Authors
Claim
ಕೇರಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣದ ವೇಳೆ ಹಕ್ಕಿಯೊಂದು ಸಹಾಯ ಮಾಡಿದೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿತು, ಎಲ್ಲಿಂದಲೋ ಒಂದು ಹಕ್ಕಿ ಬಂದು ಅದನ್ನು ಬಿಡಿಸಿ ಅಲ್ಲಿಂದ ಹಾರಿಹೋಯಿತು” ಎಂದಿದೆ.
ಇದೇ ರೀತಿಯ ಹೇಳಿಕೆಗಳನ್ನು ನಾವು ಇಲ್ಲಿ ಇಲ್ಲಿ ಇಲ್ಲಿ ಕಂಡುಕೊಂಡಿದ್ದೇವೆ.
ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ದೃಷ್ಟಿ ಭ್ರಮೆ ಕುರಿತ ವಿದ್ಯಮಾನವಾಗಿದ್ದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದ್ದೇವೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
“ಕಾಗೆಯ ದೇಶಭಕ್ತಿಯ ಮೂಲ” ಎಂಬ ಶೀರ್ಷಿಕೆಯೊಂದಿಗೆ ಫೇಸ್‌ಬುಕ್ ನಲ್ಲಿ ಆಗಸ್ಟ್ 17, 2024ರಂದು ಶಾಜಿ ಎರುವಟ್ಟಿ ಎಂಬವರು ರೀಲ್ಸ್ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಪಕ್ಷಿಯೊಂದು ಹಾರಿಬಂದು ಸಮೀಪದ ತೆಂಗಿನ ಮರದಲ್ಲಿ ಕೂತು ಬಳಿಕ ಹಾರಿ ಹೋಗುವುದು ಕಾಣಿಸುತ್ತದೆ ಇದೇ ಸಮಯಕ್ಕೆ ಧ್ವಜ ಅರಳಿಸುವಿಕೆ ನಡೆಯುವುದು ಕಾಣಿಸುತ್ತದೆ.
ವೈರಲ್ ಆದ ವೀಡಿಯೋಕ್ಕೆ ಮತ್ತು ಈ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಕಂಡುಕೊಂಡಿದ್ದೇವೆ ಮತ್ತು ವೈರಲ್ ವೀಡಿಯೋದಲ್ಲಿ ಪಕ್ಷಿ ಧ್ವಜ ಸಮೀಪಕ್ಕೆ ಬಂದಂತೆ ಕಾಣಿಸುತ್ತಿತ್ತು ಎಂಬುದನ್ನು ಗಮನಿಸಿದ್ದೇವೆ.
ಬಳಿಕ ಇನ್ನಷ್ಟು ಶೋಧವನ್ನು ನಾವು ನಡೆಸಿದ್ದೇವೆ. ಈ ವೇಳೆ ಆಗಸ್ಟ್ 17, 2024ರ ಏಷ್ಯಾನೆಟ್ ನ್ಯೂಸ್ ಪೋಸ್ಟ್ ಕಂಡುಬಂದಿದೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ, “ಧ್ವಜವನ್ನು ಕಾಗೆಯ ನೆರವಿನಿಂದ ಅರಳಿಸಿಲ್ಲ, ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ” ಎಂದಿದೆ. ಈ ವೀಡಿಯೋದಲ್ಲಿ ಕಾಗೆ ತೆಂಗಿನ ಮರವೊಂದರ ಮೇಲೆ ಬಂದು ಕುಳಿತುಕೊಳ್ಳುವುದು ಅದೇ ಸಮಯಕ್ಕೆ ಧ್ವಜ ಅರಳಿಸುವುದು ಕೂಡಲೇ ಕಾಗೆ ಹಾರಿಹೋಗುವುದು ಕಾಣಿಸುತ್ತದೆ.
ಆಗಸ್ಟ್ 18, 2024ರಂದು ಇಟಿ ನ್ಯೂಸ್ ವರದಿಯಲ್ಲಿ, ಕೇರಳದಲ್ಲಿ ಪಕ್ಷಿಯೊಂದು ರಾಷ್ಟ್ರ ಧ್ವಜ ಹಾರಿಸಲು ಸಹಾಯಮಾಡಿದೆ ಎಂಬ ವೀಡಿಯೋ ಹಿಂದಿನ ಸತ್ಯವೇನು ಎಂಬ ಬಗ್ಗೆ ಹೇಳಲಾಗಿದೆ. ಇದೇ ವರದಿಯಲ್ಲಿ ಇನ್ನೊಂದು ಕೋನದ ವೀಡಿಯೋವನ್ನು ನೀಡಲಾಗಿದ್ದು, ವೈರಲ್ ವೀಡಿಯೋ ದೃಷ್ಟಿ ಭ್ರಮೆ ಸೃಷ್ಟಿಸುವಂತಿದೆ ಎಂದಿದೆ.
ಈ ಕುರಿತ ಇನ್ನಷ್ಟು ವರದಿಗಳನ್ನು ಇಲ್ಲಿ,ಇಲ್ಲಿ ನೋಡಬಹುದು.
ಹೆಚ್ಚಿನ ಮಾಹಿತಿಗಾಗಿ ನ್ಯೂಸ್‌ಚೆಕರ್ ಮಂಪಾಡ್ ಪಂಚಾಯತ್‌ನ ವಾರ್ಡ್ ನಂ: 7 ರ ಸದಸ್ಯ ಶಿಹಾಬ್ ಅವರನ್ನು ಸಂಪರ್ಕಿಸಿತು. ಅವರು ಮಾತನಾಡಿ “ಧ್ವಜಾರೋಹಣವನ್ನು ಫೋನ್ ಮೂಲಕ ವೀಡಿಯೋದಲ್ಲಿ ಕಾಣಬಹುದು. ಮಾರಮಂಗಲಂನ ಕಟ್ಟುಮುಂಡದಲ್ಲಿರುವ ಅಂಗನವಾಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ವೈರಲ್ ಆಗಿರುವ ವೀಡಿಯೋವನ್ನು ಒಂದು ನಿರ್ದಿಷ್ಟ ಕೋನದಿಂದ ಚಿತ್ರೀಕರಿಸಿದ್ದರಿಂದ ಧ್ವಜಾರೋಹಣ ಮಾಡಲು ಕಾಗೆಯೊಂದು ಸಹಾಯ ಮಾಡಿದೆ ಎಂಬಂತೆ ಕಾಣುತ್ತದೆ ಎಂದು ಅನಿಸುತ್ತದೆ” ಎಂದಿದ್ದಾರೆ.
ಈ ಸಾಕ್ಷ್ಯಗಳ ಪ್ರಕಾರ ಕೇರಳದಲ್ಲಿ ಸ್ವಾತಂತ್ರ್ಯ ದಿನ ರಾಷ್ಟ್ರಧ್ವಜವನ್ನು ಹಾರಿಸುವಾಗ ಅದು ಮೇಲ್ಭಾಗದಲ್ಲಿ ಸಿಲುಕಿಕೊಂಡಿತು, ಎಲ್ಲಿಂದಲೋ ಒಂದು ಹಕ್ಕಿ ಬಂದು ಅದನ್ನು ಬಿಡಿಸಿ ಅಲ್ಲಿಂದ ಹಾರಿಹೋಯಿತು ಎಂಬ ಹೇಳಿಕೆ ತಪ್ಪಾಗಿದೆ ಇದು ದೃಷ್ಟಿ ಭ್ರಮೆಯಿಂದಾಗಿದೆ.
Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್
Result: False
Our Sources
Facebook post By shaji.eruvatty, Dated: August 17, 2024
Facebook post By Asianet News, Dated: August 17, 2024
Report By ET news, Dated: August 17, 2024
Telephone Conversation with Shihab, Member Mambad Grama Panchayat
(With Inputs from Sabloo Thomas, Newschecker)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.