ಉತ್ತರಾಖಂಡದ ಸುರಂಗದಿಂದ 41 ಮಂದಿ ಕಾರ್ಮಿಕರನ್ನು ಪಾರು ಮಾಡಿದ ವಿದ್ಯಮಾನ ಕುರಿತ ಕ್ಲೇಮ್‌ಗಳು ಈ ವಾರ ಹರಿದಾಡಿವೆ. ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು ಎಐ ಚಿತ್ರ, ಕಾರ್ಮಿಕರ ರಕ್ಷಣೆಯ ವೀಡಿಯೋ ಎಂದು ತಾಲೀಮಿನ ವೀಡಿಯೋಗಳು ಹಂಚಿಕೆಯಾಗಿದ್ದವು. ಇದರೊಂದಿಗೆ ಮುಸ್ಲಿಂ ಮಹಿಳೆಯೊಬ್ಬರು ಭಗವದ್ಗೀತೆ ಓದಿ ರಾಧೆ ಆದರು, ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದು ಎಂಬ ಕ್ಲೇಮ್‌ಗಳೂ ಇದ್ದವು. ಇವುಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆಗೊಳಪಡಿಸಿದ್ದು, ಇವುಗಳು ಸುಳ್ಳು ಎಂದು ಸಾಬೀತು ಪಡಿಸಿದೆ.

ಉತ್ತರಾಖಂಡದ ಸುರಂಗದಲ್ಲಿ 41 ಕಾರ್ಮಿಕರನ್ನು ರಕ್ಷಿಸಿದ ತಂಡವೆಂದು ಎಐ ಚಿತ್ರ ವೈರಲ್
ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ ತಂಡವನ್ನು ತೋರಿಸುವ ಚಿತ್ರ ಎಂದು ಗ್ರೂಪ್ ಫೋಟೋ ಒಂದು ಹರಿದಾಡಿದೆ. ಸತ್ಯಶೋಧನೆ ನಡೆಸಿದಾಗ, ಫೋಟೋದಲ್ಲಿ ಹಲವು ವ್ಯತ್ಯಾಸಗಳಿರುವುದು, ತಿರುಚಿದಂತೆ ಕಂಡುಬಂದಿರುವುದು ಮತ್ತು ಮೂಲ ಪೋಸ್ಟ್ ದಾರರು ಇದನ್ನು ಎಐ ಚಿತ್ರವೆಂದು ಹೇಳಿರುವುದನ್ನು ನ್ಯೂಸ್ ಚೆಕರ್ ಪತ್ತೆ ಹಚ್ಚಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ವೀಡಿಯೋ ನಿಜವೇ?
ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ದೃಶ್ಯ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ಪ್ರಕಾರ, ಇದು ಸುರಂಗದಿಂದ ಕಾರ್ಮಿಕರನ್ನು ಹೊರತೆಗೆಯುವ ಮೊದಲಿನ ತಾಲೀಮು ವೀಡಿಯೋ ಆಗಿದೆ. ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹೇಗೆ ರಕ್ಷಿಸಲಾಗುತ್ತದೆ ಎಂದು ವಿವರಿಸಿದ ವಿದ್ಯಮಾನವಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು ಹೌದೇ?
ಮುಸ್ಲಿಂ ಮಹಿಳೆಯೊಬ್ಬರು ಭಗವದ್ಗೀತೆ ಓದಿದ ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ಸತ್ಯಶೋಧನೆಯ ಪ್ರಕಾರ, ವೈರಲ್ ಕ್ಲೇಮಿನಲ್ಲಿ ಹೇಳಿದಂತೆ ಆಕೆ ಮುಸ್ಲಿಂ ಆಗಿದ್ದಾಕೆ ಹಿಂದೂ ಆಗಿದ್ದಲ್ಲ. ಹಿಂದೂ ಧರ್ಮೀಯಳಾಗಿದ್ದ ಮಾರ್ಯಮ್ ಎಂಬಾಕೆ ಮುಸ್ಲಿಂ ಆದ ವಿದ್ಯಮಾನವಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದೇ?
ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ಮತ್ತು ದೇಹಕ್ಕೆ ಇನ್ಸುಲಿನ್ ಒದಗಿಸುತ್ತದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಇನ್ಸುಲಿನ್‌ಗೆ ದಾಲ್ಚಿನ್ನಿ ಪರ್ಯಾಯವಲ್ಲ, ಇದು ದೇಹಕ್ಕೆ ಇನ್ಸಲಿನ್ ಒದಗಿಸುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.