Fact Check: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ದರೋಡೆ, ಅಪಾಯಕಾರಿ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇಯಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ, ರಾತ್ರಿ ಸಂಚಾರ ಅಪಾಯಕಾರಿ

Fact
ಎಕ್ಸ್‌ ಪ್ರೆಸ್‌ ವೇಯಲ್ಲಿ ರಾತ್ರಿ ಸಂಚಾರ ಅಪಾಯಕಾರಿ ಎನ್ನುವುದು ಸುಳ್ಳು ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ. ಈ ಹೈವೇ ಈಗ ಅಪಾಯಕಾರಿ, ರಾತ್ರಿ ಇಲ್ಲಿ ಬರುವುದು ಡೇಂಜರ್‌ ಎಂಬಂತೆ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬೆಂಗಳೂರಿಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಬರುವವರು ಯಾವುದೇ ಸಂದರ್ಭದಲ್ಲೂ ರಾತ್ರಿ ಬರಲು ಪ್ರಯತ್ನಿಸಬೇಡಿ, ಪ್ರಸ್ತುತ ಎಕ್ಸ್‌ಪ್ರೆಸ್ ಹೈವೇ ಕಾರುಗಳಲ್ಲಿ ಪುಂಡರು ಮತ್ತು ದರೋಡೆಕೋರರು ತಿರುಗಾಡುತ್ತಿದ್ದಾರೆ. ವಾಹನವನ್ನು ಎಲ್ಲೋ ನಿಲ್ಲಿಸಿದರೆ ಅಥವಾ ಎಲ್ಲೋ ವಾಹನ ನಿಲ್ಲಿಸಿದರೆ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬಂದು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಚಾಕು, ಕತ್ತಿಯಿಂದ ಕತ್ತರಿಸಿ ಗಾಯಗೊಳಿಸಿ ಎಲ್ಲವನ್ನೂ ದೋಚುತ್ತಾರೆ…..” ಎಂದಿದೆ.

Also Read: ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?

Fact Check: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?

ಈ ಕುರಿತು ಸತ್ಯಶೋಧನೆ ನಡೆಸುವಂತೆ ನಮಗೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ ಲೈನ್‌ (+91-9999499044) ಮೂಲಕವೂ ವಿನಂತಿಸಿಕೊಂಡಿದ್ದು, ಅದನ್ನು ನಾವು ಸ್ವೀಕರಿಸಿದ್ದೇವೆ.

Fact Check: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?

Fact Check/Verification

ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದ್ದು, ಹೇಳಿಕೆಯಲ್ಲಿ ಕಂಡುಬಂದ ಫೋಟೋವನ್ನು ಪರಿಶೀಲಿಸಲಾಗಿದೆ. ರಸ್ತೆ ಮಧ್ಯೆ ಮರದ ಹಲಗೆಗೆ ಮೊಳೆಗಳನ್ನು ಹೊಡೆದು ಹಾಕಿದ ರೀತಿಯಲ್ಲಿ ಫೋಟೋ ಇದ್ದು, ಇದನ್ನು ರಿವರ್ಸ್‌ ಇಮೇಜ್‌ ಸರ್ಚ್ ನಡೆಸಲಾಗಿದೆ.

ಈ ವೇಳೆ, ಇದೇ ಫೋಟೋ ನೈಜೀರಿಯಾದ ಫೋರಂಗಳಲ್ಲಿ ಬಳಕೆಯಾಗಿರುವುದು ಮತ್ತು ಟ್ವಿಟರ್‌ನಲ್ಲಿ ವಿವಿಧ ಪೋಸ್ಟ್ ಗಳಲ್ಲಿ ಬಳಕೆಯಾಗಿರುವುದು ಕಂಡುಬಂದಿದೆ.

ನೈಜೀರಿಯಾದ ಫೋರಂನಲ್ಲಿ ಕಂಡುಬಂದ ಫೊಟೋ

ಇದರೊಂದಿಗೆ ದಕ್ಷಿಣ ಆಫ್ರಿಕಾದ ಒಪೆರಾ ನ್ಯೂಸ್‌, ಆಗಸ್ಟ್‌ 5, 2023ರಂದು ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ “ದಕ್ಷಿಣ ಪ್ರಿಟೋರಿಯಾದ ಸೌಟ್‌ಪಾನ್‌ ರಸ್ತೆಯಲ್ಲಿ ಡಕಾಯಿತರು ರಸ್ತೆಗಳಲ್ಲಿ ಮೊಳೆಗಳನ್ನು ಹಾಕಿರುವ ಪ್ರಕರಣಗಳಿದ್ದು, ಎಚ್ಚರಿಕೆಯಂತೆ ಹೋಗುವಂತೆ ಚಾಲಕರು ಒತ್ತಾಯಿಸಿದ್ದಾರೆ” ಎಂದಿದೆ. ಈ ವರದಿಯಲ್ಲಿ ಲಗತ್ತಿಸಲಾಗಿರುವ ಫೋಟೋ ವೈರಲ್‌ ಪೋಸ್ಟ್‌ ನಲ್ಲಿರು ಫೋಟೋಕ್ಕೆ ಸಾಮ್ಯತೆಯನ್ನು ಹೊಂದಿದೆ.

ಒಪೆರಾ ನ್ಯೂಸ್‌ ವರದಿ

ಆದಾಗ್ಯೂ ಖಚಿತವಾಗಿ ಇದು ಎಲ್ಲಿಯ ಫೋಟೋ ಎಂಬುದನ್ನು ನಮಗೆ ಸ್ವತಂತ್ರ್ಯವಾಗಿ ಪತ್ತೆಮಾಡಲು ಸಾಧ್ಯವಾಗಿಲ್ಲ.

Also Read: ಮಣಿಪುರ ಬೆತ್ತಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ರಾಲಿ ಎಂದು ತಪ್ಪಾದ ಫೋಟೋ ಹಂಚಿಕೆ

ಇದಕ್ಕೆ ಪೂರಕವಾಗಿ ನಾವು ಗೂಗಲ್‌ ನಲ್ಲಿ ಸರ್ಚ್ ಮಾಡಿದ್ದು, ಮಾಧ್ಯಮ ವರದಿ ಲಭ್ಯವಾಗಿದೆ. ಜೂನ್‌ 30, 2019ರ ಮನೋರಮಾ ವರದಿಯಲ್ಲಿ “ಬೆಂಗಳೂರು-ಮೈಸೂರು ಹೈವೇನಲ್ಲಿ ಡಕಾಯಿತರು-ಎಚ್ಚರಿಕೆ” ಎಂದಿದೆ. ಈ ವರದಲ್ಲಿಯಲ್ಲಿ ರಾಮನಗರದ ಚೆನ್ನಪಟ್ಟಣದಲ್ಲಿ ಕೇರಳದ ಲಾರಿ ಚಾಲಕರೊಬ್ಬರು ಡಕಾಯಿತಿಗೆ ಈಡಾದ ಪ್ರಸಂಗವನ್ನು ಉಲ್ಲೇಖಿಸಲಾಗಿದೆ.

ಶ್ರೀರಂಗಪಟ್ಟಣದ ಸನಿಹ ರಾತ್ರಿ ವೇಳೆ ಕೇರಳಕ್ಕೆ ಸಂಚರಿಸುವ ಬಸ್‌ನಲ್ಲಿ ಡಕಾಯಿತರು ಲೂಟಿ ಮಾಡಿರುವುದನ್ನು ಮಾತೃಭೂಮಿ ನ್ಯೂಸ್‌ ಯೂಟ್ಯೂಬ್‌ ಚಾನೆಲ್ ಮಾರ್ಚ್ 24, 2018ರಂದು ವರದಿ ಮಾಡಿತ್ತು. ಇದೇ ರೀತಿ ಬೆಂಗಳೂರು ಹೊರವಲಯದ ರಸ್ತೆಗಳಲ್ಲಿ ಡಕಾಯಿತಿ ನಡೆಸುತ್ತಿದ್ದ ಕೇರಳದ ಮೋಸ್ಟ್‌ ವಾಂಟೆಡ್‌ ಡಕಾಯಿತಿ ಗ್ಯಾಂಗ್‌ ಕೊಡಲಿ ಶ್ರೀಧರನ್‌ ಗುಂಪಿನ 10 ಮಂದಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದನ್ನು ಎಪ್ರಿಲ್‌ 26, 2022ರಂದು ಡೆಕ್ಕನ್ ಹೆರಾಲ್ಡ್‌ ಪ್ರಕಟಿಸಿತ್ತು.

ಬೆಂಗಳೂರಿನಿಂದ ಕಣ್ಣೂರಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಕೇರಳ ಮೂಲದ ಡಾನಿಶ್‌ ನಜೀಬ್‌ ಎಂಬವರ ವಾಹನದ ಮೇಲೆ ಡಕಾಯಿತರು ಹಾನಿ ಮಾಡಿರುವುದನ್ನು ದಿ ಲಾಜಿಕಲ್‌ ಇಂಡಿಯನ್‌ ಜುಲೈ 29, 2015ರಂದು ಫೇಸ್‌ಬುಕ್‌ ನಲ್ಲಿ ಪ್ರಕಟಿಸಿತ್ತು.

ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿರುವ ಈ ಘಟನೆಗಳು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇಯನ್ನು ಉಲ್ಲೇಖಿಸಿಲ್ಲ ಮತ್ತು ಹಳೆಯ ಘಟನೆಗಳಾಗಿವೆ ಎಂಬುದನ್ನು ನಾವು ಗಮನಿಸಿದ್ದೇವೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಗೆ ನಾವು ರಾಮನಗರದ ಕನ್ನಡಪ್ರಭ ವರದಿಗಾರ ಅಫ್ರೋಜ್‌ ಖಾನ್‌ ಅವರನ್ನು ಮಾತನಾಡಿಸಿದಾಗ, “ಎಕ್ಸ್ ಪ್ರೆಸ್‌ವೇ ಕಾರ್ಯಾಚರಣೆ ಆರಂಭದ ಸಂದರ್ಭದಲ್ಲಿ ಪ್ರಯಾಣಿಕರನ್ನು ತಡೆದು ದೋಚಿದ ಪ್ರಕರಣಗಳು ದಾಖಲಾಗಿದ್ದವು, ಆದರೆ ಉದ್ಘಾಟನೆ ನಂತರ ಇತ್ತೀಚಿನ ಸಂದರ್ಭಗಳಲ್ಲಿ ಎಕ್ಸ್ ಪ್ರೆಸ್‌ ವೇನಲ್ಲಿ ದರೋಡೆಯಂತಹ ಘಟನೆಗಳು ನಡೆದ ಬಗ್ಗೆ ಯಾವುದೇ ವರದಿಯಾಗಿಲ್ಲ. ಜೊತೆಗೆ ವೈರಲ್‌ ಮೆಸೇಜ್‌ನಲ್ಲಿ ಕಂಡುಬರುತ್ತಿರುವ ರಸ್ತೆ ಎಕ್ಸ್‌ ಪ್ರೆಸ್‌ ವೇ ನದ್ದಲ್ಲ” ಎಂದು ಹೇಳಿದ್ದಾರೆ.

ಇನ್ನು ಎಕ್ಸ್‌ ಪ್ರೆಸ್‌ ವೇ ಪ್ರಯಾಣಿಕರಿಗೆ ಅಪಾಯಕಾರಿಯೇ ಎಂಬ ಬಗ್ಗೆ ನಾವು ಕರ್ನಾಟಕ ಪೊಲೀಸ್‌ನ ಕೇಂದ್ರೀಯ ವಿಭಾಗದ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಐಪಿಎಸ್‌ ಅವರನ್ನು ಸಂಪರ್ಕಿಸಿದ್ದೇವೆ. ಅವರು ಪ್ರತಿಕ್ರಿಯಿಸಿ “ಇದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ರಾಮನಗರದ ಎಸ್‌ಪಿ ಅವರು ಗಮನ ಹರಿಸುವಂತೆ ಹೇಳುವುದಾಗಿ” ತಿಳಿಸಿದ್ದಾರೆ.

ಇದರೊಂದಿಗೆ ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಯವರು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸ್‌ ವೆಬ್‌ನಲ್ಲಿ ಇದು ಸುಳ್ಳು, ಪ್ರಯಾಣಿಕರು ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ರಾಮನಗರ ಜಿಲ್ಲಾ ಪೊಲೀಸ್‌ ವರದಿ

Also Read: ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ ಎನ್ನುವುದು ನಿಜವೇ?

Conclusion

ಈ ಸತ್ಯಶೋಧನೆಯ ಪ್ರಕಾರ, ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇಯಲ್ಲಿ ದರೋಡೆಕೋರರು ತಿರುಗಾಡುತ್ತಿದ್ದು, ರಾತ್ರಿ ಹೊತ್ತಿನಲ್ಲಿ ಸಂಚಾರ ಪ್ರಯಾಣಿಕರಿಗೆ ಅಪಾಯಕಾರಿ ಎನ್ನುವ ಹೇಳಿಕೆ ಸುಳ್ಳಾಗಿದೆ.

Result: False

Our Sources

Google lens

Report By Opera News, Dated: August 5, 2023

Tweet By Superintendent of Police Ramanagara District

Report By District Police office, Ramnagara

Conversation with Afroz Khan, Kannadaprabha reporter, Ramanagar

Conversation with Central IGP Karnataka police, Dr.B.R.Ravikanthegowda


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.