಳಲ್ಲಿ, ಕೆಲವು ಚಿತ್ರಗಳಲ್ಲಿ ತೃಣಮೂಲ ಛತ್ರ ಪರಿಷತ್ ರಾಜ್ಯ ಅಧ್ಯಕ್ಷ ತೃಣಂಕೂರ್ ಭಟ್ಟಾಚಾರ್ಯ ಮತ್ತು ತೃಣಮೂಲ ಸಾಮಾಜಿಕ ಮಾಧ್ಯಮ ಕೋಶದ ವಕ್ತಾರ ಮತ್ತು ಮುಖ್ಯಸ್ಥ ದೇಬಾಂಗ್ಶು ಭಟ್ಟಾಚಾರ್ಯ ಅವರ ಚಿತ್ರಗಳಿವೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ನ ಜಾದವ್‌ಪುರ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಶೌರ್ಜ್ಯದೀಪ್ತ ರಾಯ್ ಅವರು, ಇಫ್ತಾರ್ ಕೂಟದ ಜೊತೆಗೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆ ಮತ್ತು ಡೋಲ್ ಉತ್ಸವವನ್ನು ದೃಢಪಡಿಸಿದ್ದಾರೆ. ಈ ಕಾರ್ಯಕ್ರಮಗಳನ್ನು ಎಲ್ಲಾ ಜಾತಿ ಮತ್ತು ಧರ್ಮಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕ್ಯಾಂಪಸ್‌ನಲ್ಲಿ ಆಚರಿಸಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಇಫ್ತಾರ್ ಮತ್ತು ಸರಸ್ವತಿ ಪೂಜೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಅವರು, ಅಂತಹ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಎಂದು ಪ್ರತಿಪಾದಿಸಿದರು.
ಜಾದವ್‌ಪುರ ವಿಶ್ವವಿದ್ಯಾಲಯದ ಇಫ್ತಾರ್ ಸಂಘಟನಾ ಸಮಿತಿಯ ಸದಸ್ಯ ಮತ್ತು ಶಿಕ್ಷಣ ಇಲಾಖೆಯ ಸಂಶೋಧಕ ಮೊಹಮ್ಮದ್ ಸಜ್ಜದ್ ಹೊಸೈನ್ ಅನ್ಸಾರಿ ಅವರನ್ನು ನ್ಯೂಸ್‌ಚೆಕರ್ ಸಂಪರ್ಕಿಸಿದೆ. ಅವರು ಮಾತನಾಡಿ “ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಇಫ್ತಾರ್ ನಡೆಯುವಂತೆಯೇ, ಸರಸ್ವತಿ ಪೂಜೆ ಮತ್ತು ಡೋಲ್ (ಹೋಳಿ) ಸೇರಿದಂತೆ ಎಲ್ಲಾ ಧಾರ್ಮಿಕ ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ನಾನು ವೈಯಕ್ತಿಕವಾಗಿ ಎರಡರಲ್ಲೂ ಭಾಗವಹಿಸಿದ್ದೆ – ನಾನು ಇಫ್ತಾರ್‌ಗೆ ಹಾಜರಾಗಿದ್ದೆ ಮತ್ತು ಸರಸ್ವತಿ ಪೂಜೆಯಲ್ಲಿಯೂ ಭಾಗವಹಿಸಿದ್ದೆ. ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು” ಎಂದು ಅವರು ಹೇಳಿದರು.
ಇದಲ್ಲದೆ, ಅವರು ಸರಸ್ವತಿ ಪೂಜೆಯಲ್ಲಿ ಭಾಗವಹಿಸುತ್ತಿರುವ, ಭೋಗ್ (ಆಹಾರ) ಸೇವಿಸುತ್ತಿರುವ ಮತ್ತು ಅರ್ಚಕರಿಂದ ಆಶೀರ್ವಾದ ಪಡೆಯುತ್ತಿರುವ ಕೆಲವು ಫೋಟೋಗಳನ್ನು ನ್ಯೂಸ್ ಚೆಕರ್ ಜೊತೆ ಹಂಚಿಕೊಂಡಿದ್ದಾರೆ.


ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ನ್ಯೂಸ್‌ಚೆಕರ್ ಜಾದವ್‌ಪುರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಇಂದ್ರಜಿತ್ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅವರು ಪ್ರತಿಕ್ರಿಯಿಸಿದರೆ, ಈ ಲೇಖನವನ್ನು ಪರಿಷ್ಕರಿಸಲಾಗುವುದು.
Conclusion
ಜಾದವ್‌ಪುರ ವಿಶ್ವವಿದ್ಯಾಲಯವು ಸರಸ್ವತಿ ಪೂಜೆ ಅಥವಾ ಡೋಲ್ ಉತ್ಸವವನ್ನು ಆಯೋಜಿಸುವುದಿಲ್ಲ, ಇಫ್ತಾರ್ ಕೂಟವನ್ನು ಮಾತ್ರ ಆಯೋಜಿಸುತ್ತದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಹೇಳಿಕೆ ಸುಳ್ಳು. ಈ ಮೂರು ಕಾರ್ಯಕ್ರಮಗಳನ್ನು ಎಲ್ಲಾ ಹಿನ್ನೆಲೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಗುತ್ತದೆ.
Also Read: ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ, ಸುಳ್ಳು ಹೇಳಿಕೆ ವೈರಲ್!
Sources
Telephonic conversation with Nikhil Das, ABVP, Jadavpur University
Telephonic conversation with Sanjib Pramanik, TMCP, Jadavpur University
Telephonic conversation with Shourjyadipta Roy, SFI, Jadavpur University
Telephonic conversation with Sajjad Hossain, Department of Education, Jadavpur University
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)