Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಫೆರಾರಿ ಕಾರಿನ ಮೇಲೆ ಹಾರಿದ ಗೂಳಿ
ವೈರಲ್ ವೀಡಿಯೋ ಎಐ ಮೂಲಕ ರಚಿಸಿದ್ದಾಗಿದೆ.
ಫೆರಾರಿ ಕಾರಿನ ಮೇಲೆ ಹಾರಿದ ಗೂಳಿ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇಂತಹ ವೀಡಿಯೋಗಳನ್ನು ನಾವು ಇಲ್ಲಿ ಇಲ್ಲಿ ನೋಡಿದ್ದು, ಇವುಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ.


ಸತ್ಯಶೋಧನೆ ವೇಳೆ ಇದು ನಿಜವಾದ್ದಲ್ಲ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಮಾಡಿದ್ದಾಗಿದೆ ಎಂದು ಕಂಡುಬಂದಿದೆ.
Also Read: ಪ್ರತಿಭಟನಾಕಾರರ ಮೇಲೆ ಪೊಲೀಸರ ಕ್ರಮ, ಅಣಕು ಪ್ರದರ್ಶನದ ವೀಡಿಯೋ ವೈರಲ್!
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷ ಪರಿಶೀಲಿಸಿದಾಗ ಕೆಲವೊಂದು ಅಸಹಜತೆಗಳಿರುವುದನ್ನು ನೋಡಿದ್ದೇವೆ. ಅಂಗಡಿಗಳ ಬೋರ್ಡ್ ಗಳು ಸ್ಪಷ್ಟವಾಗಿಲ್ಲದೇ ಇರುವುದು, ಗೂಳಿ ಕಾರಿನ ಮೇಲೆ ಹಾರಿದಾಗ ಒಂದು ಭಾಗ ಮಾತ್ರ ಹಾನಿಗೊಳಗಾಗುವುದು, ಜನರು ವಿಚಿತ್ರವಾಗಿ ಕೂಗಿದ ರೀತಿ ಇವೆಲ್ಲವೂ ಸಂಶಯಕ್ಕೆಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ನ್ಯೂಸ್ಚೆಕರ್ ನ ಭಾಗವಾಗಿರುವ ಡೀಪ್ ಫೇಕ್ ಅನಾಲಿಸಿಸ್ ಯುನಿಟ್ (ಡಿಎಯು)ಗೆ ವೀಡಿಯೋವನ್ನು ಕಳಿಸಿದ್ದು, ಪರಿಶೀಲನೆ ಮಾಡಲಾಗಿದೆ.
ಎಐ ಆರ್ ನಾಟ್ ನಲ್ಲಿ ವೀಡಿಯೋ ಕೀಫ್ರೇಂಗಳನ್ನು ಪರಿಶೀಲಿಸಿದಾಗ, ಇದು ಎಐನಿಂದ ಮಾಡಿದ್ದಾಗಿದೆ ಎಂದು 98% ಸಾಧ್ಯತೆಯನ್ನು ಅದು ಹೇಳಿದೆ.


ಈಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗಲೂ ಅದು ವೀಡಿಯೋ ಎಐ ನಿಂದ ಮಾಡಿದ್ದು, ಇನ್ನೊಂದು ಕೀಫ್ರೇಂ ಮಾನವ ರಚಿತವಾದಂತಿದೆ ಎನ್ನುವುದನ್ನು ಖಚಿತಪಡಿಸಿದೆ.


ಆರಂಭಿಕ ಸೆಕೆಂಡುಗಳಲ್ಲಿ, ವೀಡಿಯೋವನ್ನು ನಿಧಾನಗೊಳಿಸಿ ನೋಡಿದ್ದು, ಬೋರ್ಡ್/ಬ್ಯಾನರ್ಗಳು ವಿರೂಪಗೊಳ್ಳುವುದನ್ನು ನೋಡಬಹುದು. ಎಐನಿಂದ ತಯಾರಿಸಿ ಇತರ ವೀಡಿಯೋಗಳಲ್ಲಿಯೂ ಹೀಗೆ ಆಗುವುದನ್ನು ಗಮನಿಸಿದ್ದೇವೆ.

ಅಲ್ಲದೆ, ವೀಡಿಯೋದಲ್ಲಿ ಗೋಚರಿಸುವ ಇತರ ಬೋರ್ಡ್ ಗಳನ್ನು ನೋಡಿದಾಗ, ಕೆಲವು ಯಾವುದೇ ಅರ್ಥವನ್ನು ಹೊಂದಿದಂತಿಲ್ಲ. ಆದ್ದರಿಂದ ಈ ವೀಡಿಯೋ ನಿಜವಾದ್ದಲ್ಲ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.
ಕೊನೆಯಲ್ಲಿ, ಕನಿಷ್ಠ ಎರಡು ಗೂಳಿಗಳು ಈ ವೀಡಿಯೋದಿಂದ ಕಣ್ಮರೆಯಾಗುತ್ತವೆ. ಮತ್ತು ಘಟನೆ ನಡೆದಾಗ ಜನರೂ ಆತಂಕವನ್ನು ವ್ಯಕ್ತಪಡಿಸಿದೆ ಏನೂ ಆಗಿಲ್ಲ ಎಂಬಂತೆ ಸುತ್ತಲೂ ನಿಂತಿರುವುದನ್ನು ಗಮನಿಸಬಹುದು.
ಈ ಎಲ್ಲ ಅಂಶಗಳು ಈ ವೀಡಿಯೋ ನಿಜವಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಈ ಸತ್ಯಶೋಧನೆಯ ಪ್ರಕಾರ, ಫೆರಾರಿ ಕಾರಿನ ಮೇಲೆ ಹಾರಿದ ಗೂಳಿ ಎನ್ನುವ ವೀಡಿಯೋ ನಿಜವಾದ್ದಲ್ಲ, ಅದು ಎಐ ಮೂಲಕ ರಚಿತವಾದದ್ದು ಎಂದು ಕಂಡುಬಂದಿದೆ.
Our Sources
AI or Not
Was it AI
Analysis by the Deep fake analysis unit (DAU)
Ishwarachandra B G
November 24, 2025
Vasudha Beri
November 10, 2025
Vijayalakshmi Balasubramaniyan
November 12, 2025