Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸ್ವಾತಂತ್ರ್ಯ ದಿನ ಧ್ವಜಾರೋಹಣಕ್ಕೆ ಹಕ್ಕಿ ಸಹಾಯ, ಆಸ್ಟ್ರೇಲಿಯನ್ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು, ಪೊಲೀಸರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಎಂಬ ಹೇಳಿಕೆಗಳು ಈ ವಾರ ಇದ್ದವು ಇದರೊಂದಿಗೆ ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದರು, ಮಾಲ್ಡೀವ್ಸ್ ನಿಂದ ಭಾರತಕ್ಕೆ 28 ದ್ವೀಪ ಹಸ್ತಾಂತರ ಎಂಬ ರಾಜಕೀಯ ಹೇಳಿಕೆಗಳೂ ಇದ್ದವು. ಇನ್ನು ತುಂಡು ಮಾಡಿದ ಟೊಮೆಟೊವನ್ನು ಕಾಲಿನಡಿಯಲ್ಲಿಟ್ಟು ಕಟ್ಟಿದರೆ ಜ್ವರ ವಾಸಿಯಾಗುತ್ತದೆ ಎಂಬ ಹೇಳಿಕೆಯೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ತಪ್ಪು ಹೇಳಿಕೆ ಎಂದು ಕಂಡುಕೊಂಡಿದೆ.
ಕೇರಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣದ ವೇಳೆ ಹಕ್ಕಿಯೊಂದು ಸಹಾಯ ಮಾಡಿದೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ ಬೇರೆ ಕೋನದಿಂದ ತೆಗೆಯಲಾದ ವೀಡಿಯೋದಲ್ಲಿ ಹಕ್ಕಿ ಬಂದು ಸಮೀಪದ ತೆಂಗಿನ ಮರದಲ್ಲಿ ಬಂದು ಕುಳಿತಿರುವುದು ಬಳಿಕ ಹಾರಿ ಹೋಗುವುದು ಕಂಡುಬಂದಿದೆ. ಅಂದರೆ ವೈರಲ್ ವೀಡಿಯೋ ದೃಷ್ಟಿ ಭ್ರಮೆಯನ್ನು ಸೃಷ್ಟಿಸಿದೆ ಎಂದು ಕಂಡುಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ, ಬಾಹ್ಯಾಕಾಶದಿಂದ ಆಸ್ಟ್ರಿಯಾ ಮೂಲದ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರು 2012ರಲ್ಲಿ ಜಿಗಿದು ದಾಖಲೆ ಮಾಡಿದ್ದರು ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಲೆಬಾಗಿ ನಮಸ್ಕರಿಸಿದ್ದಾರೆ ಎಂಬಂತೆ ಫೊಟೋ ಒಂದು ವೈರಲ್ ಆಗಿದೆ. ಈ ಚಿತ್ರದ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಎರಡು ಪ್ರತ್ಯೇಕ ಫೊಟೋಗಳನ್ನು ತಿರುಚಿ ಇದನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿ ಓದಿ
ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎಂಬಂತೆ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದಾಗ, ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಭಾರತದ ಅನುದಾನದಲ್ಲಿ ಮಾಲ್ಡೀವ್ಸ್ ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಯ ಉದ್ಘಾಟನೆಯಾಗಿರುವುದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಪೊಲೀಸರು ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆ ಆರಂಭಿಸಿದ್ದಾರೆ 1091- 7837018555 ಕರೆ ಮಾಡಿ ನೆರವು ಪಡೆಯಬಹುದು ಎಂದು ಸಂದೇಶವೊಂದನ್ನು ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆಯನ್ನು ನಡೆಸಿದಾಗ, ಕರ್ನಾಟಕದಲ್ಲಿ ಮಹಿಳೆಯರಿಗೆ ರಾತ್ರಿ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಆರಂಭಿಸಿಲ್ಲ, 1091 ಎನ್ನುವುದು ಮಹಿಳೆಯರ ಸುರಕ್ಷತೆ ಕುರಿತ ಸಹಾಯವಾಣಿ ಆಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಕತ್ತರಿಸಿದ ಟೊಮೆಟೊವನ್ನು ಪಾದದಡಿಯಲ್ಲಿಟ್ಟು ಬಟ್ಟೆ ಕಟ್ಟಿದರೆ ಜ್ವರ ಗುಣಪಡಿಸಬಹುದು ಎಂಬ ಹೇಳಿಕೆ ಹರಿದಾಡಿದೆ. ಈ ಬಗ್ಗೆ ಪರಿಶೀಲಿಸಿದಾಗ, ಕತ್ತರಿಸಿದ ಟೊಮೆಟೊವನ್ನು ಪಾದದಡಿಯಲ್ಲಿಟ್ಟು ಬಟ್ಟೆ ಕಟ್ಟಿದರೆ ಜ್ವರ ಗುಣಪಡಿಸಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 16, 2024
Vasudha Beri
November 12, 2024
Newschecker and THIP Media
November 1, 2024