Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಮದ್ಯದ ಅಮಲಿನಲ್ಲಿ ಬೆಕ್ಕು ಎಂದು ವ್ಯಕ್ತಿ ಹುಲಿಯ ತಲೆ ಸವರಿದ್ದಾನೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “52 ವರ್ಷದ ರಾಜು ಪಟೇಲ್, ಕುಡಿದ ಅಮಲಿನಲ್ಲಿ ಅದನ್ನು ಬೆಕ್ಕು ಎಂದು ತಪ್ಪಾಗಿ ತಿಳಿದು, ರಾತ್ರಿಯಲ್ಲಿ ನಿಜವಾದ ಹುಲಿಯ ತಲೆ ಸವರಿದನು! ಹುಲಿ ಏನೂ ಮಾಡದೆ, ಸುಮ್ಮನೆ ಇತ್ತು. ನಂತರ ಅರಣ್ಯ ಇಲಾಖೆಯು ಹುಲಿಯನ್ನು ಕಾಡಿಗೆ ಹಿಂತಿರುಗಿಸಿತು, ಆದರೆ ರಾಜುವಿಗೆ ಈಗ ಪೊಲೀಸ್ ರಕ್ಷಣೆ ನೀಡಲಾಗಿದೆ” ಎಂಬಂತೆ ಹಾಸ್ಯದ ದಾಟಿಯಲ್ಲಿ ಬರೆಯಲಾಗಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ, ಇದು ಎಐ (ಆರ್ಟಿಪಿಶಿಯಲ್ ಇಂಟೆಲಿಜೆನ್ಸ್) ನಿಂದ ಮಾಡಿದ್ದಾಗಿದೆ ಎಂದು ಕಂಡುಬಂದಿದೆ.
ವಿವಿಧ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಆದರೆ ಅಂತಹ ಘಟನೆಯ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಮಾಧ್ಯಮ ವರದಿಗಳು ಕಂಡುಬಂದಿಲ್ಲ.
ವೈರಲ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಹಲವಾರು ಅಸಹಜ ವಿಚಾರಗಳು ಕಂಡುಬಂದಿವೆ. ಮೊದಲ ಫ್ರೇಮ್ನಲ್ಲಿ ಮನುಷ್ಯನ ಕೈ ಮತ್ತು ಪ್ಯಾಂಟ್ ವಿರೂಪಗೊಂಡಂತೆ ಕಂಡುಬಂದವು, ಆದರೆ ಹುಲಿಯ ಪಂಜವು ಸಹ ಅಸ್ವಾಭಾವಿಕವಾಗಿ ವಿರೂಪಗೊಂಡಂತೆ ಕಂಡುಬಂದಿತು – ಇಂತಹ ದೃಶ್ಯಗಳು ಹೆಚ್ಚಾಗಿ ಎಐ- ರಚಿತ ಚಿತ್ರಣದೊಂದಿಗೆ ಸಂಬಂಧ ಹೊಂದಿವೆ.

ಇನ್ನಷ್ಟು ಪರಿಶೀಲನೆ ನಡೆಸಲು, ನ್ಯೂಸ್ಚೆಕರ್ ಸದಸ್ಯತನ ಹೊಂದಿರುವ ಮಿಸ್ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (MCA) ನ ಡೀಪ್ಫೇಕ್ಸ್ ಅನಾಲಿಸಿಸ್ ಯೂನಿಟ್ (DAU) ಅನ್ನು ನ್ಯೂಸ್ಚೆಕರ್ ಸಂಪರ್ಕಿಸಿದೆ. DAU ಎಐ ಪತ್ತೆ ಸಾಧನಗಳನ್ನು ಬಳಸಿಕೊಂಡು ವೀಡಿಯೋದ ಸ್ಟಿಲ್ಗಳನ್ನು ವಿಶ್ಲೇಷಿಸಿದೆ.



ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಇದು ಎಐನಿಂದ ರಚಿಸಿದ ವೀಡಿಯೋ ಆಗಿದ್ದು, ನಿಜವಾದ್ದಲ್ಲ, ಮದ್ಯದ ಅಮಲಿನಲ್ಲಿ ಬೆಕ್ಕು ಎಂದು ಹುಲಿಯ ತಲೆ ಸವರಿದ ವ್ಯಕ್ತಿ ಎನ್ನುವುದು ಎಐ ರಚಿತವಾದದ್ದು ಎಂದು ಕಂಡುಬಂದಿದೆ.
Also Read: ವಿಶ್ವದ ಅತ್ಯಂತ ಭ್ರಷ್ಟ 10 ಪಕ್ಷಗಳಲ್ಲಿ ಕಾಂಗ್ರೆಸ್ಗೆ ಪ್ರಥಮ ಸ್ಥಾನ ಎಂದ ಬಿಬಿಸಿ, ಇದು ನಿಜವೇ?
Our Sources
DAU Analysis
Self Analysis
(ಈ ವರದಿಯನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
November 24, 2025
Vasudha Beri
November 10, 2025
Vijayalakshmi Balasubramaniyan
November 12, 2025