Authors
Claim
ಆಗಸ್ಟ್ 10ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್, ಹೈಕೋರ್ಟ್ ತೀರ್ಪು
Fact
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕುರಿತು ಹೈಕೋರ್ಟ್ ಈವರೆಗೂ ಯಾವುದೇ ತೀರ್ಪು ನೀಡಿಲ್ಲ. ಈ ವಿಚಾರದಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ ಆದರೆ ಇನ್ನೂ ಅದು ವಿಚಾರಣೆಗೆ ಬಂದಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹತ್ವದ ಗ್ಯಾರೆಂಟಿ “ಶಕ್ತಿ” ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಇದೀಗ ಉಚಿತ ಬಸ್ ಪ್ರಯಾಣ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಹರಿದಾಡಿದೆ.
ಈ ಕುರಿತಂತೆ ಫೇಸ್ಬುಕ್ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಆಗಸ್ಟ್ 10ರಿಂದ ಎಲ್ಲ ಮಹಿಳೆಯರಿಗೆ ಬಸ್ ಪ್ರಯಾಣ ಬಂದ್, ಹೈಕೋರ್ಟ್ ತೀರ್ಪು ಏನು ಫ್ರೀ ಬಸ್ ಬಂದ್ ಆಗುತ್ತಾ..?” ಎಂದು ಹೇಳಲಾಗಿದೆ.
Also Read: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?
ಈ ಹೇಳಿಕೆ ನಿಜವೇ ಎಂದು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ. ಈ ಮಾಧ್ಯಮ ವರದಿಗಳು ಇತ್ತೀಚೆಗೆ ಕಾನೂನು ವಿದ್ಯಾರ್ಥಿಗಳು ಶಕ್ತಿ ಯೋಜನೆಯಿಂದ ಅನಾನುಕೂಲಗಳಾಗುತ್ತಿವೆ ಎಂದು ಹೈಕೋರ್ಟ್ ಗೆ ಸಲ್ಲಿಸಿದ್ದ ಪಿಐಎಲ್ಗೆ ಸಂಬಂಧಿಸಿದ್ದಾಗಿದೆ.
ಆಗಸ್ಟ್ 1, 2023ರ ಪ್ರಜಾವಾಣಿ ವರದಿಯಲ್ಲಿ “ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ “ಶಕ್ತಿ ಯೋಜನೆ”ಯಿಂದ ಪ್ರಯಾಣಿಕರು ಅನೇಕ ತೊಂದರೆಗಳನ್ನು ಎದುರಿಸುವಂತಾಗಿದೆ. ಅಷ್ಟೇ ಅಲ್ಲ, ಯೋಜನೆಯು ಆರ್ಥಿಕ ಸಂಕಷ್ಟಗಳಿಗೆ ದೂಡುವ ಆತಂಕವಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.” ಎಂದಿದೆ.
ಜುಲೈ 31, 2023ರ ನ್ಯೂಸ್ 18 ವರದಿಯಲ್ಲಿ “ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆ ಸಂಬಂಧ ಕಾನೂನು ವಿದ್ಯಾರ್ಥಿಗಳು ಸೋಮವಾರ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿವೆ. ಫ್ರೀ ಬಸ್ ಯೋಜನೆ ಜಾರಿ ಆದಾಗಿನಿಂದ ವಿದ್ಯಾರ್ಥಿಗಳು, ವಯೋವೃದ್ಧರೂ ಸಮಸ್ಯೆಗೀಡಾಗಿದ್ದಾರೆ ಎಂದು ದೂರಿರುವ ಕಾನೂನು ವಿದ್ಯಾರ್ಥಿಗಳು ಸಮಸ್ಯೆ ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.” ಎಂದಿದೆ.
Also Read: ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?
ಜುಲೈ 31, 2023ರಂದು ಬಾರ್ ಆಂಡ್ ಬೆಂಚ್ ಪ್ರಕಟಿಸಿದ ವರದಿಯಲ್ಲಿ, “ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನಿ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಸರವಣನ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯುವ್ಯ ರಸ್ತೆ ಸಾರಿಗೆ ನಿಗಮ (ಎನ್ಡಬ್ಲ್ಯುಕೆಆರ್ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು (ಕೆಕೆಆರ್ಟಿಸಿ) ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.” ಎಂದಿದೆ.
ಇದರೊಂದಿಗೆ ನಾವು ಇತರ ಮಾಧ್ಯಮ ವರದಿಗಳನ್ನೂ ಗಮನಿಸಿದ್ದೇವೆ. ಅದು ಇಲ್ಲಿ ಮತ್ತು ಇಲ್ಲಿದೆ.
ಈ ವರದಿಗಳಲ್ಲಿ ಕಾನೂನು ವಿದ್ಯಾರ್ಥಿಗಳು ಪಿಐಎಲ್ ಸಲ್ಲಿಸಿದ ವಿವರಗಳಷ್ಟೇ ಇವೆ. ಜೊತೆಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ ಎಂದಿದೆ. ಇದನ್ನು ಗಮನಿಸಿ ನಾವು ಕರ್ನಾಟಕ ಹೈಕೋರ್ಟ್ ವೆಬ್ ಸೈಟ್ ಗಮನಿಸಿದ್ದೇವೆ.
ಕರ್ನಾಟಕ ಹೈಕೋರ್ಟ್ ವೆಬ್ ಸೈಟ್ನಲ್ಲಿರುವ ಸ್ಟೇಟಸ್ ಪ್ರಕಾರ, ಈ ಪ್ರಕರಣದ ವಿಚಾರಣೆ ಬಾಕಿಯಿದೆ. ಇದನ್ನು ಇಲ್ಲಿ ನೋಡಬಹುದು.
Conclusion
ಈ ಸತ್ಯಶೋಧನೆಯ ಪ್ರಕಾರ, ಶಕ್ತಿ ಯೋಜನೆ ವಿರುದ್ಧದ ವಿಚಾರಣೆ ಇನ್ನೂ ಬಾಕಿ ಇದ್ದು, ಹೈಕೋರ್ಟ್ ಯಾವುದೇ ತೀರ್ಪನ್ನಾಗಲಿ ನಿರ್ದೇಶನವನ್ನಾಗಲಿ ನೀಡಿಲ್ಲ. ಆದ್ದರಿಂದ ಆಗಸ್ಟ್ 10ರಿಂದ ಉಚಿತ ಬಸ್ ಪ್ರಯಾಣ ಬಂದ್ ಎನ್ನುವುದು ಸುಳ್ಳಾಗಿದೆ.
Also Read: ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ಎಂದು ತಪ್ಪಾದ ಫೋಟೋ ಹಂಚಿಕೆ
Result: False
Our Sources
Report By Prajavani, Dated: August 1, 2023
Report By News 18, Dated: July 31, 2023
Report By Bar & Bench, Dated: July 31, 2023
Website of High court of Karnataka
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.