Fact Check
ಪಶ್ಚಿಮ ಬಂಗಾಳದಲ್ಲಿ SIR ಜಾರಿ; ಓಡಿ ಹೋದ ಬಾಂಗ್ಲಾದೇಶೀಯರು?
Claim
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR ) ಪ್ರಾರಂಭವಾಗುತ್ತಿದ್ದಂತೆ, ಅಕ್ರಮ ಬಾಂಗ್ಲಾದೇಶಿ ಜನರು ಓಡಿಹೋಗುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “SIR ಜಾರಿ ಆದ ಮೇಲೆ ಬಂಗಾಳದಿಂದ ಮನೆ ಮಠಗಳನ್ನು ಬಿಟ್ಟು ಓಡಿಹೋಗುತ್ತಿರುವ ಬಾಂಗ್ಲಾದೇಶಿ ಮುಸ್ಲಿಮರು” ಎಂದಿದೆ.


ಇದೇ ರೀತಿಯ ಪೋಸ್ಟ್ ಥ್ರೆಡ್ ನಲ್ಲಿ ಕಂಡುಬಂದಿದ್ದು, ಇಲ್ಲಿ ನೋಡಿ.
Also Read: ರಾಷ್ಟ್ರಗೀತೆಗೆ ಮಮತಾ ಬ್ಯಾನರ್ಜಿ ಅಗೌರವ? ವೈರಲ್ ವೀಡಿಯೋ ನಿಜವೇ?
Fact
ವೈರಲ್ ವೀಡಿಯೋದ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ವೀಡಿಯೋ ಬಾಂಗ್ಲಾದೇಶದ ಮೊಂಗ್ಲಾ ಘಾಟ್ ನದ್ದು ಎಂದು ಕಂಡುಬಂದಿದೆ. ವೈರಲ್ ವೀಡಿಯೋ ರೀತಿಯ ವೀಡಿಯೋ ಎಚ್ ಎಂ ರಾಜು ಹವ್ಲಾದರ್ ಎಂಬ ಫೇಸ್ಬುಕ್ ಬಳಕೆದಾರರು ಪೋಸ್ಟ್ ಮಾಡಿರುವ ವೀಡಿಯೋಗೆ ಹೋಲುತ್ತದೆ ಎಂದು ಕಂಡುಬಂದಿದೆ.
ಇದಲ್ಲದೆ, ಅಜ್ಕರ್ ಪತ್ರಿಕಾ ಮತ್ತು ಐಟಿವಿಬಿಡಿ ವರದಿಗಳು , ಸಾಮಾನ್ಯ ಜನರು ಬಾಂಗ್ಲಾದೇಶದ ಮೊಂಗ್ಲಾ ಘಾಟ್ ಅನ್ನು ನಿಯಮಿತವಾಗಿ ದಾಟುತ್ತಿರುವುದು ಹೆಚ್ಚಿನ ಅಪಾಯದಲ್ಲಿದೆ ಎಂದು ಬಹಿರಂಗಪಡಿಸುತ್ತವೆ. ಕಾರ್ಮಿಕರು ಪ್ರತಿದಿನ ಮೊಂಗ್ಲಾ ಇಪಿಜೆಡ್ ಮತ್ತು ಮೊಂಗ್ಲಾ ಬಂದರು ಕೈಗಾರಿಕಾ ಪ್ರದೇಶಕ್ಕೆ ಪ್ರಯಾಣಿಸುತ್ತಾರೆ. ಸರಿಯಾದ ಘಾಟ್ಗಳ ಕೊರತೆಯಿಂದಾಗಿ, ಯಾವುದೇ ಸಮಯದಲ್ಲಿ ದೊಡ್ಡ ಅಪಘಾತ ಸಂಭವಿಸುವ ಅಪಾಯವಿದೆ ಎಂದು ಇದರಲ್ಲಿದೆ.


ಮೇಲಿನ ಮಾಹಿತಿಯ ಪ್ರಕಾರ ವೈರಲ್ ವಿಡಿಯೋ ಭಾರತದ್ದಲ್ಲ, ಬದಲಾಗಿ ಬಾಂಗ್ಲಾದೇಶದ ಮೊಂಗ್ಲಾ ಘಾಟ್ನಿಂದ ಬಂದಿದೆ ಮತ್ತು ಜನರು SIR ನಿಂದಾಗಿ ಬಾಂಗ್ಲಾದೇಶಕ್ಕೆ ಹೋಗುತ್ತಿರುವ ವಿದ್ಯಮಾನ ಇದಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
Also Read: ತಮಿಳುನಾಡು ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ನಿಂದ ಸ್ಟ್ರೆಚರ್ ನೊಂದಿಗೆ ಹೊರಬಿದ್ದ ರೋಗಿ?
FAQ ಗಳು:
1. ವೈರಲ್ ಆಗಿರುವ ವಿಡಿಯೋವನ್ನು ಎಲ್ಲಿ ತೆಗೆಯಲಾಗಿದೆ?
ಈ ವೀಡಿಯೋವನ್ನು ಭಾರತದ ಬಸಿರ್ಹತ್ ನಲ್ಲಿ ಅಲ್ಲ, ಬಾಂಗ್ಲಾದೇಶದ ಮೊಂಗ್ಲಾ ಘಾಟ್ ನಲ್ಲಿ ತೆಗೆಯಲಾಗಿದೆ.
Q2. ವಿಡಿಯೋವನ್ನು ಯಾವಾಗ ಪೋಸ್ಟ್ ಮಾಡಲಾಗಿದೆ?
SIR ವಿವಾದಕ್ಕೂ ಬಹಳ ಹಿಂದೆಯೇ ಎಚ್ ಎಂ ರಾಜು ಹವ್ಲಾಡರ್ ಎಂಬ ಫೇಸ್ಬುಕ್ ಬಳಕೆದಾರರು ಇದನ್ನು ಪೋಸ್ಟ್ ಮಾಡಿದ್ದರು.
Q3. ವಿಡಿಯೋ ವೈರಲ್ ಆಗಲು ಕಾರಣವೇನು?
SIR ಬಗ್ಗೆ ಆನ್ಲೈನ್ನಲ್ಲಿ ಹರಡಿರುವ ಗೊಂದಲ ಮತ್ತು ರಾಜಕೀಯ ವಿಚಾರಕ್ಕೆ ಅನುಗುಣವಾಗಿ ಹಳೆಯ ವೀಡಿಯೋವನ್ನು ಹೊಸ ಹೇಳಿಕೆಗಳೊಂದಿಗೆ ಪ್ರಸಾರ ಮಾಡಲಾಗುತ್ತಿದೆ.
Q4. ವೀಡಿಯೊದಲ್ಲಿ ಕಾಣುವ ಜನರು ಯಾರು?
ಅವರು ಬಾಂಗ್ಲಾದೇಶದ ಮೊಂಗ್ಲಾ ಬಂದರು ಪ್ರದೇಶದ ಕಾರ್ಮಿಕರು ಮತ್ತು ಸ್ಥಳೀಯ ಪ್ರಯಾಣಿಕರು, ಅವರು ಪ್ರತಿದಿನ ದೋಣಿಯಲ್ಲಿ ನದಿಯನ್ನು ದಾಟುತ್ತಾರೆ.
Q5. ಈ ವಿಡಿಯೋಕ್ಕೂ, SIR ಗೂ ಏನಾದರೂ ಸಂಬಂಧವಿದೆಯೇ?
ಇಲ್ಲ, ಇದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು SIR ವಿವಾದಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.
Our Sources
Facebook post by HM Raju Hawlader, Dated: November 6, 2025
Report by ITVBD, Dated: November 11, 2025
Report by Ajkerpatrika, Dated: October 20, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಬಂಗಾಳಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)