Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಮಗುವನ್ನು ಗೂಳಿಯ ದಾಳಿಯಿಂದ ಹಸು ರಕ್ಷಿಸುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ವೀಡಿಯೋದಲ್ಲಿ ಮಗುವಿನ ಕಾಲುಗಳು ಅಸ್ವಾಭಾವಿಕವಾಗಿ ಮಸುಕಾಗಿರುವುದು, ಹಸುವಿನ ಪಾದಗಳ ಸುತ್ತ ಧೂಳು ಸ್ಥಿರವಾಗಿರುವುದು, ಕೆಲವೊಮ್ಮೆ ಪೂರ್ಣವಾಗಿ ಇಲ್ಲವಾಗುವುದು ಇತ್ಯಾದಿ ದೃಶ್ಯಗಳನ್ನು ನ್ಯೂಸ್ ಚೆಕರ್ ಗಮನಿಸಿದೆ. ಇಂತಹ ಲಕ್ಷಗಳು ಎಐ ನಿಂದ ಮಾಡಿದ ದೃಶ್ಯಗಳ ವಿಶಿಷ್ಟ ಲಕ್ಷಣಗಳಾಗಿವೆ.
ಕೀ ಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅಕ್ಟೋಬರ್ 28, 2025 ರಂದು @aloisionaroca ಅವರು YouTube ನಲ್ಲಿ ಅಪ್ ಲೋಡ್ ಮಾಡಿದ ಪೋಸ್ಟ್ ಲಭ್ಯವಾಗಿದೆ. ಪೋರ್ಚುಗೀಸ್ ಭಾಷೆಯಿಂದ ಅನುವಾದಿಸಲಾದ ವಿವರಣೆಯಲ್ಲಿ, “ಒಂದು ಮಗುವನ್ನು ರಕ್ಷಿಸಿದ ಹಸು #sora [OpenAI ನ AI ವೀಡಿಯೊ-ಉತ್ಪಾದಿಸುವ ಮಾದರಿ] #ಶಾರ್ಟ್ಸ್” ಎಂದು ಬರೆಯಲಾಗಿದೆ, ಜೊತೆಗೆ ಇದು ಮಾರ್ಪಡಿಸಲಾದ ವಿಷಯ ಎಂದು ಹಕ್ಕು ನಿರಾಕರಣೆ ಇದೆ.
ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನ್ಯೂಸ್ ಚೆಕರ್ ಹೈವ್ ಮಾಡರೇಶನ್ನ AI ಪತ್ತೆ ಸಾಧನವನ್ನು ಬಳಸಿಕೊಂಡು ಕ್ಲಿಪ್ ಅನ್ನು ಪರೀಕ್ಷಿಸಿದೆ. ಇದು ವೀಡಿಯೋ AI- ರಚಿತ ಅಥವಾ ಡೀಪ್ಫೇಕ್ ಆಗಿರುವ ಸಾಧ್ಯತೆ 97.6% ಎಂದು ತೀರ್ಮಾನಿಸಿತು.

ಇದಲ್ಲದೆ, ನ್ಯೂಸ್ಚೆಕರ್ ಡೀಪ್ಫೇಕ್ಸ್ ಅನಾಲಿಸಿಸ್ ಯೂನಿಟ್ (DAU) ಅನ್ನು ಸಂಪರ್ಕಿಸಿತು, ಅದು ಎಐ-ಪತ್ತೆ ಸಾಧನಗಳನ್ನು ಬಳಸಿಕೊಂಡು ವಿವಿಧ ಕೀಫ್ರೇಮ್ ಗಳ ವಿಶ್ಲೇಷಣೆಗಳನ್ನು ನಡೆಸಿದೆ.

ಈ ಸ್ವತಂತ್ರ ಮೌಲ್ಯಮಾಪನಗಳು ವೈರಲ್ ವೀಡಿಯೋ ಕೃತಕವಾದ್ದು ಎಂದು ದೃಢಪಡಿಸಿದೆ.
Our Sources
Youtube video, @aloisionaroca, October 28, 2025
Hive Moderation
DAU analysis
(ಈ ವರದಿಯನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 24, 2025
Vasudha Beri
November 10, 2025
Vijayalakshmi Balasubramaniyan
November 12, 2025