Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?

ಎಲ್‌ಪಿಜಿ ಸಿಲಿಂಡರ್‌ ತೆರಿಗೆ, ಶೇ.55, ತೆರಿಗೆ ರಾಜ್ಯ ಸರ್ಕಾರ

Claim
ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ

Fact
ದೇಶದಲ್ಲಿ ಈಗ ಜಿಎಸ್ ಟಿ ತೆರಿಗೆ ಪದ್ಧತಿ ಚಾಲ್ತಿಯಲ್ಲಿದ್ದು ಸಿಜಿಎಸ್ಟಿ ಶೇ.2.5 ಮತ್ತು ಎಸ್‌ಜಿಎಸ್‌ಟಿ ಶೇ.2.5 ಅಂದರೆ ಒಟ್ಟು ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.55ರಷ್ಟು ತೆರಿಗೆ ಎನ್ನುವುದು ಸುಳ್ಳಾಗಿದೆ

ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರದ ತೆರಿಗೆ ಕೇವಲ ಶೇ.5, ರಾಜ್ಯ ಸರ್ಕಾರದಿಂದ ಶೇ.55ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈ ಕುರಿತು ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ ‘ಮನೆ ಬಳಕೆ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ 24 ರೂಪಾಯಿ ತೆರಿಗೆ ವಿಧಿಸಿದರೆ, ರಾಜ್ಯ ಸರ್ಕಾರ 291ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಹೇಳಲಾಗಿದೆ. ಜೊತೆಗೆ ಯಾರು ಗ್ಯಾಸ್‌ ಬೆಲೆ ಜಾಸ್ತಿ ಮಾಡಿದ್ದು ರಾಜ್ಯ ಸರ್ಕಾರವೇ? ಕೇಂದ್ರ ಸರ್ಕಾರವೇ?….’ ಎಂದು ಪ್ರಶ್ನಿಸಲಾಗಿದೆ. ಜೊತೆಗೆ ಈ ಬಗ್ಗೆ ಲೆಕ್ಕವೊಂದನ್ನುಕೊಡಲಾಗಿದೆ.

Also Read: ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?

ಈ ಕುರಿತು ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್‌ಗೆ ಮನವಿ ಮಾಡಿದ್ದು ಅದನ್ನು ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.

Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ಹಾಕುವುದು ನಿಜವೇ?

ಸತ್ಯಶೋಧನೆ ವೇಳೆ ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಮೊದಲು ಮನೆ ಬಳಕೆಯ ಅಡುಗೆ ಅನಿಲಕ್ಕೆ ಜಿಎಸ್‌ಟಿ (ಗೂಡ್ಸ್ ಆಂಡ್ ಸರ್ವಿಸ್‌ ಟಾಕ್ಸ್) ಅನ್ವಯವಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ.

ಇದರನ್ವಯ ನಾವು ಗೂಗಲ್ನಲ್ಲಿ ಸರ್ಚ್ ನಡೆಸಿದ್ದು, ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲಿಯಂ ಪ್ಲಾನಿಂಗ್‌ ಆಂಡ್ ಅನಾಲಿಸಿಸ್‌ ಸೆಲ್‌ನ ತೆರಿಗೆ ಪಟ್ಟಿಯನ್ನು ಕಂಡುಕೊಂಡಿದ್ದೇವೆ.

Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ಹಾಕುವುದು ನಿಜವೇ?
ತೆರಿಗೆ ದರ ವಿವರ

ಇದರ ಪ್ರಕಾರ ಮನೆ ಬಳಕೆ ಅಡುಗೆ ಅನಿಲಕ್ಕೆ ಶೇ.5ರಷ್ಟು ತೆರಿಗೆ ವಿಧಿಸುತ್ತಿರುವುದು ಗೊತ್ತಾಗಿದೆ.

ಜೊತೆಗೆ ನಾವು ಇತ್ತೀಚಿನ ಗೃಹಬಳಕೆ ಅನಿಲ ಸಿಲಿಂಡರ್ ಬಿಲ್‌ ಒಂದನ್ನು ಪರಿಶೀಲಿಸಿದ್ದು ಇದರಲ್ಲಿ ಸೆಂಟ್ರಲ್‌ ಜಿಎಸ್‌ಟಿ ಶೇ.2.5 ಮತ್ತು ಸ್ಟೇಟ್ ಜಿಎಸ್‌ಟಿ ಶೇ2.5 ಎಂದಿರುವುದನ್ನು (ಅಂದರೆ ಒಟ್ಟು ಶೇ.5ರಷ್ಟು ತೆರಿಗೆ) ನಾವು ಗಮನಿಸಿದ್ದೇವೆ.

Also Read: ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು, ಎನ್ನುವುದು ನಿಜವೇ?

Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ಹಾಕುವುದು ನಿಜವೇ?
ಮನೆಬಳಕೆ ಎಲ್‌ ಪಿಜಿ ಬಿಲ್‌

ಇನ್ನು ಡೀಲರ್ ಕಮಿಷನ್‌ ಬಗ್ಗೆ ನಾವು ಶೋಧ ನಡೆಸಿದ್ದು, 14.2 ಕೆ.ಜಿ. ಯ ಗ್ಯಾಸ್‌ ಸಿಲಿಂಡರ್ಗೆ ₹61.84 ವಿಧಿಸುವ ಬಗ್ಗೆ ಮೇ 18, 2022ರ ಕೇಂದ್ರ ಸರ್ಕಾರದ ಸೂಚನೆಯನ್ನು ನೋಡಿದ್ದೇವೆ.

Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ಹಾಕುವುದು ನಿಜವೇ?
ಸರ್ಕಾರದ ನೋಟಿಸ್

ಇನ್ನು ದೇಶದ ವಿವಿಧೆಡೆ, ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ನಲ್ಲಿ ವ್ಯತ್ಯಾಸವಿದ್ದು, ಈ ಬಗ್ಗೆ ಈ ಕುರಿತು ಐಪಿಎಜಿ ವರದಿ ಇಲ್ಲಿದೆ.

Also Read: ಕಾವೇರಿ ವಿವಾದ ಹಿನ್ನೆಲೆ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆಯ ವೀಡಿಯೋ ಈಗಿನದ್ದಲ್ಲ!

Fact Check: ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ಹಾಕುವುದು ನಿಜವೇ?
ವಿವಿಧ ನಗರಗಳ ದರಪಟ್ಟಿ

Conclusion

ಈ ಸತ್ಯಶೋಧನೆಯ ಪ್ರಕಾರ, ಗೃಹಬಳಕೆಯ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55ರಷ್ಟು ತೆರಿಗೆ ವಿಧಿಸುತ್ತಿದೆ ಎನ್ನುವುದು ಸುಳ್ಳಾಗಿದೆ. ಸದ್ಯ ಜಿಎಸ್‌ಟಿ ಜಾರಿಯಲ್ಲಿದ್ದು, ಇದರ ದರ ಕೇಂದ್ರ ಮತ್ತು ರಾಜ್ಯದ್ದು ಸೇರಿ ಶೇ.5ರಷ್ಟು ಆಗಿದೆ.

Result: False

Our Sources

Petroleum Planning and analysis, VAT/Sales Tax/GST Rates (ppac.gov.in)

Dealers-Distributors commission, Dealers Commission on Petrol and Diesel (ppac.gov.in)

Government of India Order, https://mopng.gov.in/files/marketing/lpg/Distributors-commission-revision.pdf


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.