ಶುಕ್ರವಾರ, ಮೇ 3, 2024
ಶುಕ್ರವಾರ, ಮೇ 3, 2024

Home 2023

Yearly Archives: 2023

Weekly wrap: ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದು, ಚೆನ್ನೈ ಪ್ರವಾಹದಲ್ಲಿ ಕುಸಿದ ಮನೆ ವಾರದ ಕ್ಲೇಮ್‌ ನೋಟ

ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್, ಚೆನ್ನೈ ಪ್ರವಾಹದಲ್ಲಿ ಕುಸಿದ ಮನೆ, ರಾಜ್ಯ ಶಾಲೆಗಳಲ್ಲಿ ಕುರಾನ್ ಬೋಧನೆ ಕಡ್ಡಾಯ, ಚಾಕೊಲೆಟ್ ಐಸ್‌ ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಗಳು ಈವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್‌ ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪು ಎಂದು ರುಜುವಾತು ಪಡಿಸಿದೆ. 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ...

Fact Check: ವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆಯೇ?

Claimವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆFactವೈರಲ್‌ ವೀಡಿಯೋ, ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರದ್ದಲ್ಲ. ಅವರು ಮೊದದಲ ಬಾರಿಗೆ ಸಿಎಂ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದ ವೇಳೆ ಪುರೋಹಿತರು ಮಂತ್ರ ಹೇಳಿದ ಕ್ಷಣವಾಗಿದೆ ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮ ಎಂದು ಪುರೋಹಿತರು ಮಂತ್ರ ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಕ್ಲೇಮಿನಲ್ಲಿ, ಆರೆಸ್ಸೆಸ್‌...

Fact Check: ಚಾಕೊಲೆಟ್ ಐಸ್‌ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆಯೇ?

Claimಚಾಕೊಲೆಟ್ ಐಸ್‌ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆFactಚಾಕೊಲೆಟ್ ಐಸ್‌ಕ್ರೀಂ ತಿನ್ನುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಇದರಿಂದ ಮಾನಸಿಕ, ದೈಹಿಕ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಚಾಕೊಲೆಟ್ ಐಸ್‌ಕ್ರೀಂ ತಿನ್ನುವುದರಿಂದ ಭಾವನಾತ್ಮಕ ನೋವು ಮತ್ತು ದೈಹಿಕ ನೋವು ಕಡಿಮೆಯಾಗುತ್ತದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್ ಸ್ಟಾ ಗ್ರಾಂನಲ್ಲಿ ಕಂಡುಬಂದ ಕ್ಲೇಮಿನಲ್ಲಿ ಹೀಗೆ ಹೇಳಲಾಗಿದೆ. ಈ ಬಗ್ಗೆ...

Fact Check: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?

Claimಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆFactಕರ್ನಾಟಕ ಸರ್ಕಾರ ರಾಜ್ಯದ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿಲ್ಲ. ವೈರಲ್‌ ಆಗಿರುವ ವೀಡಿಯೋ ಚೆನ್ನರಾಯಪಟ್ಟಣದ ಶಾಲೆಯೊಂದರದ್ದಾಗಿದೆ 'ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಎಲ್ಲ ಶಾಲೆಗಳಲ್ಲಿ ಕುರಾನ್‌ ಕಲಿಸುವುದನ್ನು ಕಡ್ಡಾಯ ಮಾಡಿದೆ....

Fact Check: ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್‌

Claimಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆFactಮನೆ ಕುಸಿದು ಬಿದ್ದ ವೀಡಿಯೋ ಚೆನ್ನೈನದ್ದಲ್ಲ, ಅದು ಕೇರಳದ್ದು, ಅಕ್ಟೋಬರ್ 2021ರ ವೇಳೆ ಈ ಘಟನೆ ಸಂಭವಿಸಿತ್ತು ಮಿಚಾಂಗ್‌ ಚಂಡಮಾರುತದಿಂದಾಗಿ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ ಚೆನ್ನೈನಲ್ಲಿ ಮನೆಯೊಂದು ಕುಸಿದು ನದಿಗೆ ಉರುಳಿದೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಈ ಚಂಡಮಾರುತದಿಂದಾಗಿ 8 ಮಂದಿ ಮೃತಪಡುವುದರೊಂದಿಗೆ 18 ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. Also...

Fact Check: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!

Claim8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ Factಮರಣದಂಡನೆ ರದ್ದುಗೊಳಿಸಿದ ಬಗ್ಗೆ ಕತಾರ್ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಗಲ್ಫ್ ರಾಷ್ಟ್ರ ಕತಾರ್ 8 ಮಂದಿ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿಗಳಿಗ ವಿಧಿಸಿದ ಮರಣದಂಡನೆಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿದೆ. "ಭಾರತೀಯ ನೌಕಾಪಡೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ 8 ಮಂದಿಯ ಮರಣದಂಡನೆ ರದ್ದುಗೊಳಿಸಿದ ಕತಾರ್, ಮೋದಿ ಮತ್ತು...

Weekly Wrap: ಉತ್ತರಾಖಂಡ ಸುರಂಗದಿಂದ 41 ಕಾರ್ಮಿಕರ ರಕ್ಷಿಸಿದ ತಂಡ, ಮುಸ್ಲಿಂ ಮಹಿಳೆ ರಾಧೆಯಾದಳು, ವಾರದ ಕ್ಲೇಮ್‌ ನೋಟ

ಉತ್ತರಾಖಂಡದ ಸುರಂಗದಿಂದ 41 ಮಂದಿ ಕಾರ್ಮಿಕರನ್ನು ಪಾರು ಮಾಡಿದ ವಿದ್ಯಮಾನ ಕುರಿತ ಕ್ಲೇಮ್‌ಗಳು ಈ ವಾರ ಹರಿದಾಡಿವೆ. ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು ಎಐ ಚಿತ್ರ, ಕಾರ್ಮಿಕರ ರಕ್ಷಣೆಯ ವೀಡಿಯೋ ಎಂದು ತಾಲೀಮಿನ ವೀಡಿಯೋಗಳು ಹಂಚಿಕೆಯಾಗಿದ್ದವು. ಇದರೊಂದಿಗೆ ಮುಸ್ಲಿಂ ಮಹಿಳೆಯೊಬ್ಬರು ಭಗವದ್ಗೀತೆ ಓದಿ ರಾಧೆ ಆದರು, ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದು ಎಂಬ ಕ್ಲೇಮ್‌ಗಳೂ ಇದ್ದವು. ಇವುಗಳನ್ನು ನ್ಯೂಸ್‌ಚೆಕರ್‌ ಸತ್ಯಶೋಧನೆಗೊಳಪಡಿಸಿದ್ದು, ಇವುಗಳು...

Fact Check: ದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹುದೇ?

Claimದಾಲ್ಚಿನ್ನಿ ತಿನ್ನುವುದರಿಂದ ಮಧುಮೇಹ ನಿಯಂತ್ರಿಸಬಹು, ಅದು ದೇಹಕ್ಕೆ ಇನ್ಸುಲಿನ್‌ ಒದಗಿಸುತ್ತದೆFactಇನ್ಸುಲಿನ್‌ಗೆ ದಾಲ್ಚಿನ್ನಿ ಪರ್ಯಾಯವಲ್ಲ, ಇದು ದೇಹಕ್ಕೆ ಇನ್ಸಲಿನ್‌ ಒದಗಿಸುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ದಾಲ್ಚಿನ್ನಿ ಮಧುಮೇಹ ನಿಯಂತ್ರಣಕ್ಕೆ ಮತ್ತು ದೇಹಕ್ಕೆ ಇನ್ಸುಲಿನ್‌ ಒದಗಿಸುತ್ತದೆ ಎಂದು ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇನ್‌ಸ್ಟಾಗ್ರಾಂ ನಲ್ಲಿ ಕಂಡು ಬಂದ ಹೇಳಿಕೆಯಲ್ಲಿ "ದಾಲ್ಚಿನ್ನಿಯು ಮಧುಮೇಹ ಖಾಯಿಲೆಯ ನಿಯಂತ್ರಣಕ್ಕೆ ಅತ್ಯಂತ ಉಪಯೋಗಕಾರಿಯಾಗಿದ್ದು ಇದು ದೇಹದಲ್ಲಿನ ಇನ್ಸುಲಿನ್‌ ಪ್ರಮಾಣವನ್ನು ದ್ವಿಗುಣಗೊಳಿಸಲು...

Fact Check: ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ವೀಡಿಯೋ ನಿಜವೇ?

Claim ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ದೃಶ್ಯ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ದೇವಭೂಮಿ ಉತ್ತರಾಖಂಡ ದ ಉತ್ತರ ಕಾಶಿಯಲ್ಲಿ ಹಿಂದೂ ಭಕ್ತರು ಸುಗಮವಾಗಿ ಚಾರ್ ಧಾಮ್ ಯಾತ್ರೆಯನ್ನು ಯಶಸ್ವಿಗೊಳಿಸಲು ಸರ್ಕಾರ ಕೆಲವು ಕಡೆ ಸುರಂಗ ಮಾರ್ಗವನ್ನು ಮಾಡಲು ಮುಂದಾದಾಗ, ದುರಾದೃಷ್ಟ ವಶಾತ್ ಒಂದು ಸುರಂಗದಲ್ಲಿ ಮಣ್ಣು ಕುಸಿತದಿಂದಾಗಿ 41 ಜನ‌ ಕಾರ್ಮಿಕರು ಸಿಕ್ಕಿಹಾಕಿಕೊಂಡು...

Fact Check: ಉತ್ತರಾಖಂಡದ ಸುರಂಗದಲ್ಲಿ 41 ಕಾರ್ಮಿಕರನ್ನು ರಕ್ಷಿಸಿದ ತಂಡವೆಂದು ಎಐ ಚಿತ್ರ ವೈರಲ್

Claim ಉತ್ತರಾಖಂಡದ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ ತಂಡವನ್ನು ತೋರಿಸುವ ಚಿತ್ರ. ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ಅನೇಕ ಪ್ರಕಾಶನಗಳು ತಮ್ಮ ದೆಹಲಿ ಆವೃತ್ತಿಯಲ್ಲಿ ಈ ಚಿತ್ರವನ್ನು ಪ್ರಕಟಿಸಿದ್ದು, ಈ ಚಿತ್ರವನ್ನು ಪಿಟಿಐಗೆ ಕ್ರೆಡಿಟ್ ಮಾಡಿವೆ ಮತ್ತು ದೈನಿಕ್ ಭಾಸ್ಕರ್ ತಮ್ಮ ಫೇಸ್ಬುಕ್ ಪುಟದಲ್ಲಿ ಈ ಚಿತ್ರವನ್ನು ಪ್ರಕಟಿಸಿದೆ. Also Read: ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು...