Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಭಾರತ ಗಡಿಯಲ್ಲಿ ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ
Fact
ಬಿಸಿಲಿನಲ್ಲೂ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ ಎಂದು ಹಂಚಿಕೊಳ್ಳಲಾಗಿರುವ ಚಿತ್ರವು ಎಐ ಮೂಲಕ ರಚಿಸಿದ್ದಾಗಿದೆ
ಭಾರತ-ಪಾಕಿಸ್ಥಾನದ ಗಡಿಯಲ್ಲಿ ಬಿರು ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು ಊಟ ಮಾಡುತ್ತಿರುವ ದೃಶ್ಯ ಎಂಬಂತೆ ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಭಾರತದ…ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಬ್ಯಾಡ್ಮೇರ್‌ನಲ್ಲಿ 48° ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರಸ್ತೆಯಲ್ಲಿ ಆಹಾರ ಸೇವಿಸುತ್ತಿರುವ ಭಾರತೀಯ ಸೇನೆಯ ಮಹಿಳಾ ಸೈನಿಕರು….” ಎಂದಿದೆ.
Also Read: ಕಲ್ಲಿಕೋಟೆಯ ಪೇರಂಬ್ರದಲ್ಲಿ ವೃದ್ಧರೊಬ್ಬರನ್ನು ಮಗನೇ ಥಳಿಸುತ್ತಿರುವ ವೀಡಿಯೋ, ಸತ್ಯ ಏನು?
ಇದೇ ರೀತಿಯ ಕ್ಲೇಮುಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ಆರ್ಟಿಫಿಶಿಯಲ್ ಇಂಟೆಲಿನ್ಸ್ (ಎಐ) ನಿಂದ ಮಾಡಿದ ಚಿತ್ರ ಎಂಬುದನ್ನು ಕಂಡುಕೊಂಡಿದೆ.
ಸತ್ಯಶೋಧನೆಯ ಭಾಗವಾಗಿ ಮೊದಲು ನಾವು ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಹಲವು ಲೋಪದೋಷಗಳನ್ನು ಚಿತ್ರದಲ್ಲಿ ಗುರುತಿಸಿದ್ದೇವೆ.
ಊಟ ಮಾಡುತ್ತಿರುವ ಮಹಿಳಾ ಸೈನಿಕರ ಚಿತ್ರದಲ್ಲಿ, ಸಮವಸ್ತ್ರದ ಮೇಲೆ ಧರಿಸಿದ ಭಾರತದ ಧ್ವಜ ಸರಿಯಾಗಿಲ್ಲದಿರುವುದನ್ನು ನಾವು ಗುರುತಿಸಿದ್ದೇವೆ. ಮಹಿಳಾ ಸೈನಿರಿಗೆ ಹೆಚ್ಚುವರಿ ಕೈಗಳು ಇರುವಂತೆ ಚಿತ್ರದಲ್ಲಿದೆ. ಅವರ ಪಕ್ಕದಲ್ಲಿರುವ ಮಹಿಳೆ ಕೈ ಅಲ್ಲವೆಂಬಂತೆ ಚಿತ್ರದಲ್ಲಿದೆ.
ಊಟಕ್ಕೆ ಕುಳಿತಿರುವ ಮಹಿಳಾ ಸೈನಿಕರ ಹಿಂಭಾಗದಲ್ಲಿ ಹಲವು ಸೈನಿಕರು ಓಡಾಡುತ್ತಿದ್ದಾರೆ. ಆದರೆ ಅವರ ಮುಖಗಳು ಸ್ಪಷ್ಟವಾಗಿಲ್ಲ. ಜೊತೆಗೆ ಅವರು ಧರಿಸಿರುವ ಸಮವಸ್ತ್ರಗಳು ಮಹಿಳಾ ಸೈನಿಕರ ಸಮವಸ್ತ್ರಕ್ಕಿಂತ ಭಿನ್ನವಾಗಿರುವುದನ್ನು ನಾವು ಗುರುತಿಸಿದ್ದೇವೆ.
ಫೋಟೋಗಳ ಬಗ್ಗೆ ಇವುಗಳನ್ನು ಶೋಧಿಸಿದ ಬಳಿಕ ಈ ಫೋಟೋ ಎಐ ನಿಂದ ಮಾಡಲ್ಪಟ್ಟಿದ್ದೇ ಎಂಬುದನ್ನು ನೋಡಲು ನಾವು ಎಐ ಚಿತ್ರಗಳನ್ನು ಶೋಧಿಸುವ ವೆಬ್‌ಸೈಟ್ ಈಸ್‌ಇಟ್ಎಐನಲ್ಲಿ ಶೋಧ ನಡೆಸಿದ್ದೇವೆ. ಇದರಲ್ಲಿ ಫಲಿತಾಂಶ, ಚಿತ್ರ ಎಐನಿಂದ ಮಾಡಿದೆ ಎಂಬುದು ಕಂಡು ಬಂದಿದೆ.
ಆ ಬಳಿಕ ನಾವು ಈ ಚಿತ್ರದ ಮೂಲದ ಬಗ್ಗೆ ಶೋಧ ನಡೆಸಿದ್ದೇವೆ. ಈ ವೇಳೆ ವಂದೇ ಮಾತರಮ್ ಹೆಸರಿನ ಫೇಸ್‌ಬುಕ್ ಪೇಜ್ ಅನ್ನು ಶೋಧಿಸಿದ್ದೇವೆ. ಈ ಪೇಜ್‌ನಲ್ಲಿ ವೈರಲ್ ಚಿತ್ರದ ರೀತಿಯೇ ಇರುವ ಹಲವು ಚಿತ್ರಗಳನ್ನೂ ಕಂಡಿದ್ದೇವೆ.
ಆ ಬಳಿಕ ವಂದೇ ಮಾತರಮ್ ಪೇಜ್ ನ ವಿಪುಲ್ ಮೌವಾಲಿಯ ಎಂಬವರನ್ನು ಸಂಪರ್ಕಿಸಿದ್ದೇವೆ. ಈ ವೇಳೆ ಅವರು ವೈರಲ್ ಆಗಿರುವ ಚಿತ್ರ ಎಐ ಮೂಲಕ ಮಾಡಿದ್ದಾಗಿದೆ ಎಂದು ಹೇಳಿದ್ದಾರೆ ಮತ್ತು ಇಂತಹ ಅನೇಕ ಚಿತ್ರಗಳನ್ನು ಫೇಸ್‌ಬುಕ್ ಪೇಜ್ ನಲ್ಲಿದೆ ಎಂದಿದ್ದಾರೆ. ವೈರಲ್ ಆಗಿರುವ ಚಿತ್ರವನ್ನು ವಂದೇ ಮಾತರಮ್ ಪೇಜ್ ನಲ್ಲೂ ನಾವು ಕಂಡುಕೊಂಡಿದ್ದೇವೆ.
Also Read: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್ ಗಳಲ್ಲಿ ಹಸುಗಳನ್ನು ಅರಬ್ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?
ಈ ಸತ್ಯಶೋಧನೆಯ ಪ್ರಕಾರ, ಭಾರತ-ಪಾಕಿಸ್ಥಾನದ ಗಡಿಯಲ್ಲಿ ಬಿರು ಬಿಸಿಲಿನಲ್ಲೂ ಕರ್ತವ್ಯದಲ್ಲಿರುವ ಮಹಿಳಾ ಸೈನಿಕರು ಎನ್ನುವ ಹೇಳಿಕೆ ತಪ್ಪಾಗಿದೆ.
Our Sources
Is it AI – AI Image Detector
Facebook Page of Vande Mataram
Conversation with Vipul Movaliya VD
(With inputs from Vasudha Beri)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
April 3, 2025
Ishwarachandra B G
August 1, 2024
Ishwarachandra B G
May 4, 2024