Authors
Claim
ಸ್ವಾತಂತ್ರ್ಯೋತ್ಸವದ ದಿನದಂದು ಧ್ವಜಾರೋಹಣ ಬಳಿಕ ಅತಿಥಿಯೊಬ್ಬರು ತಪ್ಪಾಗಿ ರಾಷ್ಟ್ರಗೀತೆ ಹಾಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ವೈರಲ್ ಆಗಿದೆ. ಈ ವೀಡಿಯೋದ ಸತ್ಯಶೋಧನೆ ಮಾಡುವಂತೆ ಬಳಕೆದಾರೊಬ್ಬರು ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ಗೆ ದೂರು ನೀಡಿದ್ದು ಅದನ್ನು ನಾವು ಸ್ವೀಕರಿಸಿದ್ದೇವೆ.
Also Read: ಸರ್ಕಾರದ ವಿರುದ್ಧ ಬೀದಿಗಿಳಿಯಲು ಸಿಜೆಐ ಚಂದ್ರಚೂಡ್ ನಾಗರಿಕರನ್ನು ಒತ್ತಾಯಿಸಿದ್ದಾರಾ?
Fact
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ವೀಡಿಯೋದಲ್ಲಿ ನಸ್ರುತ್ತುಲ್, ಲೊರೆಟ್ಟೊಪದವು ಇತ್ಯಾದಿ ಹೆಸರುಗಳನ್ನು ಗಮನಿಸಿದ್ದೇವೆ. ಈ ಹೆಸರುಗಳ ಆಧಾರದಲ್ಲಿ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಈ ವಿದ್ಯಮಾನ ಈಗಿನದ್ದಲ್ಲ ಹಳೆಯದು ಎಂದು ತಿಳಿದುಬಂದಿದೆ.
2021 ಆಗಸ್ಟ್ 17ರ ದೈಜಿವೈರ್ಲ್ಡ್ ವರದಿಯ ಪ್ರಕಾರ, “ಬಂಟ್ವಾಳ ಪುರಸಭೆ ಸದಸ್ಯ ವಾಸು ಪೂಜಾರಿ ಎಂಬವರು ಲೊರೆಟ್ಟೊಪದವು ಎಂಬಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಪ್ಪಾಗಿ ರಾಷ್ಟ್ರಗೀತೆಯನ್ನು ಹಾಡಿರುವುದು ವೈರಲ್ ಆಗಿದೆ.” ಎಂದಿದೆ.
ಆಗಸ್ಟ್ 16, 2021ರಂದು ಒನ್ ಇಂಡಿಯಾ ನ್ಯೂಸ್ ನೆಟ್ವರ್ಕ್ ಕೂಡ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, “ಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೋರೊಟ್ಟೊ ಇವರು ರಾಷ್ಟ್ರಗೀತೆ ಹಾಡಿರುವುದನ್ನು ನೋಡಿ” ಎಂದಿದೆ.
Also Read: ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?
ಆಗಸ್ಟ್ 17, 2021ರಂದು ಟಿವಿ 9 ಕನ್ನಡ ಯೂಟ್ಯೂಬ್ ವೀಡಿಯೋದಲ್ಲಿ ಕೂಡ ವೈರಲ್ ಆಗಿರುವ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದ್ದು, “ದಕ್ಷಿಣ ಕನ್ನಡದಲ್ಲಿ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ಅತಿಥಿಯೊಬ್ಬರು ರಾಷ್ಟ್ರಗೀತೆಯನ್ನು ಹಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ತಪ್ಪು ತಪ್ಪು ರಾಷ್ಟ್ರಗೀತೆಯನ್ನು ಹಾಡಿ ರಾಷ್ಟ್ರಗೀತೆಗ ಅವಮಾನಗೊಳಿಸಿದ್ದಾರೆ” ಎಂದಿದೆ.
ಈ ಘಟನೆ ನಡೆದ ಬಳಿಕ ಪುರಸಭೆ ಸದಸ್ಯ ವಾಸು ಪೂಜಾರಿ ಅವರು ರಾಷ್ಟ್ರಗೀತೆಯನ್ನು ಸರಿಯಾಗಿ ಹಾಡುತ್ತಿರುವ ವರದಿಯನ್ನು ಆಗಸ್ಟ್ 17, 2021ರಂದು ದೈಜಿವರ್ಲ್ಡ್ ಪ್ರಕಟಿಸಿದ್ದು, ಅದು ಇಲ್ಲಿದೆ.
ಸತ್ಯಶೋಧನೆಯ ಪ್ರಕಾರ, ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡುತ್ತಿರುವ ದೃಶ್ಯ ಈಗಿನದ್ದಲ್ಲ. ಅದು 2021ರ ಸಮಯದ್ದು ಎಂದು ತಿಳಿದುಬಂದಿದೆ.
Also Read: ಆಗಸ್ಟ್ 10ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್ ಹೈಕೋರ್ಟ್ ತೀರ್ಪು, ಎನ್ನುವುದು ನಿಜವೇ?
Result: Missing Context
Our Sources:
Report By Daijiword, Dated: August 17, 2021
Facebook Video By One India News Network, Dated: August 16, 2021
YouTube Video By Tv9 Kannada, Dated: August 17, 2021
Facebook Video By Daijiwold, Dated: August 17, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.