Authors
ಚಂದ್ರನ ಅಂಗಳದಲ್ಲಿ ಚಂದ್ರಯಾನ 3 ಲ್ಯಾಂಡಿಂಗ್ ಆಗುತ್ತಲೇ, ಆ ಕುರಿತ ಸುಳ್ಳು ಸುದ್ದಿಗಳು ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆಗಳು, ವೀಡಿಯೋ, ಫೋಟೋಗಳು ಹರಿದಾಡಿದ್ದವು. ಇದು ಹೊರತಾಗಿ ಮ್ಯಾನ್ಮಾರ್ನಿಂದ ಮಣಿಪುರಕ್ಕೆ ರೊಹಿಂಗ್ಯಾಗಳು ಕಳ್ಳದಾರಿಯಲ್ಲಿ ನುಸುಳುತ್ತಿದ್ದಾರೆ ಎನ್ನುವ ವೀಡಿಯೋ, ಆಂಧ್ರ ಪ್ರದೇಶದ 1400 ವರ್ಷ ಹಳೆ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಕೆತ್ತನೆ ಇದೆ, ನಿತ್ಯ ಒಂದು ಮುಷ್ಟಿ ಮಂಡಕ್ಕಿ ತಿಂದರೆ ಧೂಳು ಅಲರ್ಜಿ ನಿವಾರಣೆಯಾಗುತ್ತದೆ ಎನ್ನುವ ಕ್ಲೇಮ್‌ಗಳು ಈ ವಾರ ಹರಿದಾಡಿದ್ದವು. ನ್ಯೂಸ್ ಚೆಕರ್ ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಸಾಬೀತು ಪಡಿಸಿದೆ.
ಚಂದ್ರನ ಮೇಲೆ ಇಳಿಯುವ ಚಂದ್ರಯಾನ-3ರ ವೀಡಿಯೋವನ್ನು ನಾಸಾ ಸೆರೆಹಿಡಿದಿದೆಯೇ?
ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ಚಂದ್ರಯಾನ-3 ಇಳಿಯುವ ವೀಡಿಯೋವನ್ನು ನಾಸಾ ಚಿತ್ರೀಕರಿಸಿದೆ ಎಂದು ಕ್ಲೇಮ್ ಒಂದು ವೈರಲ್ ಆಗಿತ್ತು. ಸತ್ಯಶೋಧನೆ ವೇಳೆ, ಇದು ಮೊದಲು ಮಾನವರನ್ನು ಚಂದ್ರನಿಗೆ ಕರೆದೊಯ್ದ ಅಪೊಲೊ 11 ಚಂದ್ರನಲ್ಲಿ ಇಳಿಯವ ಕುರಿತ ಅನಿಮೇಟೆಡ್ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಚಂದ್ರಯಾನ 3ರದ್ದು ಎಂದು ಹಂಚಿಕೊಳ್ಳಲಾದ ಫೋಟೋ-ವೀಡಿಯೋ ಸತ್ಯವೇ?
ಚಂದ್ರಯಾನ 3 ಲ್ಯಾಂಡ್ ಆಗುತ್ತಲೇ ಭೂಮಿಗೆ ವೀಡಿಯೋ-ಫೋಟೋಗಳನ್ನು ಕಳುಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹರಿಯಬಿಡಲಾಗಿದೆ. ನ್ಯೂಸ್‌ಚೆಕರ್ ಸತ್ಯಶೋಧನೆಯ ಪ್ರಕಾರ, ಚಂದ್ರಯಾನ 3ರ ವೀಡಿಯೋ ಎಂದು ಹೇಳಲಾದ ಎಲ್ಲ ವೀಡಿಯೋಗಳು ನಾಸಾದ ಮಂಗಳ ಸಂಶೋಧನೆಯ ರೋವರ್ಗಳ ಕುರಿತ ವೀಡಿಯೋಗಳಾಗಿದ್ದು, ಎಲ್ಲವೂ ತಪ್ಪು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಚಂದ್ರನ ಮೇಲೆ ಅಶೋಕ ಲಾಂಛನದ ವೈರಲ್ ಚಿತ್ರ ನಿಜವಲ್ಲ, ಅದು ಕಲಾಕೃತಿ!
ಚಂದ್ರನ ಮೇಲೆ ರೋವರ್ ಟೈರ್ ಗಳಿಂದ ಚಂದ್ರನ ಮೇಲೆ ಅಶೋಕ ಲಾಂಛನದ ಚಿತ್ರವನ್ನು ಶಾಶ್ವತವಾಗಿ ಮುದ್ರಿಸಲಾಗಿದೆ. ಚಂದ್ರನ ಮೇಲೆ ಗಾಳಿ ಇಲ್ಲದ ಕಾರಣ ಈ ಗುರುತುಗಳು ಶಾಶ್ವತವಾಗಿ ಇರುತ್ತವೆ ಎಂದು ಹೇಳಲಾಗಿತ್ತು. ಸತ್ಯಶೋಧನೆಯಲ್ಲಿ ವೈರಲ್ ಆಗುತ್ತಿರುವ ಚಿತ್ರವು ಚಂದ್ರನ ಮೇಲೆ ಉಳಿಯುವ ನಿಜವಾದ ಮುದ್ರೆಯಲ್ಲ, ಆದರೆ ಅದರ ಕಲಾತ್ಮಕ ಚಿತ್ರಣವಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?
ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಿದ್ದು, ಇದರಿಂದಲೇ ರೊಹಿಂಗ್ಯಾಗಳು ಭಾರತವನ್ನು ಪ್ರವೇಶಿಸುತ್ತಿದ್ದಾರೆ ಎಂಬರ್ಥದಲ್ಲಿ ವೀಡಿಯೋವೊಂದು ಹರಿದಾಡಿದೆ. ಸತ್ಯಶೋಧನೆಯ ವೇಳೆ ಇದು ಇರಾನಿನ ಅಲೆಮಾರಿಗಳ ಕುರಿತ ವೀಡಿಯೋ. ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ಬರುತ್ತಿರುವ ರೊಹಿಂಗ್ಯಾಗಳದ್ದು ಎನ್ನುವುದು ತಪ್ಪು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಆಂಧ್ರದ 1400 ವರ್ಷ ಹಳೆಯ ದೇಗುಲದಲ್ಲಿ ಕಂಪ್ಯೂಟರ್ ನೋಡುವ ಮನುಷ್ಯನ ಚಿತ್ರವಿದೆಯೇ?
ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ರಂಗನಾಥ ಸ್ವಾಮಿ ದೇಗುಲದಲ್ಲಿ ಕಂಪ್ಯೂಟರ್ ಆಪರೇಟ್ ಮಾಡುವ ವ್ಯಕ್ತಿಯೊಬ್ಬನ ಶಿಲ್ಪವಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನ್ಯೂಸ್‌ಚೆಕರ್ ಸತ್ಶಶೋಧನೆಯಲ್ಲಿ ಇದು ನೆಲ್ಲೂರಿನ ದೇಗುಲದಲ್ಲಿರುವ ಚಿತ್ರವಲ್ಲ, ಮೆಕ್ಸಿಕೋದ ಕಲಾವಿದರೊಬ್ಬರು ಬಿಡಿಸಿದ ಚಿತ್ರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪ್ರತಿ ದಿನ ಒಂದು ಮುಷ್ಟಿ ಮಂಡಕ್ಕಿ ತಿನ್ನೋದ್ರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತಾ?
ಪ್ರತಿದಿನ ಒಂದು ಮುಷ್ಟಿ ಮಂಡಕ್ಕಿಯನ್ನು ತಿನ್ನುವುದರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತದೆ ಎಂದು ವೀಡಿಯೋ ಜೊತೆಗೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಮತ್ತು ಥಿಪ್ ಸತ್ಯಶೋಧನೆ ನಡೆಸಿದ ವೇಳೆ ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣ ತಿಳಿದಯಬಂದಿದೆ. ಜೊತೆಗೆ ವೈದ್ಯರನ್ನೂ ಸಂಪರ್ಕಿಸಲಾಗಿದ್ದು ಇದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.