Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೇಪಾಳ ಎಂದು ಭಾವಿಸಿ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರ ಕ್ರಮ
ವೈರಲ್ ವೀಡಿಯೋ ಜಾರ್ಖಂಡ್ ನ ಬೊಕಾರೊವಿನಲ್ಲಿ ನಡೆದ ಅಣಕು ಪ್ರದರ್ಶನದ್ದಾಗಿದೆ. ಇದು ನಿಜವಾದ್ದಲ್ಲ
ಆಡಳಿತದ ವಿರುದ್ಧ ಘೋಷಣೆ ಕೂಗುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ಚದುರಿಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಇದನ್ನು ಉತ್ತರ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಹಲವು ಪೋಸ್ಟ್ ಗಳು ಕ್ರಮಕ್ಕಾಗಿ ಪೊಲೀಸರನ್ನು ಶ್ಲಾಘಿಸಿದ್ದು, ಪ್ರತಿಭಟನಕಾರರು ಭಾರತವನ್ನು ನೇಪಾಳ ಎಂದು ತಿಳಿದುಕೊಂಡಿದ್ದಾರೆ ಎಂದು ನೇಪಾಳದ ಇತ್ತೀಚಿನ ಜೆನ್ ಝಡ್ ಪ್ರತಿಭಟನೆಯನ್ನು ಉದಾಹರಿಸಿದ್ದಾರೆ.

ಇಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.


ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ, ಅಣಕು ಪ್ರದರ್ಶನದ ವೀಡಿಯೋ ಎಂದು ಕಂಡುಕೊಂಡಿದೆ.
Also Read: ಹಿಂದೂಗಳ ವಿರುದ್ಧ ಕೀಳಾಗಿ ಮಾತನಾಡಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ಮೇಲೆ ದಿನಗಳ ಹಿಂದೆ ಥಳಿತ?
ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟದ ವೇಳೆ ಸೆಪ್ಟೆಂಬರ್ 27, 2025 ರಂದು ಬೊಕಾರೋ ಕಿ ಆವಾಜ್ ನ್ಯೂಸ್ ಅಪ್ಲೋಡ್ ಮಾಡಿದ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ವೈರಲ್ ವೀಡಿಯೋ ರೀತಿಯ ದೃಶ್ಯಗಳನ್ನು ಇಲ್ಲಿಯೂ ಕಾಣಬಹುದು. ದುರ್ಗಾ ಪೂಜೆಗೆ ಮುಂಚಿತವಾಗಿ ಜಾರ್ಖಂಡ್ ನ ಬೊಕಾರೋ ಪೊಲೀಸರು ಅಣಕು ಪ್ರದರ್ಶನ ನಡೆಸಿದ್ದಾಗಿ ವರದಿಯಲ್ಲಿದೆ.
ಸೆಪ್ಟೆಂಬರ್ 27, 2025 ರಂದು ಬೊಕಾರೊ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲೂ ಇದೇ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಮಾಡಲಾಗಿದ್ದು, “2025 ರಲ್ಲಿ ಮುಂಬರುವ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ, ಬೊಕಾರೊ ಪೊಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ಅಣಕು ಅಭ್ಯಾಸ ನಡೆಸಲಾಯಿತು. ತುರ್ತು ಪರಿಸ್ಥಿತಿ ಮತ್ತು ಗಲಭೆ-ವಿರೋಧಿ ಸಂದರ್ಭಗಳನ್ನು ನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಯಿತು.” ಎಂದಿದೆ.

ವೈರಲ್ ಆಗಿರುವ ವೀಡಿಯೋ ಮತ್ತು ಪೊಲೀಸ್ ದೃಶ್ಯಗಳ ಕೀಫ್ರೇಮ್ಗಳನ್ನು ನೋಡಿದಾಗ, ಎರಡೂ ಒಂದೇ ಪ್ರದರ್ಶನದ ದೃಶ್ಯಗಳಾಗಿವೆ ಎಂದು ದೃಢಪಟ್ಟಿದೆ.


ಹಲವಾರು ಮಾಧ್ಯಮಗಳೂ ಇದನ್ನು ವರದಿ ಮಾಡಿದ್ದು, ಇದು ನಗರದಲ್ಲಿ ಉತ್ಸವದ ಸಿದ್ಧತೆಯ ಭಾಗವಾಗಿತ್ತು ಮತ್ತು ನಿಜವಾದ ಪ್ರತಿಭಟನೆ ಅಥವಾ ಪೊಲೀಸ್ ಕ್ರಮವಲ್ಲ ಎಂದು ದೃಢಪಡಿಸಿವೆ.
ವೈರಲ್ ಆಗಿರುವ ಈ ವೀಡಿಯೋ ನಿಜವಾದ ಪೊಲೀಸ್ ಕಾರ್ಯಾಚರಣೆಯದ್ದಲ್ಲ. ಇದು ದಸರಾ ಹಬ್ಬಕ್ಕೂ ಮುನ್ನ ಜಾರ್ಖಂಡ್ನ ಬೊಕಾರೊದಲ್ಲಿ ಪೊಲೀಸರು ನಡೆಸಿದ ಅಣಕು ಪ್ರದರ್ಶನವಾಗಿದೆ.
Also Read: ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ ಎನ್ನುವುದು ನಿಜವೇ?
FAQ ಗಳು
ಪ್ರಶ್ನೆ 1: ವೈರಲ್ ಆಗಿರುವ ಪೊಲೀಸ್ ಕ್ರಮ ವಿಡಿಯೋ ಎಲ್ಲಿಯದ್ದು?
ಈ ವೀಡಿಯೋ ಉತ್ತರಪ್ರದೇಶ ಅಥವಾ ಬಿಹಾರದ್ದಲ್ಲ, ಜಾರ್ಖಂಡ್ನ ಬೊಕಾರೊದಿಂದ ಬಂದಿದೆ.
ಪ್ರಶ್ನೆ 2: ವೀಡಿಯೋ ಏನನ್ನು ತೋರಿಸುತ್ತದೆ?
ಇದು ದಸರಾ 2025 ಕ್ಕೆ ಮುಂಚಿತವಾಗಿ ಬೊಕಾರೊ ಪೊಲೀಸರು ನಡೆಸಿದ ಅಣಕು ಡ್ರಿಲ್ ಅನ್ನು ತೋರಿಸುತ್ತದೆ.
ಪ್ರಶ್ನೆ 3: ಸುಳ್ಳು ಹೇಳಿಕೆಗಳನ್ನು ಹೇಗೆ ಗುರುತಿಸಬಹುದು?
ಅಧಿಕೃತ ಪೊಲೀಸ್ ಅಥವಾ ಜಿಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಪರಿಶೀಲಿಸುವ ಮೂಲಕ, ವೀಡಿಯೊ ಫ್ರೇಮ್ಗಳನ್ನು ರಿವರ್ಸ್ ಸರ್ಚ್ ಮಾಡುವ ಮೂಲಕ ಮತ್ತು ವಿಶ್ವಾಸಾರ್ಹ ಸುದ್ದಿ ಪೋರ್ಟಲ್ಗಳನ್ನು ಪರಿಶೀಲಿಸುವ ಮೂಲಕ.
ಪ್ರಶ್ನೆ 4: ಹಳೆಯ ಅಥವಾ ಸಂಬಂಧವಿಲ್ಲದ ವೀಡಿಯೊಗಳು ಈ ರೀತಿ ವೈರಲ್ ಆಗುವುದು ಏಕೆ?
ಅನೇಕ ಬಳಕೆದಾರರು ಸಂದರ್ಭವನ್ನು ಪರಿಶೀಲಿಸದೆ ಸಂವೇದನಾಶೀಲ ಕ್ಲಿಪ್ಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ದಾರಿತಪ್ಪಿಸುವ ಶೀರ್ಷಿಕೆಗಳು ಅದರ ಪ್ರಸಾರದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ.
Our Sources
YouTube Video By Bokaro Ki Awaaj News, Dated: September 27, 2025
X Post By Bokaro Police, Dated: September 27, 2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
November 20, 2025
Ishwarachandra B G
November 19, 2025
Ishwarachandra B G
November 18, 2025