ಕ್ರಿಕೆಟಿಗ ಧೋನಿ ಪ್ರಧಾನಿ ಮೋದಿ ಅವರೊಂದಿಗೆ ಕಮಲದ ಚಿತ್ರ ಇರುವ ಕೇಸರಿ ಶಾಲು ಧರಿಸಿ ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ ಧೋನಿ ಧೋನಿ ಬಿಜೆಪಿ ಸೇರಿದ್ದಾರೆ ಎಂದು ಬಳಕೆದಾರರು ಹೇಳಿಕೆಕೊಳ್ಳುತ್ತಿದ್ದಾರೆ.
ಹಲವಾರು ಫೇಸ್‌ಬುಕ್ ಬಳಕೆದಾರರೂ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಈ ಫೋಟೋದ ಹಿನ್ನೆಲೆಯಲ್ಲಿ ಬಿಜೆಪಿ ಚಿಹ್ನೆ ಭಾರತೀಯ ಜನತಾ ಪಕ್ಷ ಎಂಬಂತೆ ಬರೆದಿರುವುದನ್ನೂ ಕಾಣಬಹುದು.
ಆದರೂ ಈ ಫೊಟೋದ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು AI (ಕೃತಕ ಬುದ್ಧಿಮತ್ತೆ-ಎಐ)ನಿಂದ ಮಾಡಲಾದ ಫೊಟೋ ಎಂದು ಕಂಡುಹಿಡಿದಿದೆ.

ಅಂತಹ ಪೋಸ್ಟ್‌ಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಸುಧಾ ಮೂರ್ತಿ ಹೂಡಿಕೆ ವೇದಿಕೆಯನ್ನು ಪ್ರಚಾರ ಮಾಡುತ್ತಿರುವ ವೀಡಿಯೋ ನಕಲಿ
Fact Check/Verification
ಗೂಗಲ್‌ನಲ್ಲಿ “MS Dhoni” ಮತ್ತು “BJP” ಎಂಬ ಕೀವರ್ಡ್ ಹುಡುಕಾಟ ನಡೆಸಿದಾಗ ಕ್ರಿಕೆಟಿಗ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳುವ ಯಾವುದೇ ವರದಿಗಳು ಕಂಡು ಬಂದಿಲ್ಲ. ಇದಲ್ಲದೆ, ಪ್ರಧಾನಿ ಮೋದಿ ಇತ್ತೀಚೆಗೆ ಧೋನಿಯನ್ನು ಭೇಟಿಯಾಗಿದ್ದಾರೆ ಎಂದು ಹೇಳುವ ವರದಿಗಳೂ ಕಂಡಿಲ್ಲ.
ಅನಂತರ ನಾವು ಗೂಗಲ್ ಲೆನ್ಸ್‌ನಲ್ಲಿ ವೈರಲ್ ಆದ ಚಿತ್ರದ ಶೋಧ ನಡೆಸಿದ್ದು, ಮೋದಿ ಜೊತೆಗೆ ಧೋನಿ ಎಂಬ ರೀತಿಯ ಫೋಟೋ ಇರುವ ಯಾವುದೇ ವರದಿಗಳೂ ಕಂಡುಬಂದಿಲ್ಲ.
ವೈರಲ್ ಆಗಿರುವ ಫೋಟೋವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಪ್ರಧಾನ ಮಂತ್ರಿಯವರ ಕನ್ನಡಕವು ಸರಿಯಾಗಿಲ್ಲ. ಕನ್ನಡ ಮುಖದೊಂದಿಗೆ ಸೇರಿದಂತಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಇದಲ್ಲದೆ, ಕೇಸರಿ ಶಾಲಿನಲ್ಲಿ ಕಂಡುಬಂದ ರೀತಿಯ ಕಮಲದ ಚಿಹ್ನೆ ಪ್ರಧಾನಿ ಅವರ ಭುಜದ ಮೇಲೆ ಇರುವುದನ್ನು ನೋಡಿದ್ದೇವೆ. ಮಸುಕಾದ ಚಿತ್ರದ ಹಿನ್ನೆಲೆ, ಸಾಮಾನ್ಯ ಫೊಟೋದ ರೀತಿ ಇರದೇ ಇರುವುದು ಈ ಫೋಟೋ ಎಐ ಸೃಷ್ಟಿ ಎಂಬುದನ್ನು ಸೂಚಿಸುತ್ತದೆ.

ಅನಂತರ ನಾವು ವೈರಲ್ ಚಿತ್ರವನ್ನು ವಿವಿಧ ಎಐ ಪತ್ತೆ ವೇದಿಕೆಗಳಲ್ಲಿ ಪರಿಶೀಲಿಸಿದ್ದೇವೆ, Sightengine ವೆಬ್‌ಸೈಟ್ ಫೋಟೋ ಡೀಪ್‌ಫೇಕ್ ಆಗಿರುವ ಸಾಧ್ಯತೆ ಶೇ. 83 ರಷ್ಟು ಇದೆ ಎಂದು ಕಂಡುಹಿಡಿದಿದೆ.

ಮತ್ತೊಂದು ಎಐ ಪತ್ತೆ ಸಾಧನ Hive Moderation, ಎಐ ರಚಿತ ಅಥವಾ ಡೀಪ್‌ಫೇಕ್ ವಿಷಯದ ಸಾಧ್ಯತೆಯನ್ನು 96.9% ಎಂದು ಅಂದಾಜಿಸಿದೆ.

‘AI or Not‘ ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿ ಜೊತೆ ಧೋನಿ ಇರುವ ವೈರಲ್ ಚಿತ್ರವನ್ನು ನಾವು ಪರಿಶೀಲಿಸಿದ್ದೇವೆ , ಅದು ಕೂಡ ಫೋಟೋ ಎಐ ನಿಂದ ರಚಿಸಲ್ಪಟ್ಟಿದೆ ಎಂದು ತೀರ್ಮಾನಿಸಿದೆ.

Conclusion
ಆದ್ದರಿಂದ, ಧೋನಿ ಬಿಜೆಪಿಗೆ ಸೇರ್ಪಡೆಯಾದರು ಮತ್ತು ಪ್ರಧಾನಿ ಮೋದಿಯವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗುವ ವೈರಲ್ ಫೋಟೋ ಎಐ ನಿಂದ ರಚಿತವಾಗಿದೆ ಎಂದು ಕಂಡುಬಂದಿದೆ.
Also Read: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ಎನ್ನುವುದು ನಿಜವಲ್ಲ
Our Sources
Sightengine Website
Hive Moderation Website
AI or Not Website
Self Analysis
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)