Fact Check: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಮಂಗಳೂರು, ಡ್ರಗ್ಸ್‌, ಯುವತಿ

Claim
ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ಡ್ರಗ್ಸ್ ಸೇವಿಸಿದ ಯುವತಿಯ ಅವಾಂತರ

Fact
ಮಂಗಳೂರು ಪೊಲೀಸರ ಸ್ಪಷ್ಟನೆ ಪ್ರಕಾರ ಯುವತಿ ಮಾದಕ ವಸ್ತು ಸೇವಿಸಿದ ಬಗ್ಗೆ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ ಮತ್ತು ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ

ಡ್ರಗ್ಸ್‌ ಸೇವಿಸಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಡ್ರಗ್ಸ್ ಸೇವಿಸಿದ ಯುವತಿಯ ಅವಾಂತರ….” ಎಂದಿದೆ.

Also Read: ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆಯೇ, ಸತ್ಯ ಏನು?

ಫೇಸ್‌ ಬುಕ್‌ ನಲ್ಲಿ ಕಂಡುಬಂದ ಕ್ಲೇಮ್

ಇದೇ ರೀತಿಯ ಪೋಸ್ಟ್ ಗಳನ್ನು ನಾವು ಇಲ್ಲಿ ಮತ್ತು ಇಲ್ಲಿ ಕಂಡುಕೊಂಡಿದ್ದೇವೆ.

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳುಎಂದು ಕಂಡುಕೊಂಡಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್‌ ಕೀವರ್ಡ್ ಸರ್ಚ್‌ ನಡೆಸಿದ್ದೇವೆ. ಈ ವೇಳೆ ಮಂಗಳೂರಿನ ಈ ಘಟನೆಯ ಕುರಿತು ವರದಿಗಳು ಲಭ್ಯವಾಗಿವೆ.

ಸೆಪ್ಟೆಂಬರ್‌ 10, 2023ರ ದೈಜಿವರ್ಲ್ಡ್ ವರದಿಯಲ್ಲಿ “ಯುವತಿಯೋರ್ವಳು ಮಹಿಳಾ ಪೊಲೀಸರಿಗೆ ಒದೆಯುತ್ತಿರುವ ವೀಡಿಯೋ ವೈರಲ್‌ ಆಗಿದೆ” ಎಂದಿದೆ. ಈ ವರದಿಯಲ್ಲಿ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಸಿಟಿ ಪೊಲೀಸ್‌ ಕಮಿಷನರ್ ಅವರು, ಪಂಪ್‌ವೆಲ್‌ ಎಂಬಲ್ಲಿ ಸೆಪ್ಟೆಂಬರ್ 1 ರಂದು ಮೆಡಿಕಲ್‌ ಶಾಪ್‌ ಒಂದರಲ್ಲಿ ಯುವತಿಯೋರ್ವಳು ಆಕ್ರಮಣಕಾರಿಯಾಗಿ ವರ್ತಿಸಿದ ಬಗ್ಗೆ ಸಂದೇಶದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಆಕೆಯನ್ನು ಮಾದಕ ದ್ರವ್ಯ ಸೇವನೆ ಪತ್ತೆ ಬಗ್ಗೆ ಕರೆದೊಯ್ದಿದ್ದರು. ಈ ವೇಳೆ ಮತ್ತೆ ಆಕೆ ಆಕ್ರಮಣಕಾರಿಯಾಗಿ ವರ್ತಿಸಿದ್ದರಿಂದ ಆಕೆಯನ್ನು ಪೊಲೀಸ್‌ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪರೀಕ್ಷೆ ಮಾಡಿದಾಗ ಮಾದಕ ದ್ರವ್ಯ ಸೇವನೆ ನೆಗೆಟಿವ್‌ ವರದಿ ಬಂದಿದ್ದು ಬಳಿಕ ಆಕೆಯ ವೈದ್ಯಕೀಯ ಚಿಕಿತ್ಸೆಗೆ ಹೆತ್ತವರ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

Fact Check: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?
ದೈಜಿವರ್ಲ್ಡ್ ವರದಿ

ಸೆಪ್ಟೆಂಬರ್ 9ರಂದು ಮಂಗಳೂರಿಯನ್‌.ಕಾಮ್‌ ಪ್ರಕಟಿಸಿದ ವರದಿಯಲ್ಲೂ “ಪೊಲೀಸರೊಂದಿಗೆ ಬಾಲಕಿಯ ಆಕ್ರಮಣಕಾರಿ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆದ ವಿಡಿಯೋ ಕುರಿತು ಸ್ಪಷ್ಟನೆ” ಎಂಬುದಲ್ಲಿ ಪೊಲೀಸರ ಸ್ಪಷ್ಟನೆ ಬಗ್ಗೆ ಹೇಳಲಾಗಿದೆ.

ಸೆಪ್ಟೆಂಬರ್ 10, 2023ರ ಇಟಿವಿ ಭಾರತ್‌ ವರದಿಯಲ್ಲಿ “ಆಕ್ರಮಣಕಾರಿಯಾಗಿ ವರ್ತಿಸಿರುವ ಯುವತಿ ಮಾದಕ ವ್ಯಸನಿಯಲ್ಲಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.” ಎಂದಿದೆ.

Also Read: ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?

Fact Check: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?
ಈಟಿವಿ ಭಾರತ್ ವರದಿ

ಈ ಪ್ರಕರಣದ ಸಂಬಂಧ ಮಂಗಳೂರು ಸಿಟಿ ಪೊಲೀಸ್‌ ಫೇಸ್‌ಬುಕ್‌ ಪೇಜ್‌ ಅನ್ನು ನಾವು ಗಮನಿಸಿದ್ದು ಸ್ಪಷ್ಟನೆ ನೀಡಲಾಗಿದೆ.

ಇದರಲ್ಲಿ ಕಂದ್ರಿ ಮಂಗಳೂರು ಪೂರ್ವ ಠಾಣೆಯಲ್ಲಿ ಮಾದಕ ದ್ರವ್ಯ ಪೀಡಿತೆ ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವೀಡಿಯೋ ಕುರಿತಂತೆ ಆಕೆ ಮಾದಕ ದ್ರವ್ಯ ಸೇವಿಸಿದ್ದಾರೆ ಎಂಬ ಬಗ್ಗೆ ಪೂರಕ ಫಲಿತಾಂಶ ಕಂಡುಬಂದಿಲ್ಲ. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಲಾಗಿದೆ..

Conclusion

ಈ ಸತ್ಯಶೋಧನೆಯ ಪ್ರಕಾರ, ಯುವತಿ ಡ್ರಗ್ಸ್‌ ಸೇವಿಸಿ, ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾಳೆ ಎನ್ನುವುದು ತಪ್ಪಾಗಿದೆ.

Also Read: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?

Result: False

Our Sources

Report By Daijiworld.com, Dated: September 10, 2023

Report By Mangalorean.com, Dated: September 9, 2023

Report By Etv Bharat, Dated September 10, 2023

Facebook Post By Mangaluru city police, Dated: September 9, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.