Fact Check: ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?

ರಾಣಿ ಕಾ ಹಜಿರಾ, ಅಹಮದಾಬಾದ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ 1600 ವರ್ಷ ಹಳೆಯ ದೇಗುಲ ಪತ್ತೆಯಾಗಿದೆ

Fact
ಅಹಮದಾಬಾದ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ರಾಣಿ ಕಾ ಹಜಿರಾ ಹೊರಭಾಗದಲ್ಲಿ ನಡೆದಿದೆ. ಇದು ಮೊಘಲ್ ರಾಣಿಯರ ಸಮಾಧಿಯಾಗಿದ್ದು ಇಲ್ಲಿ ಯಾವುದೇ ದೇಗುಲ ಕಂಡುಬಂದಿಲ್ಲ

ಅಹಮದಾಬಾದ್‌ ನಲ್ಲಿ ರಾಣಿ ಕಾ ಹಜಿರಾ ಎಂಬ ಮುಸ್ಲಿಂ ಪ್ರದೇಶವನ್ನು ನೆಲಸಮಗೊಳಿಸಿ ಬಳಿಕ ಅಲ್ಲಿದ್ದ 1600 ವರ್ಷ ಹಳೆಯ ಹಿಂದೂ ದೇಗುಲವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದು ವೀಡಿಯೋದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಈ ಕುರಿತು ವಾಟ್ಸಾಪ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಗುಜರಾತ್‌ನ ಅಹಮದಾಬಾದ್‌ನಲ್ಲಿ “ರಾಣಿ ಕಾ ಹಜಿರಾ” ಎಂಬ ಹೆಸರಿನ ಇಡೀ ಮುಸ್ಲಿಂ ಪ್ರದೇಶವನ್ನು ನೆಲೆಸಮ ಗೊಳಿಸಿ 1600. ವರುಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನ ವಶಪಡಿಸಿಕೊಳ್ಳಲಾಯಿತು . ಇಲ್ಲಿಯವರೆಗೆ ಜಿಹಾದಿಗಳ ಹಿಡಿತದಲ್ಲಿತ್ತು…ಇಂತಹ ಭವ್ಯವಾದ ಹಿಂದೂ ದೇವಾಲಯ ಇದಾಗಿದ್ದು, ಈಗ ಮುಸಲ್ಮಾನರ ದಾಳಿಯಿಂದ ಮುಕ್ತಿ ಪಡೆದಿದೆ.. “ ಎಂದಿದೆ.

Also Read: ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆಯೇ?

Fact Check: ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?
ವಾಟ್ಸಾಪ್‌ ನಲ್ಲಿ ಕಂಡುಬಂದ ಕ್ಲೇಮ್

ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ ಚೆಕರ್ ಗೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್‌ ಟಿಪ್‌ ಲೈನ್‌ (+91- 9999499044) ಮೂಲಕ ಮನವಿಯನ್ನು ಸಲ್ಲಿಸಿದ್ದು, ಅದನ್ನು ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.

ತನಿಖೆ ವೇಳೆ ಕಂಡುಬಂದ ಸಾಕ್ಷ್ಯಗಳ ಆಧಾರದಲ್ಲಿ ಇದು ರಾಣಿ ಕಿ ಹಜಿರಾ ಎನ್ನುವುದು ಮೊಘಲ್‌ ಅರಸರ ಪತ್ನಿಯರ ಗೋರಿ ಇರುವ ಪ್ರದೇಶವಾಗಿದ್ದು, ಒಂದು ಐತಿಹಾಸಿಕ ಸ್ಥಳವಾಗಿದೆ. ಇದರ ಸುತ್ತಲಿನ ಅತಿಕ್ರಮಿತ ಪ್ರದೇಶಗಳನ್ನು ಸ್ಥಳೀಯಾಡಳಿತ ಇತ್ತೀಚೆಗೆ ತೆರವುಗೊಳಿಸಿದೆ ಎಂದು ಗೊತ್ತಾಗಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಮೊದಲು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ.

ಈ ವೇಳೆ ದಿಲೀಪ್‌ ಪಟೇಲ್‌ ಎನ್ನುವವರು ಮಾಡಿದ ಎಕ್ಸ್ ಪೋಸ್ಟ್ ಕಂಡುಕೊಂಡಿದ್ದೇವೆ. ಫೆಬ್ರವರಿ 1, 2024ರ ಪೋಸ್ಟ್ ನಲ್ಲಿ ಅವರು “ಅಹಮದಾಬಾದ್‌ ನ ಮಾನೇಚೌಕ್ ನ ರಾಣಿ ಹಿಜಿರಾವೋ ಮೇಲಿದ್ದ ಒತ್ತಡವನ್ನು ನಿವಾರಿಸಲಾಗಿದೆ. ಈ ರೋಜಾದ ವಿಶೇ‍ಷತೆ ಎಂದರೆ ಗುಂಬಜ್‌ ಇಲ್ಲ ಮತ್ತು ಇದು ಮೊಘಲರ ಅನಾಮಿಕ ರಾಣಿಯರ ಗೋರಿಯಾಗಿದೆ ಎಂದಿದ್ದಾರೆ.

ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.  ಈ ವೇಳೆ ಪತ್ರಿಕಾ ವರದಿಗಳು ಲಭ್ಯವಾಗಿವೆ.

ಫೆಬ್ರವರಿ 7, 2024ರಂದು ಜಾಗರಣ್‌ ಪ್ರಕಟಿಸಿದ ವರದಿಯಲ್ಲಿ “ವಿಶ್ವ ಪರಂಪರೆಯ ನಗರವಾದ ಅಹಮದಾಬಾದ್ನಲ್ಲಿ, ಮುನ್ಸಿಪಲ್ ಕಾರ್ಪೊರೇಷನ್ ನಗರವನ್ನು ಸ್ವಚ್ಚಗೊಳಿಸುವುದರ ಜೊತೆಗೆ ಪಾರಂಪರಿಕ ಪ್ರಾಮುಖ್ಯತೆಯ ಸ್ಥಳಗಳ ಅತಿಕ್ರಮಣಗಳನ್ನು ತೆಗೆದುಹಾಕುವ ಅಭಿಯಾನವನ್ನು ಪ್ರಾರಂಭಿಸಿದೆ. ಜಾಮಾ ಮಸೀದಿಯ ಹಿಂಭಾಗದಲ್ಲಿರುವ ಸುಲ್ತಾನ್ ಅಹ್ಮದ್ ಷಾ ಅವರ ಸಮಾಧಿಯ ಮುಂಭಾಗದಲ್ಲಿರುವ ನೂರಾರು ಚದರ ಮೀಟರ್ ‘ರಾಣಿ ಕಾ ಹಜಿರಾ’ ಅನ್ನು ತೆಗೆದು ಪ್ರವಾಸಿಗರಿಗೆ ತೆರೆಯಲಾಗಿದೆ. ಮುಸ್ಲಿಂ ವ್ಯಾಪಾರಿಗಳು ಅದನ್ನು ಎಲ್ಲಾ ಕಡೆಯಿಂದಲೂ ಆಕ್ರಮಿಸಿಕೊಂಡಿದ್ದರು.” ಎಂದಿದೆ.

Also Read: ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?

Fact Check: ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?
ಜಾಗರಣ್‌ ವರದಿ

ಇನ್ನು ರಾಣಿ ಕಾ ಹಜಿರಾ ಒತ್ತುವರಿಗೆ ಈಡಾದ ಬಗ್ಗೆ ಮತ್ತು ಅದನ್ನು ತೆರವು ಗೊಳಿಸುವ ಕುರಿತಾದ ಬಗ್ಗೆ ವರದಿಗಳನ್ನು ಇಲ್ಲಿ, ಇಲ್ಲಿ, ನೋಡಬಹುದು.

ರಾಣಿ ಕಾ ಹಜಿರಾ ಎನ್ನುವುದು ಮೊದಲು ದೇಗುಲವಾಗಿತ್ತೇ ಎನ್ನುವ ಬಗ್ಗೆಯೂ ನಾವು ಪರಿಶೀಲನೆ ನಡೆಸಿದ್ದೇವೆ. ಎಪ್ರಿಲ್‌ 18, 2021ರ ಇಟಿವಿ ಭಾರತ್ ವರದಿಯಲ್ಲಿ “ಅಹ್ಮದಾಬಾದ್ ನಗರದ ಮಾನೆಕ್ ಚೌಕ್ ಪ್ರದೇಶದಲ್ಲಿರುವ ರಾಣಿಯರ ಹಜೀರಾಗೆ ಪುರಾತತ್ವ ಇಲಾಖೆ ಐತಿಹಾಸಿಕ ದೃಷ್ಟಿಕೋನದಿಂದ ಸಾಕಷ್ಟು ಪ್ರಾಮುಖ್ಯತೆ ನೀಡಿದೆ. ಅಹ್ಮದಾಬಾದ್ ಅನ್ನು ಸ್ಥಾಪಿಸಿದ ಅಹ್ಮದ್ ಷಾ ಅವರ ಪತ್ನಿಯರ ಸಮಾಧಿಗಳು ರಾಣಿಯ ಹಜೀರಾದಲ್ಲಿವೆ. ಜಾಮಾ ಮಸೀದಿಯು ಅವುಗಳ ಪಶ್ಚಿಮ ಭಾಗದಲ್ಲಿದೆ. ಅದರಲ್ಲಿ ಅಹ್ಮದ್ ಷಾನ ಸಮಾಧಿ ಇದೆ.” ಎಂದಿದೆ.

ಇನ್ನೂ ಹೆಚ್ಚಿನ ಶೋಧದ ಭಾಗವಾಗಿ ನಾವು ಅಹ್ಮದಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ ನ ಐತಿಹಾಸಿಕ ಸ್ಥಳಗಳ ಕುರಿತ ಮಾಹಿತಿ ಪರಿಶೀಲಿಸಿದ್ದೇವೆ. ಕಾರ್ಪೊರೇಷನ್‌ಗೆ ಸಂಬಂಧಿಸಿದ ವೆಬ್‌ ಸೈಟ್ ವೀಕ್ಷಿಸಿದ್ದು,ಇದರಲ್ಲಿ ರಾಣಿಯರ ಸಮಾಧಿ ಕುರಿತಾಗಿ ಮಾಹಿತಿ ಇದೆ. ಸುಲ್ತಾನ್‌ ಅಹ್ಮದ್‌ ಶಾ ಪತ್ನಿಯ ಸಮಾಧಿ ಇಲ್ಲಿದ್ದು, ಇದನ್ನು 1445ರಲ್ಲಿ ಕಟ್ಟಲಾಯಿತು ಎಂದಿದೆ. ಅಲ್ಲದೇ ಈ ಸಮುಚ್ಚಯದ ಪ್ರದೇಶ ಬಟ್ಟೆ, ಕರಕುಶಲ ವಸ್ತುಗಳು, ಆರ್ಟಿಫಿಶಿಯಲ್‌ ಆಭರಣಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ ಎಂದಿದೆ.

Fact Check: ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?
ಅಹಮದಾಬಾದ್‌ ಐತಿಹಾಸಿಕ ಸ್ಥಳಗಳ ಕುರಿತ ವೆಬ್‌ ಸೈಟ್

ಇದರೊಂದಿಗೆ ನಾವು ಅಹಮದಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್ ನ ಮಾಧ್ಯಮ ವಿಭಾಗದ ಉಪ ಮುಖ್ಯಸ್ಥ ಚಿರಾಗ್‌ ಎಚ್‌ ಪಟೇಲ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ “ಒತ್ತುವರಿ ತೆರವು ಕಾರ್ಯಾಚರಣೆ ರಾಣಿ ಕಾ ಹಜಿರಾದಲ್ಲಿ ನಡೆದಿದ್ದು, ಅಲ್ಲಿ ಯಾವುದೇ ದೇಗುಲ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Conclusion

ಈ ತನಿಖೆಯ ಪ್ರಕಾರ ಅಹಮದಾಬಾದ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ರಾಣಿ ಕಾ ಹಜಿರಾ ಹೊರಭಾಗದಲ್ಲಿ ನಡೆದಿದೆ. ಇದು ಮೊಘಲ್ ರಾಣಿಯರ ಸಮಾಧಿಯಾಗಿದ್ದು ಇಲ್ಲಿ ಯಾವುದೇ ದೇಗುಲ ಕಂಡುಬಂದಿಲ್ಲ ಎಂದು ಗೊತ್ತಾಗಿದೆ.

Also Read: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆಯೇ?

Result: False

Our Sources
Report By Jagaran, Dated: February 7, 2024

Report By Etv Bharat, Dated: April 18, 2021

Heritage places of Ahmedabad city

Conversation with Chirag H Patel, Deputy HOD of Media department, Ahmedabad Munciple Corporation


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.