Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ತಮಿಳುನಾಡು ಕೂನೂರಿನ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಳ್ಳುವ ಮತ್ತು ರೋಗಿಯನ್ನು ಹೊತ್ತೊಯ್ಯುವ ಸ್ಟ್ರೆಚರ್ ರಸ್ತೆಗೆ ಬೀಳುವ ಆಘಾತಕಾರಿ ಘಟನೆ ನಡೆದಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ.
ಸೂಕ್ಷ್ಮವಾಗಿ ಗಮನಿಸಿದಾಗ, ವೈರಲ್ ವೀಡಿಯೋದಲ್ಲಿನ ಹೆದ್ದಾರಿ ಸೈನ್ ರ್ಡ್ಗಳು
“ಟೋವಾ ಬಾಜಾ” ನಂತಹ ಸ್ಥಳಗಳ ಹೆಸರುಗಳನ್ನು ಪ್ರದರ್ಶಿ ಸುತ್ತಿರುವುದನ್ನು ನ್ಯೂಸ್ಚೆಕರ್ ಗಮನಿಸಿತು, ಇದು ಪೋರ್ಟೊ ರಿಕೊದಲ್ಲಿದೆ. ಇದು ಕೂನೂರು ಅಥವಾ ತಮಿಳುನಾಡಿನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.

ವೀಡಿಯೋವು ಅಸ್ವಾಭಾವಿಕವಾಗಿದ್ದು, ಕಾಣುವ ಪರಿಸರ ಸರಿಯಾಗಿಲ್ಲದಿರುವುದು, ದೃಶ್ಯಗಳಲ್ಲಿ ಕೃತಕ ವಿಚಾರಗಳು ಒಟ್ಟಾರೆಯಾಗಿ ಸಂಶಯಕ್ಕೆ ಕಾರಣವಾಯಿತು. ಇದು ಒಟ್ಟಾರೆಯಾಗಿ ಎಐನಿಂದ ಮಾಡಿದ್ದು ಎನ್ನುವುದಕ್ಕೆ ಬಲವಾದ ಸಂಶಯವಾಗಿದೆ.
ಇದನ್ನು ದೃಢೀಕರಿಸಲು, ಕ್ಲಿಪ್ನ ಫ್ರೇಮ್ಗಳನ್ನು ಮೂರು AI-ಪತ್ತೆ ಸಾಧನಗಳಾದ – ಹೈವ್ ಮಾಡರೇಶನ್ , ವಾಸ್ಐಟ್ಎಐ ಮತ್ತು ಸೈಟ್ಇಂಜೈನ್ – ನಲ್ಲಿ ಪರೀಕ್ಷಿಸಲಾಯಿತು – ಇವೆಲ್ಲವೂ ವೀಡಿಯೋವನ್ನು ಎಐ- ರಚಿತವಾಗಿರಬಹುದು ಎಂದು ಸೂಚಿಸಿದವು.


ನಾವು ವೀಡಿಯೋದಲ್ಲಿ “AI ಕ್ರಿಯೋಲ್ಲಾ” ಎಂಬ ವಾಟರ್ಮಾರ್ಕ್ ಅನ್ನು ನೋಡಿದ್ದೇವೆ . ಹುಡುಕಾಟದ ನಂತರ ನವೆಂಬರ್ 3, 2025 ರಂದು ನೆಬ್ಯುಲೊ ಇವಾನ್ ವೆಲೆಜ್ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್ ಸಿಕ್ಕಿತು . ಇದರಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ಶೀರ್ಷಿಕೆಪೋರ್ಟೊ ರಿಕೊದಲ್ಲಿ ನಡೆದ ಆಂಬ್ಯುಲೆನ್ಸ್ ಘಟನೆ ಎಂದು ಹಾಸ್ಯಮಯವಾಗಿ ವಿವರಿಸಿದೆ.

ಈ ಪೇಜ್ ನಲ್ಲಿ “ಎಐ-ನಿಂದ ಮಾಡಿರುವ ವಿಡಂಬನೆಗಳನ್ನು” ನಿರ್ಮಿಸುತ್ತೇವೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ , ಇದು ವಿಷಯದ ನೈಜವಾದ್ದಲ್ಲ ಮತ್ತು ಹಾಸ್ಯದ ಉದ್ದೇಶದ್ದು ಎಂಬುದನ್ನು ದೃಢಪಡಿಸುತ್ತದೆ.
Also Read: ಚಂದ್ರಾಪುರದಲ್ಲಿ ವ್ಯಕ್ತಿಯ ಮೇಲೆ ಹುಲಿ ದಾಳಿ, ವೈರಲ್ ಆಗಿರುವ ವಿಡಿಯೋ ಎಐನಿಂದ ಮಾಡಿದ್ದು!
Our Sources
Instagram post, Nebulo Ivan Velez, dated November 03, 2025
Self analysis
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
November 24, 2025
Vasudha Beri
November 10, 2025
Ishwarachandra B G
November 6, 2025